ದಕ್ಷಿಣ ಭಾರತದ ಜನಪ್ರಿಯ ಚಿತ್ರ ನಟಿ ಸಿತಾರ ಯಾರಿಗ್ ತಾನೆ ಗೊತ್ತಿಲ್ಲ ಹೇಳಿ . ಹಲವಾರು ಭಾಷೆಯಲ್ಲಿ ನಟಿಸಿರುವ ಯಶಸ್ವಿ ಚಿತ್ರಗಳಲ್ಲಿ ನಟಿಸಿರುವ ಇವರು ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜೊತೆ ಹಾಲುಂಡ ತವರು, ಬಂಗಾರದ ಕಲಶದಲ್ಲಿ ಕೂಡ ಇವರು ನಟಿಸಿದ್ರು ಹಾಗು ಇತ್ತೀಚೆಗೆ ಚಿರಂಜೀವಿ ಸರ್ಜಾಗೆ ತಾಯಿಯಾಗಿ ‘ಅಮ್ಮಾ ಐ ಲವ್ ಯೂ’ ಎಂಬ ಚಿತ್ರದಲ್ಲಿಯೂ ನಟಿಸಿದ್ರು ಸಿತಾರಾ.
ನಟಿ ಸಿತಾರ ಅವರಿಗೆ 2010ರಲ್ಲೇ ಮದುವೆಯಾಗಿದೆ ಎಂದು ಸುದ್ಧಿ ಹೊರಬಂತು, ಆದರೆ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ದೊಡ್ಡ ಸತ್ಯವನ್ನು ಬಯಲು ಮಾಡಿದ್ದಾರೆ ಸಿತಾರ “ನನಗೆ ಇನ್ನೂ ಮದುವೆ ಆಗಿಲ್ಲ” ಎಂದು ಸ್ವತಃ ಸಿತಾರ ಅವರೆ ಹೇಳಿದ್ದಾರೆ ಈಗ ಅವರಿಗೆ 45 ವರ್ಷ ಆದರೂ ಇಲ್ಲಿಯವರೆಗೂ ಸಿತಾರ ಯಾಕೆ ಮದುವೆಯಾಗಿಲ್ಲ ಎಂಬ ಪ್ರಶ್ನೆಗೆ ಅವರ ಅಭಿಮಾನಿಗಳಿಗೆ ಉತ್ತರ ಅವರೇ ನೀಡಿದ್ದಾರೆ ತಮ್ಮ ಸ್ನೇಹಿತ ಹಾಗು ತನ್ನ ತಂದೆ ಸಾವಿನ ದುಃಖದಲ್ಲಿದ್ದ ಸಿತಾರ ಅವರಿಗೆ ಇಷ್ಟೆನಾ ಜೀವನ ಅನ್ನುವಂತೆ ಆಗಿತ್ತಂತೆ ಹಾಗಾಗಿ ಅವರು ಮದುವೆಯ ಬಗ್ಗೆ ಯೋಚನೆ ಕೂಡ ಮಾಡಲಿಲ್ಲವಂತೆ.