ಪೂಜಾ ಗಾಂಧಿ ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ಕಾಲಿಟ್ಟ ಈ ನಟಿ ತದನಂತರ ಹೆಚ್ಚಾಗಿ ಯಶಸ್ಸಿನ ಮುಖವನ್ನು ನೋಡಲಿಲ್ಲ. ಮೊದಲ ಚಿತ್ರವೇ ದೊಡ್ಡ ಮಟ್ಟದಲ್ಲಿ ಹಿಟ್ ಆದ ಕಾರಣ ಪೂಜಾ ಗಾಂಧಿ ಅವರಿಗೆ ಸಾಲು ಸಾಲು ಆಫರ್ಗಳು ಬಂದವು ಅದರಲ್ಲಿಯೂ ಹೆಚ್ಚಾಗಿ ಸದ್ದು ಮಾಡಿದ್ದು ದಂಡುಪಾಳ್ಯ ಸಿರೀಸ್. ದಂಡುಪಾಳ್ಯ ನಂತರ ಪೂಜಾ ಗಾಂಧಿ ಅವರ ಯಾವ ಚಿತ್ರವೂ ಸಹ ಅಷ್ಟೇನು ಸದ್ದು ಮಾಡಲಿಲ್ಲ ಪೂಜಾ ಅವರು ಸಿನಿಮಾ ರಂಗದಿಂದ ಕೊಂಚ ದೂರವೇ ಉಳಿದಂತೆ ಇದ್ದಾರೆ.
ಇನ್ನು ಇದೀಗ ಪೂಜಾ ಗಾಂಧಿ ಅವರ ಕುರಿತು ದೊಡ್ಡ ಸುದ್ದಿಯೊಂದು ಹರಿದಾಡುತ್ತಿದ್ದು ಬಾಲಿವುಡ್ ನ ಹೆಸರಾಂತ ನಟ ಸನ್ನಿ ಡಿಯೋಲ್ ಅವರ ಪತ್ನಿ ಪೂಜಾ ಗಾಂಧಿ ಎಂದು ಮಾತನಾಡಿಕೊಳ್ಳಲಾಗುತ್ತಿದೆ. ಅರೇ ಪೂಜಾಗಾಂಧಿ ಅವರಿಗೆ ಮದುವೆಯಾಗಿದೆಯಾ ಅವರು ಅವಿವಾಹಿತೆ ಅಲ್ವಾ ಅಂತ ಎಲ್ಲರೂ ಮೂಗಿನ ಮೇಲೆ ಬೆರಳು ಇಟ್ಟುಕೊಂಡು ಯೋಚಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಗೂಗಲ್ ಹೌದು ಗೂಗಲ್ ನಲ್ಲಿ ನಟ ಸನ್ನಿ ಡಿಯೋಲ್ ಅವರ ಪತ್ನಿ ಎಂದು ಸರ್ಚ್ ಮಾಡಿದರೆ ಪೂಜಾ ಗಾಂಧಿ ಅವರ ಫೋಟೊ ಜೊತೆಗೆ ಪೂಜಾ ಡಿಯೋಲ್ ಎಂದು ಗೂಗಲ್ ತೋರಿಸುತ್ತಿದೆ. ಇನ್ನು ಇದನ್ನು ನೋಡಿದ ಜನ ತುಂಬಾ ಕನ್ಫ್ಯೂಷನ್ ಗೆ ಒಳಗಾಗಿದ್ದಾರೆ.