ಕಾಂಗ್ರೆಸ್ ಹಾಗು ಡಿಕೆಶಿ ನಡುವೆ ಮನಸ್ತಾಪಗಳಿವೆ ಎಂದು ರಾಜಕೀಯ ವಲಯದಲ್ಲಿಮಾತು ಕೇಳಿಬರುತ್ತಿತ್ತು ಆದರೆ ಇದೀಗ ಡಿಕೆಶಿ ಇದ್ದಕ್ಕಿದಂತೆ ನಾಳೆ ಮೈಸೂರು, ನಾಡಿದ್ದು ಮಂಡ್ಯ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ನಂಜನಗೂಡು ನಂಜುಂಡೇಶ್ವರ ದೇಗುಲ, ಸುತ್ತೂರು ಮಠ, ಚಾಮುಂಡಿ ಬೆಟ್ಟ, ರಂಗನಾಥ ಸ್ವಾಮಿ, ನಿಮಿಷಾಂಬ ದೇವಾಲಯ, ಕಾಳಿಕಾಂಬ ದೇವಾಲಯ, ಮದ್ದೂರಮ್ಮ ದೇವಾಲಯಗಳಿಗೆ ಡಿಕೆ ಶಿವಕುಮಾರ್ ಭೇಟಿ ನೀಡಲಿದ್ದಾರೆ.
ಹಾಗು ಶ್ರೀರಂಗಪಟ್ಟಣದ ಟಿಪ್ಪು ಮಸೀದಿಗೆ ಸಹ ಭೇಟಿ ನೀಡಲಿದ್ದು, ರಂಗನಾಥ ಸ್ವಾಮಿ ದೇವರ ದರ್ಶನ ಪಡೆದು ಪೂಜೆ, ಪ್ರಾರ್ಥನೆ ಸಲ್ಲಿಸಲಿದ್ದಾರೆ.