ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅವರ ಅಭಿಮಾನಿಗಳು ಬಾಸ್ ಎಂದೇ ಪ್ರೀತಿಸುತ್ತಾರೆ. ಡಿ ಬಾಸ್ ಅವರಿಗೆ ಅಪಾರವಾದ ಅಭಿಮಾನಿ ಬಳಗ ಇದ್ದು ಅವರ ಹುಟ್ಟುಹಬ್ಬ ಬಂತೆಂದರೆ ಸಾಕು ಅಭಿಮಾನಿಗಳು ಹಬ್ಬದ ರೀತಿ ಆಚರಣೆಯನ್ನು ಮಾಡುತ್ತಾರೆ. ಇನ್ನು ದರ್ಶನ್ ಅವರ ಅಭಿಮಾನಿಗಳು ಡಿ ಬಾಸ್ ಅವರ ಹುಟ್ಟುಹಬ್ಬ ಮಾತ್ರವಲ್ಲದೆ ಅವರ ಪುತ್ರ ವಿನೀಶ್ ಹುಟ್ಟುಹಬ್ಬವನ್ನು ಸಹ ತುಂಬಾ ಅಚ್ಚುಕಟ್ಟಾಗಿ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಆದರೆ ಕಳೆದ ಬಾರಿ ವಿನೀಶ್ ಹುಟ್ಟುಹಬ್ಬದ ದಿನದಂದು ನಡೆಯಬಾರದ ಘಟನೆಯೊಂದು ನಡೆದುಹೋಯಿತು.
ಹೌದು ವಿನೇಶ ಹುಟ್ಟುಹಬ್ಬವನ್ನು ಆಚರಿಸಲು ದರ್ಶನ್ ಅವರ ಅಭಿಮಾನಿಯಾದ ರಾಕೇಶ್ ಅವರು ಬರುತ್ತಿದ್ದ ವೇಳೆ ಅಪಘಾತದಿಂದ ಸಾವನ್ನಪ್ಪಿದ್ದರು. ಹೌದು ರಾಕೇಶ್ ಎಂಬುವವರು ದರ್ಶನ್ ಅವರ ಮಗ ವಿನೀಶ್ ಹುಟ್ಟುಹಬ್ಬಕ್ಕೆ ಬರುವ ಸಂದರ್ಭದಲ್ಲಿ ಅಪಘಾತದಿಂದ ಮೃತರಾದರು , ಇನ್ನು ಮೃತಪಟ್ಟ ರಾಕೇಶ್ ಅವರಿಗೆ ಇಬ್ಬರು ತಂಗಿಯರು ಇತರರು ಈ ಸಂದರ್ಭದಲ್ಲಿ ದರ್ಶನ್ ಅವರು ವಿಷಯ ತಿಳಿದು ಅವರ ಕುಟುಂಬಕ್ಕೆ ಎರಡು ಲಕ್ಷ ರೂ ನೀಡಿದರಂತೆ.. ತದನಂತರ ಮತ್ತೆ ಅವರ ಕುಟುಂಬದವರ ಜೊತೆ ಮಾತನಾಡಿ ಆ ಇಬ್ಬರು ತಂಗಿಯರಿಗೆ ಸಹ ಸ್ವತಃ ನಾನೇ ನಿಂತು ಮದುವೆ ಮಾಡಿಸುತ್ತೇನೆ ಎಂದು ದರ್ಶನ್ ಅವರು ಆಶ್ವಾಸನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮಗನ ಹುಟ್ಟುಹಬ್ಬ ಆಚರಿಸಲು ಬಂದ ಅಭಿಮಾನಿ ಅಪಘಾತದಲ್ಲಿ ಮೃತಪಟ್ಟ ಎಂಬ ಕಾರಣಕ್ಕೆ ಅವರ ತಂಗಿಯ ಮದುವೆಯ ಹೊಣೆ ಹೊತ್ತ ಡಿ ಬಾಸ್ ಅವರಿಗೆ ನಿಜಕ್ಕೂ ಶರಣು..