ಮದುವೆಗೆ ಕೆಲವೇ ಗಂಟೆ ಇರುವಾಗ ಮಂಟಪದ ಹಾಲ್ ನಲ್ಲಿ ನೇತಾಡಿದ ವರನ ಶವ..! ಅಯ್ಯೋ ವಿಧಿಯೇ..

Date:

ಅಲ್ಲೊಂದು ಮದುವೆ ನಡೆಯುತ್ತಿತ್ತು ವರ ಮತ್ತು ವಧು ಕುಟುಂಬದ ಸದಸ್ಯರೆಲ್ಲರೂ ತುಂಬಾ ಕಳಕಳಿಯಿಂದ ಸಂತೋಷ ಪಡುತ್ತಾ ಮದುವೆಯನ್ನು ನಡೆಸಲು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದರು. ಇನ್ನೇನು ಕೆಲವೇ ಗಂಟೆಗಳಲ್ಲಿ ವರ ವಧುವಿಗೆ ತಾಳಿ ಕಟ್ಟುತ್ತಾನೆ ಆ ಸಂದರ್ಭವನ್ನು ಎಲ್ಲರೂ ಕಣ್ತುಂಬಿಕೊಳ್ಳೋಣ ಎಂದು ಕಾಯುತ್ತಾ ಇರುವಂತಹ ಸಂದರ್ಭದಲ್ಲಿ ನಡೆಯಬಾರದ ಘಟನೆಯೊಂದು ನಡೆದುಹೋಯಿತು. ಹೌದು ಇನ್ನೇನು ಕೆಲವೇ ನಿಮಿಷಗಳಲ್ಲಿ ತಾಳಿ ಕಟ್ಟಬೇಕಿದ್ದ ವರ ಸಂದೀಪ್ ಮಂಟಪದ ನಡುವೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಘಟನೆ ನಡೆದಿರುವುದು ತೆಲಂಗಾಣದ ಮೆಡ್ಚಲ್ ಜಿಲ್ಲೆಯಲ್ಲಿರುವ ಕೊಂಪಲ್ಲಿ ನಗರದ ಒಂದು ಫಂಕ್ಷನ್ ಹಾಲ್ ನಲ್ಲಿ.. ಹೈದರಾಬಾದ್ ನ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸಂದೀಪ್ ಗೆ ಮದುವೆ ನಿಶ್ಚಯವಾಗಿತ್ತು. ಇನ್ನೇನು ಕೆಲವೇ ಗಂಟೆಗಳಲ್ಲಿ ನಡೆಯಬೇಕಿದ್ದ ಮದುವೆ ಫಂಕ್ಷನ್ ಹಾಲ್ ನಲ್ಲಿಯೇ ಸಂದೀಪ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ಇದನ್ನು ಕಂಡ ವರನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಆತ್ಮಹತ್ಯೆಗೆ ನಿಖರವಾದ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ ಮತ್ತು ವರನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Share post:

Subscribe

spot_imgspot_img

Popular

More like this
Related

ರಣಜಿ ಟ್ರೋಫಿ ಫೈನಲ್: ಕರ್ನಾಟಕಕ್ಕೆ ತವರಿನಲ್ಲಿ ಸೋಲು, ಜಮ್ಮು-ಕಾಶ್ಮೀರ ಚೊಚ್ಚಲ ಚಾಂಪಿಯನ್

ರಣಜಿ ಟ್ರೋಫಿ ಫೈನಲ್: ಕರ್ನಾಟಕಕ್ಕೆ ತವರಿನಲ್ಲಿ ಸೋಲು, ಜಮ್ಮು-ಕಾಶ್ಮೀರ ಚೊಚ್ಚಲ ಚಾಂಪಿಯನ್ ಧಾರವಾಡ:...

ಹಣೆಬರಹದಲ್ಲಿ ಇದ್ದರೆ ಅಣ್ಣ ಸಿಎಂ ಆಗುತ್ತಾರೆ: ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿಕೆ

ಹಣೆಬರಹದಲ್ಲಿ ಇದ್ದರೆ ಅಣ್ಣ ಸಿಎಂ ಆಗುತ್ತಾರೆ: ಮಾಜಿ ಸಂಸದ ಡಿ.ಕೆ. ಸುರೇಶ್...

ತೆರೆಮೇಲೆ ಜೋಡಿ, ಬದುಕಲ್ಲೂ ಜೋಡಿ: ರಾಣವ್ ಗೌಡ-ರಾಧಾ ಭಗವತಿ ನಿಶ್ಚಿತಾರ್ಥ!

ತೆರೆಮೇಲೆ ಜೋಡಿ, ಬದುಕಲ್ಲೂ ಜೋಡಿ: ರಾಣವ್ ಗೌಡ-ರಾಧಾ ಭಗವತಿ ನಿಶ್ಚಿತಾರ್ಥ! ತೆರೆಮೇಲೆ ನಟಿಸುವಾಗ...

ಮಾನಸಿಕ ಖಿನ್ನತೆಗೆ ಒಳಗಾಗಿ ವೈದ್ಯ ಮಾತ್ರೆ ಸೇವಿಸಿ ಆತ್ಮಹತ್ಯೆ!

ಮಾನಸಿಕ ಖಿನ್ನತೆಗೆ ಒಳಗಾಗಿ ವೈದ್ಯ ಮಾತ್ರೆ ಸೇವಿಸಿ ಆತ್ಮಹತ್ಯೆ! ಮಂಡ್ಯ: ಮಾನಸಿಕ ಖಿನ್ನತೆಯಿಂದ...