ಬಾಲಿವುಡ್ನ ಸ್ಟಾರ್ ನಟ ಅಕ್ಷಯ್ ಕುಮಾರ್ ಅಭಿನಯದ ಮುಂದಿನ ಚಿತ್ರ ಬೆಲ್ ಬಾಟಮ್ ಮುಂದಿನ ವರ್ಷ ಜನವರಿ ರಂದು ತೆರೆಗೆ ಬರಲಿದೆ ಎಂಬ ವಿಷಯವನ್ನು ಅವರೇ ಸ್ವತಃ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹೇಳಿಕೊಂಡಿದ್ದರು. ಎಂಬತ್ತರ ದಶಕದ ಮಾದರಿಯ ಸೂಟು ಬೂಟು ಉತ್ತರಿಸಿದ್ದ ಪೋಸ್ಟರ್ ಒಂದನ್ನು ಬೆಲ್ ಬಾಟಮ್ ಚಿತ್ರತಂಡ ಬಿಡುಗಡೆ ಮಾಡಿತ್ತು. ಇನ್ನು ಅಕ್ಷಯ್ ಕುಮಾರ್ ಅವರು ಸಹ ಈ ಚಿತ್ರದ ಕುರಿತು ಕೆಲವೊಂದಷ್ಟು ಸಂಗತಿಗಳನ್ನು ತಿಳಿಸಿಕೊಟ್ಟಿದ್ದರು. ಎಂಬತ್ತರ ದಶಕದಲ್ಲಿ ನಡೆಯುವ ಘಟನೆ ಕುರಿತು ಈ ಚಿತ್ರ ಇರುತ್ತದೆ ಎಂಬುದನ್ನು ಅಕ್ಷಯ್ ಕುಮಾರ್ ಅವರು ತಿಳಿಸಿದರು.
ಇನ್ನು ಇದನ್ನೆಲ್ಲಾ ನೋಡಿದ ಸಿನಿ ಪ್ರೇಕ್ಷಕರು ಈ ವರ್ಷ ಚಂದನವನದಲ್ಲಿ ತೆರೆಕಂಡು ಭರ್ಜರಿ ಯಶಸ್ಸು ಕಂಡ ರಿಷಬ್ ಶೆಟ್ಟಿ ಅಭಿನಯದ ಮತ್ತು ಜಯತೀರ್ಥ ನಿರ್ದೇಶನದ ಬೆಲ್ ಬಾಟಂ ಚಿತ್ರದ ರೀಮೇಕ್ ಅನ್ನು ಅಕ್ಷಯ್ ಕುಮಾರ್ ಅವರು ಮಾಡುತ್ತಿದ್ದಾರೆ ಎಂದು ಮಾತನಾಡಿಕೊಳ್ಳಲು ಆರಂಭಿಸಿದರು. ಹೌದು ಕನ್ನಡದ ಬೆಲ್ ಬಾಟಂ ಚಿತ್ರವನ್ನೇ ಹಿಂದಿಯಲ್ಲೂ ಸಹ ಬೆಲ್ ಬಾಟಮ್ ಆಗಿ ರೀಮೇಕ್ ಮಾಡಲಾಗುತ್ತಿದೆ ಎಂಬ ಸುದ್ದಿ ಹರಿದಾಡತೊಡಗಿತು.
ಇನ್ನು ಅಭಿಮಾನಿಯೊಬ್ಬರು ಟ್ವಿಟ್ಟರ್ನಲ್ಲಿ ಇದು ರೀಮೇಕಾ ಎಂದು ಅಕ್ಷಯ್ ಕುಮಾರ್ ಅವರಿಗೆ ಕೇಳಿದಾಗ ಟ್ವಿಟ್ಟರ್ ಮುಖಾಂತರ ಅವರು ಇದು ಯಾವ ಚಿತ್ರದ ರೀಮೇಕ್ ಕೂಡ ಅಲ್ಲ ಇದೊಂದು ಅಪ್ಪಟ ಸ್ವಮೇಕ್.. ಎಂಬತ್ತರ ದಶಕದಲ್ಲಿ ನಡೆದ ನೈಜ ಘಟನೆಗಳ ಆಧಾರಿತ ಸಿನಿಮಾ ಅಷ್ಟೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ.