ಕಿರಿಕ್ ಬೆಡಗಿಯ ವರ್ಕೌಟ್ ಹಿಂದಿನ ಶಕ್ತಿ ಯಾರು ಗೊತ್ತಾ? ರಶ್ಮಿಕಾ ಬಿಚ್ಚಿಟ್ಟ ಸೀಕ್ರೇಟ್..!

Date:

ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. 2016ರಲ್ಲಿ ತೆರಕಂಡ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿ ಜರ್ನಿ ಆರಂಭಿಸಿದ ರಶ್ಮಿಕಾ ಇವತ್ತು ಟಾಲಿವುಡ್ ನ ಟಾಪ್ ಹೀರೋಯಿನ್ ಕೂಡ ಹೌದು.

ಕಿರಿಕ್ ಪಾರ್ಟಿ ಆದ ಮೇಲೆ ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಚಮಕ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಅಂಜನೀಪುತ್ರ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಹೀಗೆ ಒಂದಿಷ್ಟು ಸಿನಿಮಾಗಳಲ್ಲಿ ಮಿಂಚಿದರು. ಟಾಲಿವುಡ್ ನ ಗೀತಾಗೋವಿಂದಂ, ಡಿಯರ್ ಕಾಮ್ರೇಡ್ ಮೊದಲಾದ ಚಿತ್ರಗಳಲ್ಲಿ ‌ಕೊಡಗಿನ ಈ ಸುಂದರಿ ಅಭಿನಯಿಸಿದ್ದಾರೆ. ಕನ್ನಡದ ನಟಿಯೊಬ್ಬರು ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿರುವುದು ಹೆಮ್ಮೆಯ ವಿಷಯ.
ಸದ್ಯ ಈ ರಶ್ಮಿಕಾ ಮಂದಣ್ಣ ವರ್ಕೌಟ್ ಮಾಡುತ್ತಿರುವ ವಿಡಿಯೋ ಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಈ ವೀಡಿಯೋಗಳನ್ನು ನೋಡಿ ಅಭಿಮಾನಿಗಳಯ ಫಿದಾ ಆಗಿದ್ದಾರೆ.


ಅಂದಹಾಗೆ ರಶ್ಮಿಕಾ ಪ್ರತಿದಿನ ಮಿನಿಮಮ್ ಒಂದು ಗಂಟೆ ವರ್ಕೌಟ್ ಮಾಡುತ್ತಾರಂತೆ. ಅದೆಷ್ಟೇ ಕೆಲಸವಿದ್ದರೂ ವರ್ಕೌಟ್ ಮಾಡುವುದನ್ನು ಮಾತ್ರ ತಪ್ಪಿಸುವುದಿಲ್ಲ. ನಾನು ಇಷ್ಟೊಂದು ವರ್ಕೌಟ್ ಮಾಡೋಕೆ, ಇಷ್ಟೊಂದು ಫಿಟ್ ಆಗಿರೋಕೆ ಕಾರಣ ನಮ್ಮ ತಂದೆ ಮಂದಣ್ಣ.‌ ನಾನು ನಟಿ ಆಗುವುದಕ್ಕಿಂತ ಮೊದಲೇ ಅವರು ನನ್ನ ಬಳಿ ಫಿಟ್ನೆಸ್ ಬಗ್ಗೆ ಮಾತನಾಡುತ್ತಿದ್ದರು. ಹೆಣ್ಣು ಮಕ್ಕಳು ಪುರುಷರಿಗೆ ಯಾವುದರಲ್ಲೂ ಕಡಿಮೆ ಇರಬಾರದು. ಹಾಗಾಗಿ ನೀನು ಯಾವಾಗಲೂ ಫಿಟ್ ಅಂಡ್ ಫೈನ್ ಆಗಿ ಇರಬೇಕು ಎಂದು ಹೇಳಿದ್ದರು. ನಿನಗೆ ಯಾವುದೇ ಬೇಸರವಿದ್ದರೂ ವರ್ಕೌಟ್ ಮಾಡಿದರೆ ಅವೆಲ್ಲಾ ಕಡಿಮೆ ಆಗುತ್ತದೆ. ಈಗ ನಾನು ಸಿನಿಮಾ ನಟಿ ಆದಮೇಲೆ ಅವೆಲ್ಲಾ ಉಪಯೋಗಕ್ಕೆ ಬರುತ್ತಿವೆ.
ವರ್ಕೌಟ್ ಮಾಡಿ ಬೆವರಿಳಿಸುವ ಮೂಲಕ ನಕಾರಾತ್ಮಕ ಚಿಂತನೆಗಳಿಂದ ಹೊರಬರಬಹುದು. ಪ್ರತಿಯೊಂದು ಪಾತ್ರಕ್ಕೂ ಅದಕ್ಕೆ ತಕ್ಕಂತೆ ನಾನು ತಯಾರಾಗುತ್ತೇನೆ. ಅಭ್ಯಾಸ ಮಾಡಿ ಸಾಧಿಸುತ್ತೇನೆ ಎಂದಿದ್ದಾರೆ.
ಸದ್ಯ ಕಿರಿಕ್ ಸುಂದರಿ ರಶ್ಮಿಕಾ ಮಹೇಶ್ ಬಾಬು ನಟನೆಯ ಸರಿಲೇರು ನೀಕೆವ್ವರು , ನಿತಿನ್ ನಟನೆಯ ಭೀಷ್ಮ,ತಮಿಳಿನಲ್ಲಿ ಕಾರ್ತಿಕ್ ಅವರೊಡನೆ ಸುಲ್ತಾನ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಸಾಸಿವೆ ಎಂದಾಕ್ಷಣ ಮನಸ್ಸಿನಲ್ಲಿ...

ನವರಾತ್ರಿಯ ಮೂರನೇ ದಿನ ದೇವಿ ಚಂದ್ರಘಂಟಾ !

ನವರಾತ್ರಿಯ ಮೂರನೇ ದಿನದಲ್ಲಿ ಪೂಜಿಸುವ ದೇವಿ ಚಂದ್ರಘಂಟಾ. ದೇವಿ ಚಂದ್ರಘಂಟಾ ಹೇಗಿದ್ದಾಳೆ...

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...