ಉಪಚುನಾವಣೆ ಯಲ್ಲಿ ಸೋಲುವ ಭೀತಿಯಿಂದಾಗಿ ವಿಚಲಿತವಾಗಿರುವ ಬಿಜೆಪಿ ಏನು ಮಾಡಬೇಕೆಂದು ತಿಳಿಯದೇ ಕಾಂಗ್ರೆಸ್ ಅಭ್ಯರ್ಥಿ ಮನೆ ಮೇಲೆ ಐಟಿ ದಾಳಿ ಮಾಡಿಸಿದೆ ಎಂದು ಕೆಪಿಸಿಸಿ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಟ್ವೀಟರ್‍ನಲ್ಲಿ ಪ್ರತಿಕ್ರಿಯಿಸಿದ ಕರ್ನಾಟಕ ಕಾಂಗ್ರೆಸ್ ಘಟಕ, ಬಿಜೆಪಿಯ ಮುಂಚೂಣಿ ಘಟಕಗಳು ಕೆಲಸ ಮಾಡುವ ರೀತಿ ಆದಾಯ ತೆರಿಗೆ ಇಲಾಖೆ ಕೆಲಸ ಮಾಡುತ್ತಿದೆ.
ಚುನಾವಣೆ ಸಮಯದಲ್ಲಿ ಕೇವಲ ಕಾಂಗ್ರೆಸ್ ನಾಯಕರ ಮನೆ ಮೇಲಷ್ಟೆ ದಾಳಿ ಮಾಡುತ್ತಿದೆ. ನಾಳೆ ನಡೆಯುವ ಉಪ ಚುನಾವಣೆಯಲ್ಲಿ ಬಿಜೆಪಿಗೆ ಯಾರೂ ಮತವನ್ನು ಹಾಕದೆ ಅವರಿಗೆ ಪಾಠವನ್ನು ಕಲಿಸಬೇಕು ಎಂದು ಕೆಪಿಸಿಸಿ ಕಾರ್ಯಕರ್ತರಲ್ಲಿ ಹೇಳಿಕೊಂಡು ಆಕ್ರೊಶ ವ್ಯಕ್ತ ಪಡಿಸಿದರು .