ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ರಾಜ್ಯದಲ್ಲಿ ತೀವ್ರ ಆಕ್ರೊಶ ವೆಕ್ತವಾಗುತ್ತಿದೆ ಇದರ ಬೆನ್ನಲ್ಲೆ ಒಬ್ಬರಮೇಲೊಬ್ಬರು ಹೇಳಿಕೆಗಳನ್ನು ಕೊಟ್ಟುಕೊಂಡು ಒಡಾಡುತ್ತಿದ್ದಾರೆ ಹಾಗೆ ಬಿಜೆಪಿಯ ತೇಜಸ್ವಿಸೂರ್ಯ ಕೂಡ ಪೌರತ್ವ ಕಾಯ್ದೆ ವಿರೋಧಿಸುವವರ ಬಗ್ಗೆ ಹೇಳಿಕೆಗಳನ್ನು ನೀಡಿದ್ದರು ಇದಕ್ಕೆ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಕೆ.ಹೆಚ್. ಮುನಿಯಪ್ಪ, ಶಾಸಕ ರಿಜ್ವಾನ್ ಅರ್ಷದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಡವರು, ಶ್ರಮಿಕರು ಬಗ್ಗೆ ತೇಜಸ್ವಿ ಸೂರ್ಯ ನಿಂದನೆಯ ಮಾತುಗಳನ್ನು ಆಡಿದ್ದಾರೆ. ದೇಶದಲ್ಲಿ ರಾಷ್ಟ್ರಪತಿಗೆ ಸಾಮಾನ್ಯ ಪ್ರಜೆಗೂ ಒಂದೇ ಕಾನೂನು, ಒಂದೇ ಓಟು. ಶಿಕ್ಷಣ, ಕೆಲಸವಿಲ್ಲದ ಕಾರಣ ಬಡವರು, ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಪಂಕ್ಚರ್ ಹಾಕುವುದು, ಕಸ ಗುಡಿಸುವುದು ಸೇರಿ ನಾನಾ ಕೆಲಸಗಳನ್ನು ಮಾಡಿ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಇಂತವರ ಬಗ್ಗೆ ಎಲ್ಲಾ ಇಲ್ಲದ ಸಲ್ಲದಹೇಳಿಕೆಗಳನ್ನುನೀಡುವುದು ಸರಿ ಅಲ್ಲಾ ಎಂದು ಅವರ ವಿರುದ್ದ ಕಿಡಿಕಾರಿದ್ದಾರೆ.