ಮಂಗಳೂರಿನಲ್ಲಿ ನೆಡೆದ ಗೋಲಿಬಾರ್ ಬಗ್ಗೆ ಮಾತನಾಡುತ್ತ ಯಡಿಯೂರಪ್ಪ ಅವರ ಸರ್ಕಾರದ ಮೇಲೆ ಕಿಡಿಕಾರಿದ ಯುಟಿ ಖಾದರ್ ಅವರು ಮಂಗಳೂರಿನಲ್ಲಿ ಯಾವುದೇ ಸಮಸ್ಯೆ ಇಲ್ಲದೇ ನಿಷೇಧಾಜ್ಞೆಯನ್ನು ಯಾರು, ಯಾಕೆ ಜಾರಿ ಮಾಡಿದರು ಎನ್ನುವ ಮಾಹಿತಿಯೂ ಮುಖ್ಯಮಂತ್ರಿಗಿಲ್ಲ. ಯಾರೂ, ಯಾರ ಹಿಡಿತದಲ್ಲೂ ಇಲ್ಲ ದಂತಾಗಿದೆ .
ಮಂಗಳೂರಿನಲ್ಲಿ ಪೊಲೀಸ್ ದೌರ್ಜನ್ಯ, ಗೋಲಿಬಾರ್‌ಗೆ ಇಬ್ಬರು ವ್ಯಕ್ತಿಗಳು ಬಲಿಯಾಗಿದ್ದಾರೆ. ಕೇಂದ್ರ, ರಾಜ್ಯ ಬಿಜೆಪಿ ಸರಕಾರಗಳ ವೈಫಲ್ಯವೇ ಇದಕ್ಕೆ ಕಾರಣ. ಬಿಜೆಪಿ ಸರಕಾರ ದೇಶದ ಜನರ ವಿರುದ್ಧದ ದೌರ್ಜನ್ಯವನ್ನ ಕೈಬಿಡಲಿ.ಕೂಡಲೇ ಗೋಲಿಬಾರ್ ಘಟನೆಯನ್ನು ನ್ಯಾಯಾಂಗ ತನಿಖೆಗೆ ವಹಿಸಲಿ ಎಂದು ಖಾದರ್ ಒತ್ತಾಯಿಸಿದರು.