ನಿಮಗಿದು ಗೊತ್ತಿದ್ಯಾ..! ನಮ್ಮ ದೇಹದ ಮೇಲಿನ ಮಚ್ಚೆ ನಮ್ಮ ವ್ಯಕ್ತಿತ್ವವನ್ನು ತಿಳಿಸುತ್ತೆ..! ಭವಿಷ್ಯವನ್ನು ಹೇಳುತ್ತೆ..! ಹಾಗದ್ರೆ ಮಚ್ಚೆ ಫಲ ನೋಡ್ಲೇ ಬೇಕಲ್ವಾ..? ಸರಿ, ನಿಮಗೆ ಮಚ್ಚೆ ಎಲ್ಲಿದೆ ನೋಡ್ಕೊಂಡು ಈ ಸ್ಟೋರಿ ಓದಿ..!
ನೆತ್ತಿಯಲ್ಲಿದ್ದರೆ ಮಚ್ಚೆ : ನೆತ್ತಿಯ ಮೇಲೆ ಮಚ್ಚೆ ಇದ್ರೆ.. ಅವತಷ್ಟು ಅದೃಷ್ಟಶಾಲಿಗಳು ಮತ್ತೊಬ್ಬರಿಲ್ಲ. ಆದರೆ, ಬಲಭಾಗದಲ್ಲಿರಬೇಕು..! ಬಲ ಭಾಗದ ನೆತ್ತಿಯಲ್ಲಿದ್ದರೆ ಲಕ್ಷ್ಮಿ ಒಲಿಯುತ್ತಾಳೆ. ಎಡಭಾಗದಲ್ಲಿದ್ದಲ್ಲಿ ಕಷ್ಟಗಳು ಬರುತ್ತವಂತೆ.
ಮಚ್ಚೆ ಹಣೆಯಲ್ಲಿದ್ದರೆ : ಮಚ್ಚೆ ಹಣೆಯ ಮೇಲೆ ಅದರಲ್ಲೂ ಬಲಭಾಗದಲ್ಲಿದ್ರೆ ನಿಮ್ಮಂತಹ ಅದೃಷ್ಟವಂತರು ಯಾರೂ ಇಲ್ಲ ಅನ್ಕೊಳ್ಳಿ..!ಲೈಫಲಿ ತುಂಬಾ ಶ್ರೀಮಂತ ವ್ಯಕ್ತಿಯಾಗಿ ಬೆಳಿತೀರಿ.
ಮೂಗಿನ ಮೇಲೆ : ಮೂಗಿನ ಮೇಲೆ ಮಚ್ಚೆ ಇದ್ದವರು ಪ್ರವಾಸ ಪ್ರಿಯರು. ಜೊತೆಗೆ ಕೋಪಿಷ್ಟರೂ ಸಹ ಹೌದು.
ನಾಲಿಗೆಯಲ್ಲಿ ಮಚ್ಚೆ ಇದ್ದರೆ : ನಾಲಿಗೆಯಲ್ಲಿ ಮಚ್ಚೆ ಇದ್ದರೆ.. ಅವರು ಹೇಳಿದಂತೆ ಆಗುತ್ತದೆ ಎಂಬ ನಂಬಿಕೆಯಿದೆ. ಅಷ್ಟೇ ಅಲ್ಲದೆ ಅವರು ಒಳ್ಳೆಯ ಮಾತುಗಾರರೂ ಆಗಿರುತ್ತಾರೆ. ಕೆಲವೊಮ್ಮೆ ಜಗಳಗಂಟರೂ ಹೌದು.
ಹುಬ್ಬಿನ ಕೆಳಗಿನ ಮಚ್ಚೆ : ನಿಮ್ಮ ಕಣ್ ಹುಬ್ಬಿನ ಕೆಳಗೆ ಮಚ್ಚೆ ಇದ್ಯಾ? ನೀವು ತುಂಬಾ ಬುದ್ಧಿವಂತರು..! ನಿಮ್ಮ ಬಗ್ಗೆ ನೀವು ಹೆಮ್ಮೆಪಡಿ, ನೀವು ಸೃಜನಶೀಲರು.
ತುಟಿಯ ಮೇಲ್ಭಾಗದಲ್ಲಿ : ನಿಮ್ಮ ತುಟಿಯ ಸ್ವಲ್ಪ ಮೇಲ್ಗಡೆ ಮಚ್ಚೆ ಇರೋರು ನೋಡೋಕೆ ಸಖತ್ತಾಗಿರ್ತೀರಿ. ಸುಂದರ/ರಿ ಆಗಿರ್ತೀರಿ. ಹೆಣ್ಮಕ್ಕಳು ಸಂಸಾರ ನಡೆಸೋ ತಾಕತ್ತಿರುತ್ತೆ..! ಎಂಥಾ ದೊಡ್ಡ ಸಂಸಾರ ನಿಭಾಯಿಸ ಬಲ್ಲಿರಿ.
ತುಟಿ ಮೇಲೆಯೇ ಮಚ್ಚೆ ಇದ್ರೆ : ಇವರು ಹೃದಯವಂತರು. ನಿಷ್ಕಲ್ಮಶ ಮನಸ್ಸಿನವರು. ಈ ಗುಣವೇ ಕೆಲವೊಮ್ಮೆ ಇವರಿಗೆ ಮುಳುವಾಗುತ್ತೆ. ಕೆಳ ತುಟಿಯಲ್ಲಿ ಮಚ್ಚೆ ಇದ್ದವರು ಭೋಜನ ಪ್ರಿಯರು.
ಬಲ ಕೆನ್ನೆ ಮೇಲಿನ ಮಚ್ಚೆ : ಬಲ ಕೆನ್ನೇಲಿ ಮಚ್ಚೆ ಇದ್ರೆ ಸಂಪತ್ತು ಮತ್ತು ಅದೃಷ್ಟದ ಸಂಕೇತ. ಸಖತ್ ಆಸ್ತಿ ಮಾಡುವ ಯೋಗ ನಿಮ್ಮದು. ಜೊತೆಗೆ ನೀವು ತುಂಬಾ ಸೂಕ್ಷ್ಮ ಮನಸ್ಸಿನವರು.
ಎಡಗೆನ್ನೆ ಮೇಲಿನ ಮಚ್ಚೆ : ಇದು ಸಾಕಷ್ಟು ತೊಂದರೆಗಳನ್ನು ಅನುಭವಿಸ್ತೀರ ಅಂತ ಹೇಳುತ್ತಂತೆ. ಅಹಂಕಾರಿಗಳು ಅಂತಾರೆ. ಇನ್ನು ಕೆಲವರು ಹುಡುಗರಿಗೆ ಬಲ ಭಾಗದ ಮಚ್ಚೆ ಹೇಗೆ ಒಳ್ಳೇದೋ ಅದೇ ರೀತಿ ಹೆಣ್ಮಕ್ಕಳಿಗೆ ಎಡಭಾಗದ ಮಚ್ಚೆ ಒಳ್ಳೇದು ಅಂತಾರೆ.
ಪಾದದಲ್ಲಿ ಮಚ್ಚೆ ಇದ್ರೆ : ಪಾದದಲ್ಲಿ ಮಚ್ಚೆ ಇರೋರು ಸುಮ್ನೆ ಕೂರುವ ಜಾಯಮಾನದವರಲ್ಲ.. ಸದಾ ತಿರುಗಾಟ ಇಷ್ಟ ಪಡ್ತಾರೆ. ಪ್ರವಾಸ ಪ್ರಿಯರು.
ಹಸ್ತದಲ್ಲಿ ಮಚ್ಚೆ ಇದ್ರೆ : ಹಸ್ತದಲ್ಲಿ ಮಚ್ಚೆ ಇದ್ರೆ ಇವರು ಮುಟ್ಟಿದ್ದೆಲ್ಲಾ ಚಿನ್ನ. ಏನೇ ಮಾಡಿದ್ರು ಯಶಸ್ಸು ಸಿಗುತ್ತೆ ಅಂತ ಹೇಳ್ತಾರೆ.
ಬಲ ಕಣ್ಣಿನಲ್ಲಿ : ಬಲ ಕಣ್ಣಿನ ಬಿಳಿಭಾಗದಲ್ಲಿದ್ದಲ್ಲಿ ಮಚ್ಚೆ ಇದ್ದರೆ ಹೆಚ್ಚು ಹಣಗಳಿಸ್ತಾರೆ, ಎಡಗಣ್ಣಿನ ಬಿಳಿಭಾಗದಲ್ಲಿ ಇದ್ದರೆ ಸೊಕ್ಕು ಜಾಸ್ತಿಯಂತೆ.
ಗಲ್ಲದ ಮೇಲಿನ ಮಚ್ಚೆ : ಗಲ್ಲದ ಮೇಲೆ ಮಚ್ಚೆ ಇದ್ದವರಿಗೆ ಸುಲಭದಲ್ಲಿ ಯಶಸ್ಸು ಸಿಗುತ್ತೆ. ಒಳ್ಳೆಯ ಸ್ಥಾನ-ಮಾನ ಲಭ್ಯವಾಗುತ್ತೆ.
ಕುತ್ತಿಗೆಯಲ್ಲಿ ಮಚ್ಚೆ : ಕುತ್ತಿಗೆ ಹಿಂಭಾಗದಲ್ಲಿ ಮಚ್ಚೆ ಇದ್ರೆ ಸಾಧಾರಣ ಜೀವನ ಶೈಲಿ ಇವರದ್ದಾಗಿರುತ್ತೆ. ಕುತ್ತಿಗೆ ಮುಂಭಾಗದಲ್ಲಿದ್ದರೆ ಅದೃಷ್ಟ ಎಂಬುದು ಅನಿರೀಕ್ಷಿತವಾಗಿ ಇವರಿಗೆ ಬರುತ್ತಿರುತ್ತಂತೆ.