ಸೌಂದರ್ಯ ಜೊತೆ ಸಂಬಂಧವಿತ್ತು ಅಂತ ಗರಂ ಆದ ನಟ ಜಗಪತಿ ಬಾಬು..!
ಸೌಂದರ್ಯ … ಹೆಸರಿಗೆ ತಕ್ಕಂತೆ ಚಂದದ ಚೆಲುವೆ … ಅತ್ಯಂತ ಅಲ್ಪಾವಧಿಯಲ್ಲಿ ಮಿಂಚಿ ಮರೆಯಾದ ಸ್ಪುರದ್ರುಪಿ ನಟಿ . ಕನ್ನಡ ಮತ್ತು ತೆಲುಗು ಸಿನಿರಂಗದಲ್ಲಿ ತನ್ನದೇಯಾದ ಛಾಪು ಮೂಡಿಸಿದ್ದ ಅಭಿನಯ ಚತುರೆ .
ಸ್ಯಾಂಡಲ್ ವುಡ್, ಟಾಲಿವುಡ್ ನಲ್ಲಿ ಬಹು ಬೇಡಿಕೆ ಹೊಂದಿದ್ದ ಸೌಂದರ್ಯ 2004 ರಲ್ಲಿ ಬಾರದ ಲೋಕಕ್ಕೆ ಹೋದರು . ಸೌಂದರ್ಯ ಅಗಲಿ 16 ವರ್ಷಗಳೇ ಉರುಳಿದರೂ ಆಕೆಯ ನೆನಪು ಮಾತ್ರ ಮಾಸಿಲ್ಲ . ಇಂದಿಗೂ ಚಿತ್ರರಂಗ ಮತ್ತು ಚಿತ್ರಪ್ರೇಮಿಗಳು ಮತ್ತು ಆಕೆಯ ಅಭಿಮಾನಿಗಳು ಸದಾ ನೆನೆಯುತ್ತಿರುತ್ತಾರೆ .
‘ ರೈತು ಭಾರತಂ ‘ ಎಂಬ ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿಕೊಟ್ಟ ಸೌಂದರ್ಯ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಜೊತೆ ಹಿಂದಿ ಸಿನಿಮಾದಲ್ಲೂ ನಟಿಸಿದ್ದರು . ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ಕನ್ನಡದ ಸೂಪರ್ ಹಿಟ್ ಸಿನಿಮಾ ‘ ಆಪ್ತಮಿತ್ರ ‘ ಸೌಂದರ್ಯ ಅವರ ಕೊನೆಯ ಸಿನಿಮಾ .
ಸೌಂದರ್ಯ ಬಾರದ ಲೋಕಕ್ಕೆ ಹೋಗಿದ್ದರೂ ಜನಪ್ರಿಯ ಖಳನಟ ಜಗಪತಿ ಬಾಬು ಜೊತೆ ಸಂಬಂಧ ಹೊಂದಿದ್ದರು ಎಂಬ ಬೇಡ ಅಂತೆ ಕಂತೆಗಳು, ವದಂತಿಗಳು ಹರಿದಾಡುತ್ತಲೇ ಇವೆ . ಈ ಬಗ್ಗೆ ಕೆಲವರಿಂದ ಮತ್ತೆ ಮತ್ತೆ ವದಂತಿ ಹಬ್ಬುತ್ತಲೇ ಇದೆ .
ಈ ಎಲ್ಲದರ ಬಗ್ಗೆ ಜಗಪತಿ ಬಾಬು ಮೌನ ಮುರಿದಿದ್ದಾರೆ . ಸೌಂದರ್ಯ ಮತ್ತು ನಮ್ಮ ನಡುವೆ ಕೇಳಿ ಬರುತ್ತಿರುವ ವದಂತಿಗಳಿಗೆ ತಿಲಾಂಜಲಿ ಬಿಡುವ ಪ್ರಯತ್ನ ಮಾಡಿದ್ದಾರೆ . ಅಂತೆ-ಕಂತೆ ಸ್ಟೋರಿಗಳ ಬಗ್ಗೆ ತುಟಿ ಬಿಚ್ಚಿದ್ದಾರೆ, ಸ್ಪಷ್ಟನೆ ನೀಡಿದ್ದಾರೆ .
ಇತ್ತೀಚೆಗೆ ಮಾಧ್ಯಮಗಳ ಸಂವಾದದಲ್ಲಿ ಮಾತಾನಾಡುತ್ತಾ ಜಗಪತಿ ಬಾಬು ಸೌಂದರ್ಯ ಬಗ್ಗೆ ಮನ ಬಿಚ್ಚಿ ಮಾತನಾಡಿದರು . ತಮ್ಮ ಮತ್ತು ಸೌಂದರ್ಯ ವಿರುದ್ಧದ ಗಾಸಿಫ್ ಗೆ ಎಳ್ಳು ನೀರು ಬಿಡುವ ಕೆಲಸ ಮಾಡಿದರು . ಮೌನ ಮುರಿದು ಸತ್ಯ ದರ್ಶನ ಮಾಡಿಸಿದರು .
” ಹೌದು … , ನಂಗೆ ಸೌಂದರ್ಯ ಅವರೊಂದಿಗೆ ಸಂಬಂಧವಿತ್ತು . ನಾನು ಮತ್ತು ಸೌಂದರ್ಯ ಅವರ ಸಹೋದರ . ನಮ್ಮ ನಡುವೆ ಉತ್ತಮವಾದ ಸಹೋದರ ಸ್ನೇಹವಿತ್ತು. ನಾವು ಒಳ್ಳೆಯ ಸ್ನೇಹಿತರಾಗಿದ್ದೆವು . ಆದ್ದರಿಂದ ನಾನು ಅವರ ಮನೆಗೆ ಆಗಾಗ ಭೇಟಿ ನೀಡುತ್ತಿದ್ದೆ . ಆದರೆ , ಜನ ನಮ್ಮ ಬಗ್ಗೆ ತಪ್ಪಾಗಿ ಮಾತಾನಾಡುತ್ತಿದ್ದಾರೆ . ನಮ್ಮ ಸಂಬಂಧ ಅವರ್ಯಾರು ಅರ್ಥ ಮಾಡಿಕೊಳ್ಳಲಿಲ್ಲ ” ಎಂದು ಬೇಸರ ಪಟ್ಟರು.
ಸಂಬಂಧವೆಂದರೆ ಕೆಲವರು ಸಾಮಾನ್ಯವಾಗಿ ದೈಹಿಕ ಸಂಬಂಧ ಎಂದು ಭಾವಿಸುತ್ತಾರೆ . ಆದರೆ , ಸೌಂದರ್ಯ ಮತ್ತು ನನ್ನ ನಡುವಿನ ಸಂಬಂಧ ವಿಭಿನ್ನವಾಗಿತ್ತು . ಆಕೆ ನನ್ನ ಸಹೋದರಿಯಂತಿದ್ದರು . ನಾವು ಉತ್ತಮ ಸ್ನೇಹಿತರಾಗಿದ್ದೆವು ಎಂದು ಹೇಳಿದ್ದಾರೆ.
ಜಗಪತಿ ಬಾಬು ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸ್ಯಾಂಡಲ್ ವುಡ್ ಸಿನಿಮಾ ‘ ರಾಬರ್ಟ್ ‘ ಮತ್ತು ‘ ಉಪ್ಪಿ ರೂಪೀ ‘ ಎಂಬ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ . ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಚಿತ್ರದ ಕೆಲಸಗಳು ನಿಂತಿವೆ .