ರಿಲೀಸ್ ಗೂ ಮುನ್ನವೇ ರಜನಿಕಾಂತ್ 2.0 , ಪ್ರಭಾಸ್ ‘ಬಾಹುಬಲಿ’ ರೆಕಾರ್ಡ್ ಬ್ರೇಕ್ ಮಾಡಿದ ಯಶ್ ‘ಕೆಜಿಎಫ್- 2’ …!
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ 2 ..! ಕನ್ನಡದ ಗೋಲ್ಡನ್ ಫಿಲ್ಮ್ ಕೆಜಿಎಫ್ ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಮತ್ತು ಮಲೆಯಾಳಂ ಸೇರಿ ಪಂಚ ಭಾಷೆಗಳಲ್ಲಿ ಅಬ್ಬರಿಸಿದ್ದೇ ತಡ ರಾಕಿಂಗ್ ಸ್ಟಾರ್ ನ್ಯಾಷನಲ್ ಸ್ಟಾರ್ ಆಗ್ಬಿಟ್ರು . ಕೆಜಿಎಫ್ ಯಶಸ್ಸಿನ ಬಳಿಕ ಡೈರೆಕ್ಟರ್ ಪ್ರಶಾಂತ್ ನೀಲ್ ನಟ ಯಶ್ ಮತ್ತು ಟೀಮ್ ಆಯ್ಕೆ ಮಾಡಿಕೊಂಡಿದ್ದೇ ಕೆಜಿಎಫ್ 2..! ಅತ್ತ – ಇತ್ತ ಯೋಚಿಸದೆ ಇಡೀ ಟೀಮ್ ಚಾಪ್ಟರ್ 2 ಗೆ ಕೆಲಸ ಮಾಡುತ್ತಿದೆ. ಈಗಾಗಲೇ ಶೇ 80 ರಷ್ಟು ಚಿತ್ರೀಕರಣ ಮುಗಿದಿದೆ. ಕೊರೋನಾ ಹಾವಳಿ ಇಲ್ಲದಿದ್ದರೆ ಇಷ್ಟೊತ್ತಿಗೆ ಶೂಟಿಂಗ್ ಕಂಪ್ಲೀಟ್ ಆಗಿರ್ತಿತ್ತು. ಅದೇನೇ ಇರಲಿ ಇನ್ನು ಎಲ್ಲಾ ಅಂದುಕೊಂಡಂತೆ ನಡೆದರೆ ಅಕ್ಟೋಬರ್ ಗೆ ಸಿನಿಮಾ ತೆರೆಕಾಣಲಿದೆ.
ಕೆಜಿಎಫ್ ಬಂದಾಗಲಿಂದಲೇ ಸೌಂಡು ಮಾಡುತ್ತಿರುವ ಕೆಜಿಎಫ್ 2 ಬಗ್ಗೆ ಒಂದಲ್ಲ ಒಂದು ಸುದ್ದಿಗಳು ಬರುತ್ತಲೇ ಇವೆ. ಕೊರೋನಾ ಲಾಕ್ ಡೌನ್ ಎಫೆಕ್ಟ್ ನಲ್ಲೂ ಕೆಜಿಎಫ್ 2 ಸುದ್ದಿಗಳಿಗೆ ಬರವಿಲ್ಲ .
ಇದೀಗ ಒಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೆಜಿಎಫ್ 2 ರಿಲೀಸ್ ಗೂ ಮುನ್ನವೇ ದಾಖಲೆ ನಿರ್ಮಿಸಿರೋದೇ ಆ ಸುದ್ದಿ … ! ರಜನಿಕಾಂತ್ ಅಭಿನಯದ 2. 0 , ಪ್ರಭಾಸ್ ಅಭಿನಯದ ಬಾಹುಬಲಿ ದಾಖಲೆಗಳನ್ನು ಕೆಜಿಎಫ್ 2 ಮುರಿದಿದೆ ಎಂದು ಹೇಳಲಾಗುತ್ತಿದೆ .
ಖಾಸಗಿ ಸುದ್ದಿವಾಹಿನಿಯೊಂದು ಕೆಜಿಎಫ್ 2’ನ ಎಲ್ಲ ಭಾಷೆಗಳ ಪ್ರಸಾರದ ಹಕ್ಕುಗಳನ್ನು ಬರೋಬ್ಬರಿ 120 ಕೋಟಿ ರೂಪಾಯಿಗಳಿಗೆ ಪಡೆದುಕೊಂಡಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಅಮೇಜಾನ್ ಪ್ರೈಮ್ ಈ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಬರೋಬ್ಬರಿ 55 ಕೋಟಿ ರೂಪಾಯಿಗಳಿಗೆ ಪಡೆದುಕೊಂಡಿತ್ತು ಎಂಬ ಮಾತು ಕೇಳಿಬಂದಿತ್ತು ..! ಈ ಅಂತೆಕಂತೆ ಸುದ್ದಿಗಳು ನಿಜವಾಗಿದ್ದರೆ, ಇದರಿಂದಲೇ ‘ಕೆಜಿಎಫ್’ ನಿರ್ಮಾಪಕರಿಗೆ 175 ಕೋಟಿ ರೂಪಾಯಿ ಬ್ಯುಸಿನೆಸ್ ಆದಂತಾಗುತ್ತದೆ. ಅಲ್ಲಿಗೆ, ಬಿಡುಗಡೆಗೂ ಮೊದಲೇ ಇಷ್ಟೊಂದು ಗಳಿಕೆ ಮಾಡಿದ ಭಾರತದ ಟಾಪ್ ಸಿನಿಮಾಗಳಲ್ಲಿ ‘ಕೆಜಿಎಫ್2 ಸ್ಥಾನ ಪಡೆದುಕೊಳ್ಳಲಿದೆ.
ಸರಿಲೇರು ನೀಕೆವ್ವರು’, ‘ಬಾಹುಬಲಿ’, ‘2.0’ ಚಿತ್ರಗಳ ಸ್ಯಾಟಲೈಟ್ ಹಕ್ಕುಗಳಿಗೆ 118 ಕೋಟಿ ರೂ.ಗಳವರೆಗೂ ಹಣ ಪಡೆದಿದ್ದವು.
ಇನ್ನು ಕೆಜಿಎಫ್ 2 ಭಾಗ 1 ಕ್ಕಿಂತಲೂ
ಸೌಂಡು ಮಾಡುವ ನಿರೀಕ್ಷೆಯಿದ್ದು, ಕಾದು ನೋಡಬೇಕು.
ಆ ಊರಲ್ಲಿ 47 ಕುಟುಂಬ, 47 ಮಂದಿ ಐಎಎಸ್..!
ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಯಾವ್ದು ಗೊತ್ತಾ? ರಾಕಿಭಾಯ್ ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಸ್ಟಾರ್ ಡೈರೆಕ್ಟರ್…!
ಭಾರತೀಯ ಮೂಲದ ‘ಧ್ರುವತಾರೆ’ ವಿಶ್ವಕ್ಕೆ ಸ್ಫೂರ್ತಿಯ ಸೆಲೆ..!
ವೃದ್ಧರನ್ನು ತಂದೆ-ತಾಯಿಯಂತೆ ಕಾಣುವ ಈ ಡಾಕ್ಟರ್ ಬಡವರ ದೇವರು!
ಭಾರತದ ‘ಪಬ್ ಕ್ಯಾಪಿಟಲ್’ ಯಾವ್ದು ಗೊತ್ತಾ..?
ವಿಶ್ವಕ್ಕೆ ಭಾರತ ಏನೆಲ್ಲಾ ಪರಿಚಯಿಸಿದೆ ..? ಕೆಲವು ಆಟಗಳು, ಸಂಗತಿಗಳು ಇಲ್ಲಿವೆ ..!
ಇದು ನೀವೆಲ್ಲೂ ಕೇಳಿರದ ನಾವಿಕನ ಯಶೋಗಾಥೆ.. ಓದ್ಲೇಬೇಕು!
ಅವಳ ಮನಸ್ಸಲ್ಲಿ ಪ್ರೀತಿ ಇದೆಯಾ? ಐದು ಸುಳುಹುಗಳನ್ನು ಓದಿ, ಥಟ್ ಅಂತ ತಿಳಿದುಕೊಳ್ಳಿ!
ಜಗತ್ತು ಕಂಡ ಕ್ರೂರಿಗೂ ಲವ್ ಆಗಿತ್ತು ..! ಹಿಟ್ಲರ್ ನ ಇಂಟ್ರೆಸ್ಟಿಂಗ್ ಲವ್ ಸ್ಟೋರಿ
ಅವಳ ಮನಸ್ಸಲ್ಲಿ ಪ್ರೀತಿ ಇದೆಯಾ? ಐದು ಸುಳುಹುಗಳನ್ನು ಓದಿ, ಥಟ್ ಅಂತ ತಿಳಿದುಕೊಳ್ಳಿ!
ಮಹಾಭಾರತ, ಮಾಲ್ಗುಡಿ ಡೇಸ್ – ಕನ್ನಡ ಕಿರುತೆರೆ ವೀಕ್ಷಕರಿಗೆ ಡಬಲ್ ಧಮಾಕಾ?
ನೀನಿದ್ದರೆ ಮಾತ್ರ ಬದುಕು ಎಂಬ ಹುಚ್ಚು ಭ್ರಮೆಯಿಲ್ಲ. ಆದರೆ, ನೀ ಸಿಗದೇ ಬಾಳೊಂದು ಬಾಳೇ?
ನಾನೇ ಯಾಕೆ ಪ್ರಪೋಸ್ ಮಾಡ್ಬೇಕು? ಅವ್ಳು ಯಾಕೆ ಮಾಡಲ್ಲ?
ಬಿಟ್ಟು ಹೋಗದಿರು ಗೆಳತಿ ಹಳೆಯ ನೆನಪುಗಳ ಉಳಿಸಿ.
ಸೋತು ಸುಮ್ಮನಾಗುವೆ ಹುಡುಗಾ… ಒಮ್ಮೆ ಮಾತನಾಡಿಸು ಬಾ!
ಮುಗಿಯದ ಸ್ನೇಹ : ಗ್ಯಾಂಗ್ ಆಫ್ ತ್ರೀ ಗರ್ಲ್ಸ್
ತರಕಾರಿ ಮಾರಿ ಆಸ್ಪತ್ರೆ ಕಟ್ಟಿಸಿದ ಛಲಗಾತಿ!
ಪುಟ್ಟಕೋಣೆಯಲ್ಲಿ ಬದುಕು ಸವೆಸಿದ ಬಾಲಕ ದೇಶದ ಪ್ರತಿಷ್ಠಿತ ಕಂಪನಿ ಸಂಸ್ಥಾಪಕ..!