ಮದ್ವೆಗೆ ರೆಡಿಯಾದ ವಿನಾಯಕ್ ಜೋಷಿ … ಕೈ ಹಿಡಿಯುತ್ತಿರುವ ತಾರೆ ಯಾರ್ ಗೊತ್ತಾ?
ಕೊರೋನಾ ಆತಂಕ ಹೆಚ್ಚಾಗುತ್ತಲೇ ಇದೆ . ಪುನಃ ದೇಶ ಲಾಕ್ ಡೌನ್ ಮೊರೆ ಹೋಗುವ ಸಾಧ್ಯತೆಯೂ ಇದೆ . ಈ ಕೊರೋನಾ ಹಾವಳಿ ನಡುವೆ ಅದೆಷ್ಟೋ ಜೋಡಿ ಸಿಂಪಲ್ಲಾಗಿ ಹೊಸ ಬಾಳನ್ನು ಆರಂಭಿಸ್ತಿದ್ದಾರೆ . ಸರಳ ವಿವಾಹಗಳು ನಡೆಯುತ್ತಿವೆ . ಸ್ಟಾರ್ ಗಳು ಕೂಡ ಸರಳವಾಗಿ ಮದುವೆಯಾಗುತ್ತಿದ್ದಾರೆ . ಇದೀಗ ಕಿರುತೆರೆ, ಬೆಳ್ಳಿತೆರೆಯಲ್ಲಿ ತನ್ನದೇಯಾದ ಛಾಪು ಮೂಡಿಸಿರುವ ನಟ ವಿನಾಯಕ್ ಜೋಷಿ ಸರದಿ .
ಹೌದು ವಿನಾಯಕ್ ಜೋಷಿ ಸಿಂಪಲ್ಲಾಗಿ ಮದ್ವೆ ಆಗ್ತಿದ್ದಾರೆ . ಬಾಲನಟನಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟವರು ವಿನಾಯಕ್ ಜೋಷಿ . ನಮ್ಮೂರ ಮಂದಾರ ಹೂವೆ, ಅಮೃತವರ್ಷಿಣಿ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಚಿಕ್ಕ ವಯಸ್ಸಿನಲ್ಲಿ ಮಿಂಚಿರುವ ಅವರು ಇದುವರೆಗೆ ಸುಮಾರು 70 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ .ಧಾರವಾಹಿ, ವೆಬ್ ಸೀರಿಸ್, ರಿಯಾಲಿಟಿ ಶೋಗಳ ಮೂಲಕವೂ ಜೋಷಿ ಮನೆಮಾತು .ರಂಗಭೂಮಿಯ ನಂಟು ಕೂಡ ಇದೆ . ಎಫ್ ಎಂ ವೊಂದರಲ್ಲಿ ಆರ್ ಜೆ ಆಗಿಯೂ ಹೆಸರು ಮಾಡಿದ್ದರು . ಕನ್ನಡ ಬಿಗ್ ಬಾಸ್ 1 ರಲ್ಲಿ ಸ್ಪರ್ಧಿಯಾಗಿದ್ದರು .ಡ್ಯಾನ್ಸ್ ಕರ್ನಾಟಕ ಸೀಸನ್ 3 ನಲ್ಲೂ ಪಾಲ್ಗೊಂಡಿದ್ದರು .
ಇನ್ನು ವಿನಾಯಕ್ ಜೋಷಿಯವರನ್ನು ಮದುವೆ ಆಗಲಿರುವ ಯುವತಿ ಹೆಸರು ವರ್ಷಾ ಬೆಳವಾಡಿ ಅಂತ. ವರ್ಷಾರವರು ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ. ನಟಿ ಸಹ ಹೌದು. ಅನೇಕ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಪ್ರಸ್ತುತ ಅಕಾಡೆಮಿಯೊಂದರಲ್ಲಿ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ 120ನೇ ಸ್ಥಾನದಲ್ಲಿದ್ದರು. ಒಂದು ತಮಿಳು ಚಿತ್ರದಲ್ಲೂ ವರ್ಷಾರವರು ನಟಿಸಿದ್ದು, ಆ ಸಿನಿಮಾ ರಿಲೀಸ್ ಗೆ ಕಾಯ್ತಿದ್ದಾರೆ .
ಬಾಲ್ಯದಲ್ಲಿಯೇ ವಿನಾಯಕ್ ಮತ್ತು ವರ್ಷಾ ಪರಿಚಿತರಾಗಿದ್ದರು. ‘ನಾನು 7 ವರ್ಷದವನಿದ್ದಾಗಲೇ ವರ್ಷಾ ಜೊತೆ ಡ್ಯಾನ್ಸ್ ಮಾಡಿದ್ದೆ. ಬಳಿಕ 25 ವರ್ಷಗಳ ಬಳಿಕ ಕಾಮನ್ ಫ್ರೆಂಡ್ ಮೂಲಕ ಮತ್ತೆ ನಮ್ಮ ಭೇಟಿಯಾಯ್ತು. ಅಂದಿನಿಂದ ಆಗಾಗ ಭೇಟಿ ಆಗುತ್ತಲೇ ಇದ್ದೇವೆ’ ಎಂದು ಹೇಳಿದ್ದಾರೆ ವಿನಾಯಕ್. ಸದ್ಯದಲ್ಲೇ ದೇವಸ್ಥಾನವೊಂದರಲ್ಲಿ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಮದುವೆ ನಡೆಯಲಿದ್ದು, ದಿನಾಂಕ, ಸ್ಥಳ ಮೊದಲಾದ ಮಾಹಿತಿ ಇನ್ನಷ್ಟೇ ಬಹಿರಂಗ ಆಗಬೇಕಿದೆ.
ನಮ್ಮ ಚಿರು ಅರ್ಧಕ್ಕೆ ಬಿಟ್ಟು ಹೋದ ಸಿನಿಮಾಗಳು ಯಾವುವು ಗೊತ್ತಾ?
ಹೆಣ್ಣುಮಕ್ಕಳಿಗಾಗಿ ಈ ಡಾಕ್ಟರ್ ಏನೆಲ್ಲಾ ಮಾಡ್ತಿದ್ದಾರೆ ಗೊತ್ತಾ?
ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ವಿಚಿತ್ರ..!
ವಾದ ಮಾಡೋದ್ರಲ್ಲಿ ಈ ರಾಶಿಯವರು ಫಸ್ಟ್ …ಇವರ ಮುಂದೆ ಯಾರೂ ಇಲ್ಲ..!
OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!
ಹುಡುಗಿಯರು ತಿಳಿಯದೇ ಇರುವ ಹುಡುಗರ ರಹಸ್ಯಗಳು..!
ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!
ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!
OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!
ವಯಸ್ಸು 60 – 400 ಕಂಪನಿಗಳ ಒಡೆತನ ! ಇದು ಸಾಧ್ಯವಾಗಿದ್ದು ಹೇಗೆ?
ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!
ಓದಿದ್ದು 8ನೇ ತರಗತಿ, ಮಲಗುತ್ತಿದ್ದುದು ರೈಲ್ವೆ ಸ್ಟೇಷನಲ್ಲಿ… ಇವತ್ತು..!?
ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!
ಹುಡ್ಗೀರ ಮುಂದೆ ಹುಡುಗರು ಈ ವಿಷ್ಯಗಳಲ್ಲಿ ವೀಕ್ …!