ನಟಿ ಐದ್ರಿತಾ ರೇ ಒಂದೇ ಕಣ್ಣಲ್ಲಿ ಅಳುತ್ತಿದ್ದರು. ಕನ್ನಡ ಚಿತ್ರರಂಗದಲ್ಲಿ ನಾಯಕ- ನಾಯಕಿಯರಿಗೆ ಸಂಭಾವನೆಯಲ್ಲಿ ತಾರಾತಮ್ಯವಾಗುತ್ತಿದೆ ಅಂತ ಸಿಕ್ಕಾಪಟ್ಟೆ ಬೇಜಾರ್ ಮಾಡಿಕೊಂಡಿದ್ದರು. ಪಾಪ, ಅವರು ಹೇಳಿದ್ದು ಒಂದು ಲೆಕ್ಕದಲ್ಲಿ ನಿಜವಲ್ವಾ..? ಈ ಜನ ಯಾಕ್ಹಿಂಗ್ ಮಾಡ್ತಾರೋ..? ಅಂತ ಬೇಜಾರಾಗುತ್ತೆ. ಆದರೆ ಐಂದ್ರಿತಾ ಅವರಿಗೆ ನಾವು ಕೆಲವು ವಾಸ್ತವಗಳನ್ನು ಅರ್ಥ ಮಾಡಿಸ್ತೀವಿ. ಈ ಹಿಂದಿನಿಂದಲೂ ಕನ್ನಡ ಚಿತ್ರರಂಗ ಮಾತ್ರವಲ್ಲ, ಜಗತ್ತಿನ ಚಿತ್ರಗಳಲ್ಲಿ ಬಹುತೇಕ ಚಿತ್ರಗಳಿಗೆ ಜನರು ಹೀರೋಗಳ ಮುಖ ನೋಡಿ ಮಣೆ ಹಾಕುತ್ತಿದ್ದರು. ಎಲ್ಲೋ ಬೆರಳೆಣಿಕೆಯ ಚಿತ್ರಗಳನ್ನು ಪ್ರಖ್ಯಾತರಾದ ಹೀರೋಯಿನ್ ಗಳು ಮುಖ್ಯ ಭೂಮಿಕೆಯಲ್ಲಿದ್ದರೇ ಗೆಲ್ಲಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲೂ ಈ ಹಿಂದೆ ಖ್ಯಾತ ನಟಿಯರಿದ್ದರು. ರಾಜ್ಕುಮಾರ್ ಇಲ್ಲದ ಚಿತ್ರಗಳು ಒಂದುವೇಳೆ ಗೆಲ್ಲುತ್ತಿದ್ದರೇ ಅದಕ್ಕೆ ಆಗಿನ ಹೀರೋಯಿನ್ಗಳೇ ಪ್ರಮುಖ ಕಾರಣಕರ್ತರಾಗಿದ್ದರು. ಅಂತಹವರ ಲಿಸ್ಟ್ ನಲ್ಲಿ ನಮಗೆ ಪಂಡರಿಬಾಯಿ, ಲೀಲಾವತಿ, ಕಲ್ಪನಾ, ಜಯಂತಿ, ಮಂಜುಳಾ, ಆರತಿ ಮುಂತಾದ ನಟಿಯರು ಸಿಗುತ್ತಾರೆ. ಕಾಲ ಬದಲಾದಂತೆ ಕನ್ನಡ ಚಿತ್ರಗಳು ಕೇವಲ ಹೀರೋಯಿನ್ ಗಳ ಕಾರಣಕ್ಕೆ ಗೆಲ್ಲುತ್ತೆ ಎಂಬ ಟ್ರೆಂಡ್ ಸೃಷ್ಟಿಮಾಡಿದ್ದು ಶೃತಿ, ಮಾಲಾಶ್ರೀ. ಇವತ್ತಿಗೂ ಮಾಲಾಶ್ರೀ ಗೆಲ್ಲುವ ಕುದುರೆ. ಅವರ ಸಿನಿಮಾಗಳನ್ನು ಪ್ರೇಕ್ಷಕ ತಕ್ಕಮಟ್ಟಿಗೆ ಗೆಲ್ಲಿಸುತ್ತಿದ್ದಾನೆ. ಈಗ ಅಂತಹವರು ಯಾರಿದ್ದಾರೆ ಹೇಳಿ ಐಂದ್ರಿತಾ ಮೇಡಂ. ಕೇವಲ ನಿಮ್ಮೊಬ್ಬರನ್ನೇ ಹಾಕಿಕೊಂಡು ಸಿನಿಮಾ ನಿರ್ಮಿಸಲು ನಿರ್ಮಾಪಕರು ದೈರ್ಯ ಮಾಡುತ್ತಾರಾ..? ನೀವೇ ಹೇಳಿ.
ಏಕೆಂದರೇ ಹಾಕಿದ ದುಡ್ಡು ವಾಪಾಸು ಬರುವುದಿಲ್ಲ ಎಂಬುದು ಮಾರುಕಟ್ಟೆಯರಿತಿರುವ ಅವರಿಗೆ ಗೊತ್ತಿರುವ ಸಂಗತಿ. ಇವತ್ತಿಗೆ ಕನ್ನಡ ಚಿತ್ರರಂಗದಲ್ಲಿ ಪಕ್ಕಾ ಕಾಸು ಹುಟ್ಟಿಸುವ ನಟಿಯಿಲ್ಲ. ಅದಕ್ಕಾಗಿ ನಿರ್ಮಾಪಕರು ಹೀರೋಗಳನ್ನು ನಂಬಿಕೊಂಡು ಸಿನಿಮಾ ಮಾಡುತ್ತಾರೆ. ಕೋಟಿ-ಕೋಟಿ ಸಂಭಾವನೆ ಪಡೆದರೂ ಶಿವಣ್ಣ, ಪುನೀತ್, ದರ್ಶನ್, ಸುದೀಪ್, ವಿಜಯ್, ಯಶ್, ಗಣೇಶ್ ಸಿನಿಮಾಗಳು ನಿರ್ಮಾಪಕರ ಹಣಕ್ಕೆ ಮೋಸ ಮಾಡುವುದಿಲ್ಲ. ಲಾಭ ತಂದುಕೊಡುತ್ತವೆ. ಅದೇ ಐಂದ್ರಿತಾ, ರಾಗಿಣಿ, ಪೂಜಾ- ಇತರರನ್ನು ಹಾಕಿಕೊಂಡು ಹೀರೋಗಳಿಲ್ಲದೇ ಸಿನಿಮಾ ನಿರ್ಮಿಸಿದರೇ ಲಾಭ ಬರುತ್ತಾ..? ಎಂಬುದನ್ನು ನೀವೇ ಯೋಚಿಸಬೇಕು. ಸ್ವಲ್ಪ ಹೆಸರುವಾಸಿಯಾಗಿರುವ ರಮ್ಯರನ್ನು ಹಾಕಿಕೊಂಡು ಸಿನಿಮಾ ಮಾಡಲು ನಿರ್ಮಾಪಕರು ಹಿಂಜರಿಯುತ್ತಾರೆ. ಅಂದಮೇಲೆ ನೀವು ಹೀರೋಗಳಷ್ಟೆ ಸಂಭಾವನೆ ಬೇಕು ಅಂದರೇ ಎಷ್ಟರಮಟ್ಟಿಗೆ ಸರಿ..?, ಲಾಭ ತರುವವರಿಗೆ ಹೆಚ್ಚು ಸಂಭಾವನೆ ಕೊಟ್ಟರೇ ಏನು ತಪ್ಪು..!? ನೀವು ಅಳುವ ಬದಲು.. ನಮ್ಮ ನಿರ್ಮಾಪಕರ ಸಂಕಷ್ಟಗಳನ್ನು ಅರ್ಥಮಾಡಿಕೊಳ್ಳಬೇಕು. ಏನಂತೀರಾ..!?
- ರಾ ಚಿಂತನ್
POPULAR STORIES :
ಅವ್ನಿಗೆ ಪ್ರೇಯಸಿಯನ್ನು ಬುಲ್ಲೆಟ್ನಲ್ಲಿ ಕೂರಿಸೋ ಆಸೆ..!? ಅದಕ್ಕಾಗಿ ಅವ್ನು ಏನ್ ಮಾಡ್ದ ಗೊತ್ತಾ..!?
ಐಪಿಎಲ್ ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದ ಟೀಮ್ ಯಾವುದು ಗೊತ್ತಾ..?
ಅಲ್ಲಿ ಮನುಷ್ಯನ ಮಾಂಸದ ಬಿರಿಯಾನಿ ಬೇಯುತ್ತಿತ್ತು..!? ಮಾಂಸ ಬೇಯುತ್ತಿದ್ದಾಗ ಆಗಿದ್ದೇನು ಗೊತ್ತಾ..!?
ಅನುಷ್ಕಾ ಇದ್ದರೇನಂತೆ..? ಚಾನ್ಸ್ ಸಿಕ್ಕರೇ ಕೊಹ್ಲೀನಾ ಮದ್ವೆ ಆಗ್ತೀವಿ..!?
ಐಫೋನ್ ಅಂದ್ರೆ ಸಿಕ್ಕಾಪಟ್ಟೆ ಆಸೇನಾ..!? ಇದನ್ನು ಓದಿದ್ರೆ ಐಫೋನ್ ಗೆ ದೊಡ್ಡ ನಮಸ್ಕಾರ ಹಾಕ್ತೀರಾ..?