No menu items!
11.1 C
Munich
Wednesday, April 29, 2026

ಸಿಂಗನಮನೆ ಚುನಾವಣೆ, ಕಿರಿಯರ ಆರ್ಭಟಕ್ಕೆ ಹಿರಿಯರು ದೂಳಿಪಟ!

Must read

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಒಂದೇ ಊರಿನ ಗೆಳೆಯರು ಗೆಲವು ಸಾಧಿಸಿದ್ದಾರೆ, BRP ಭಾಗ 1 ರಲ್ಲಿ ಒಟ್ಟು 318 ಮತ ಚಲಾವಣೆಯಾಗಿದ್ದು ಅದರಲ್ಲಿ ಅವಿನಾಶ್ 218 ಮತ ಅಂತರದಲ್ಲಿ ಗೆಲುವು ಪಡೆದಿದ್ದು ಗಿರೀಶ್ ಹಾಗೂ ಪುಟ್ಟರಾಜು ಉಳಿದ ಮತ ಪಡೆದ್ದಿದ್ದಾರೆ ಹಾಗೂ ಸಿಂಗನ ಮನೆ ಭಾಗ 1 ರಲ್ಲಿ ಪ್ರವೀಣ ಎಂಬ ಅಭ್ಯರ್ಥಿ 250 ಮತ ಪಡೆದು 95 ಮತಗಳ ಅಂತರದಲ್ಲಿ ಗೆಲುವು ಸಾದಿಸಿದ್ದಾರೆ. ಹಾಗೂ ಶಿವಶಂಕರ್. ಆರ್ 233 ಮತ ಪಡೆದು
24 ಮತಗಳ ಅಂತರದ ಗೆಲುವು ಸಾದಿಸಿದ್ದಾರೆ. ಗ್ರಾಮಪಂಚಾಯಿತಿ ಚುನಾವಣೆಯ ಈ ಮೂರು ಗೆಳೆಯರು ಗೆಲುವು ಸಾದಿಸಿದ್ದು ನಿನ್ನೆ ಬೆಂಬಲಿಗರು ಸಂಭ್ರಮಾಚರಣೆ ನೆಡಿಸಿದರು.

ಅಕ್ಕಪಕ್ಕದ ಊರಿನ ಈ ಗೆಳಯರು ಗೆಲುವಿನ ಸಂಭ್ರಮವನ್ನು ಒಟ್ಟಗಿ ಸಂಭ್ರಮಿಸಿದ್ದಾರೆ. ಪ್ರವೀಣ್ ಎಂಬ ಅಭ್ಯರ್ಥಿ ಈ ಹಿಂದೆ ಗೆದ್ದು ಉಪಾಧ್ಯಕ್ಷ ಸ್ಥಾನ ಪಡೆದಿದ್ದು ಶಿವಶಂಕರ್ ಹಾಗೂ ಅವಿನಾಶ್ ಮೊದಲ ಬಾರಿ ಚುನಾವಣೆಗೆ ನಿಂತು ಗೆಲುವು ಸಾದಿಸಿದ್ದಾರೆ.

ತಮ್ಮ ಮುಂದೆ ಘಟಾನುಗಟಿಗಳು ಕಣಕಿಳಿದಿದ್ದರು ಸಹ ಅವರ ಮುಂದೆ ಗೆಲುವು ಸಾಧಿಸಿರುವುದು ಖುಷಿ ತಂದಿದೆ ಎಂದು ಅಭ್ಯರ್ಥಿಗಳು ಹೇಳಿದ್ದಾರೆ. ಗೆದ್ದ ಅಭ್ಯರ್ಥಿಗಳು ತಾವು ಮುಂದೆ ಅದೇ ಗ್ರಾಮ ಪಂಚಾಯತಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಬೇಕೆಂದು ಧೃಡ ನಿರ್ಧಾರವನ್ನು ಮಾಡಿದ್ದೇವೆ ನಮಗೆ ಬಂದ ಅಧಿಕಾರವನ್ನು ಸದುಪಯೋಗ ಪಡಿಸಿಕೊಳ್ಳಿತೇವೆ ಹಾಗೂ ಜನಪರ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದ ಅಭ್ಯರ್ಥಿಗಳಿಗೆ ಜನ ಬೆಂಬಲ ವ್ಯಕ್ತಪಡಿಸಿದ್ದಾರೆ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article