No menu items!
9.3 C
Munich
Wednesday, April 29, 2026

ಪತಿಯ ಮಾಜಿ ಪ್ರೇಯಸಿಗೆ ಎಚ್ಚರಿಕೆ ಕೊಟ್ಟ ನೇಹಾ ಕಕ್ಕಡ್

Must read

 

‘ಇಂಡಿಯನ್ ಐಡಲ್’ನ ಜಡ್ಜ್ ಕೂಡ ಆಗಿರುವ ಗಾಯಕಿ ನೇಹಾ ಕಕ್ಕಡ್ ಅವರು ಗಾಯಕ ರೋಹನ್‌ ಪ್ರೀತ್ ಸಿಂಗ್ ಅವರನ್ನು ಕಳೆದ ವರ್ಷ ಅಕ್ಟೋಬರ್‌ ತಿಂಗಳಲ್ಲಿ ಮದುವೆಯಾಗಿದ್ದರು. ಈಗ ಅವರು ವಿಡಿಯೋ ಮೂಲಕ ಗಂಡನ ಮಾಜಿ ಪ್ರೇಯಸಿಗೆ ವಾರ್ನ್‌ ಮಾಡಿದ್ದಾರೆ.

‘Ex-calling’ ಹಾಡಿನಲ್ಲಿ ರೋಹನ್ ಹಾಗೂ ನೇಹಾ ನಟಿಸಿದ್ದಾರೆ. ಆಗ ಅವರು ರೋಹನ್ ಅವರ ಮಾಜಿ ಪ್ರೇಯಸಿಗೆ ಮತ್ತೆ ಫೋನ್ ಮಾಡಬೇಡ ಅಂತ ಎಚ್ಚರಿಕೆ ನೀಡಿದ್ದಾರೆ. ಇವರಿಬ್ಬರು ಸಿಕ್ಕಾಪಟ್ಟೆ ಹಾಡುಗಳಿಗೆ ಲಿಪ್ ಸಿಂಕ್ ಮಾಡಿ ನಟಿಸುತ್ತಿರುತ್ತಾರೆ. ಈ ಜೋಡಿಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ‘Ex-calling’ ಹಾಡಿನ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿರುವ ನೇಹಾ “Ex-calling, ಅಚ್ಚಾ, ಕಾಲ್ ಮಾಡು ಆಗ ಹೇಳ್ತೀನಿ” ಅಂತ ಕ್ಯಾಪ್ಶನ್ ನೀಡಿದ್ದಾರೆ.

ಈ ವಿಡಿಯೋ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ರೋಹನ್ ಅವರು “ಯಾರೂ ಇಲ್ಲ ಯಾರೂ ಇಲ್ಲ. ನೀನು ಕೋಪ ಮಾಡಿಕೊಳ್ಳಬೇಡ, ನೀನು ಈ ಹಾಡು ಇಷ್ಟಪಟ್ಟಿದ್ದೀಯಾ, ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಕಾಮೆಂಟ್ ಮಾಡಿದ್ದಾರೆ. ಈ ಜೋಡಿ ಅವರ ಮ್ಯೂಸಿಕ್ ವಿಡಿಯೋಗಳ ಪ್ರಚಾರ ಮಾಡಲು ಏನೇನೋ ಪ್ಲ್ಯಾನ್ ಮಾಡುತ್ತಿದ್ದಾರೆ. ಈ ಹಿಂದೆ ನೇಹಾ ಕಕ್ಕರ್ ಅವರು ಗರ್ಭಿಣಿ ಎಂಬಂತೆ ಸುಳ್ಳು ಸುದ್ದಿ ಹಬ್ಬುವಂತೆ ಮಾಡಿದ್ದರು.

ರೋಹನ್ ಪ್ರೀತ್‌ ಸಿಂಗ್ ಹಾಗೂ ನೇಹಾ ಕಕ್ಕಡ್ ಅವರು ವೈವಾಹಿಕ ಜೀವನವನ್ನು ಸುಂದರವಾಗಿ ಕಳೆಯುತ್ತಿದ್ದಾರೆ. ಅನೇಕ ಕಾರ್ಯಕ್ರಮಗಳಿಗೆ ಈ ಜೋಡಿ ಒಟ್ಟಾಗಿ ಹೋಗುತ್ತಿದೆ. ಇವರಿಬ್ಬರದು ಲವ್ ಮ್ಯಾರೇಜ್. ಕಳೆದ ಜೂನ್ ತಿಂಗಳಲ್ಲಿ ಇವರಿಬ್ಬರ ಭೇಟಿಯಾಗಿದ್ದು, ಅಕ್ಟೋಬರ್‌ನಲ್ಲಿ ಕೆಲವೇ ಕೆಲವು ಜನರ ಸಾಕ್ಷಿಯಾಗಿ ಮದುವೆಯಾಗಿದೆ. ಕೊರೊನಾ ವೈರಸ್ ಇರುವುದರಿಂದ ಭಾರೀ ಗ್ರ್ಯಾಂಡ್ ಆಗಿ ಮದುವೆ ಮಾಡಿಕೊಳ್ಳಲಾಗಲಿಲ್ಲವಂತೆ. ಇನ್ನು ಈ ಹಿಂದೆ ನೇಹಾ ಅವರು ನಟ ಹಿಮಾಂಶ್ ಕೊಹ್ಲಿಯನ್ನು ಪ್ರೀತಿ ಮಾಡುತ್ತಿದ್ದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article