ಇನ್ಸ್ ಪೆಕ್ಟರ್ ವಿಕ್ರಂ ನೋಡೋಕೆ ಬಂದಿದ್ದು ಕೇವಲ 40 ಜನ!!

0
337

ಕೊರೋನಾವೈರಸ್ ಹಾವಳಿಯ ನಂತರ ಚಿತ್ರಮಂದಿರಗಳು ಮತ್ತೆ ತೆರೆದಿವೆ. ಅರ್ಧದಷ್ಟು ಜನರಿಗೆ ಮಾತ್ರ ಅವಕಾಶ ನೀಡುತ್ತೇವೆ ಎಂದಿದ್ದ ರಾಜ್ಯ ಸರ್ಕಾರದ ವಿರುದ್ಧ ಕನ್ನಡ ಚಿತ್ರರಂಗದ ತಾರೆಗಳು ಹೋರಾಟ ನಡೆಸಿ ಸಂಪೂರ್ಣ ಚಿತ್ರಮಂದಿರ ತೆರೆಯಲು ಅನುಮತಿಯನ್ನು ಪಡೆದು ಕೊಂಡರು.

 

ಆದರೆ ಚಿತ್ರ ಮಂದಿರ ಸಂಪೂರ್ಣ ತುಂಬುವುದಿರಲಿ, ಕೆಲ ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಣೆ ಮಾಡಲು ಇಂದು ಬಂದ ಜನರ ಸಂಖ್ಯೆ ಎರಡಂಕಿಯನ್ನೂ ದಾಟಿಲ್ಲ! ಹೌದು ಉಡುಪಿಯ ಕಲ್ಪನ ಚಿತ್ರಮಂದಿರದಲ್ಲಿ ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್ ಪೆಕ್ಟರ್ ವಿಕ್ರಂ ಚಿತ್ರವನ್ನ ಬಿಡುಗಡೆ ಮಾಡಲಾಗಿದೆ. ಬೇಜಾರಿನ ಸಂಗತಿ ಏನೆಂದರೆ ಇಂದು ಬೆಳಿಗ್ಗೆ ಈ ಚಿತ್ರವನ್ನು ವೀಕ್ಷಿಸಲು ಚಿತ್ರಮಂದಿರಕ್ಕೆ ಬಂದ ಜನರ ಸಂಖ್ಯೆ ಒಟ್ಟು ನಲವತ್ತು.

 

 

ಹೌದು ಇಂದು ಕೇವಲ ನಲವತ್ತು ಜನರು ಮಾತ್ರ ಇನ್ಸ್ ಪೆಕ್ಟರ್ ವಿಕ್ರಂ ಚಿತ್ರವನ್ನು ವೀಕ್ಷಿಸಲು ಉಡುಪಿಯಲ್ಲಿ ಬಂದಿದ್ದರು. ಉಡುಪಿ ಮಾತ್ರವಲ್ಲದೆ ಇನ್ನೂ ಮುಂತಾದ ಕಡೆ ಇದೇ ರೀತಿ ಕಡಿಮೆ ಜನ ಚಿತ್ರಮಂದಿರಗಳಿಗೆ ಬಂದಿದ್ದರು. ಮೊದಲ ದಿನವೇ ಈ ರೀತಿಯಾದರೆ ಇನ್ನು ಮುಂದಿನ ವಾರಗಳಲ್ಲಿ ಚಿತ್ರಮಂದಿರದ ಕಡೆ ಎಷ್ಟು ಜನ ಬರುತ್ತದೆ ಎಂಬುದನ್ನು ಊಹಿಸಿಕೊಳ್ಳಲು ಸಹ ಅಸಾಧ್ಯ.. ಇನ್ನೂ ಈ ಕುರಿತು ಮಾತನಾಡುವ ಚಿತ್ರಮಂದಿರದ ಮಾಲೀಕರು ಸ್ಟಾರ್ ನಟರ ಚಿತ್ರಗಳನ್ನು ಬಿಡುಗಡೆ ಮಾಡಿದರೆ ಚಿತ್ರಮಂದಿರದತ್ತ ಪ್ರೇಕ್ಷಕರು ಖಂಡಿತ ಬರುತ್ತಾರೆ ಎನ್ನುತ್ತಾರೆ..