ರಮ್ಯಾ ಕೆಲ ದಿನಗಳ ಕಾಲ ಸಾಮಾಜಿಕ ಜಾಲತಾಣದಿಂದ ಹೊರಗುಳಿದಿದ್ದ ಇವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ರಾಜಕೀಯ ವಿಷಯಗಳಲ್ಲಿ ವಿರೋಧಿಗಳು ಕಾಲನ್ನ ಸದಾ ಎಳೆಯುವ ರಮ್ಯಾ ಅವರು ಇದೀಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ಸಖತ್ ಟಾಂಗ್ ಕೊಟ್ಟಿದ್ದು ಇದು ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ.
ರೈತರ ಪ್ರತಿಭಟನೆ ಬಗ್ಗೆ ನಮಗೆಲ್ಲರಿಗೂ ತಿಳಿದೇ ಇದೆ ಈ ವಿಷಯವಾಗಿ ರಿಹಾನ್ನ ಅವರು ಟ್ವೀಟ್ ಮಾಡಿದ್ದರು. ಇನ್ನೂ ಬೇರೆ ದೇಶದ ರಿಹಾನ್ನ ಅವರ ಟ್ವೀಟ್ ಅನ್ನು ಭಾರತೀಯ ಸೆಲೆಬ್ರಿಟಿಗಳು ವಿರೋಧಿಸಿದರು ನಮ್ಮ ದೇಶದ ಬಗ್ಗೆ ಹೊರಗಿನವರು ಮಾತನಾಡುವುದು ಬೇಡ ನಮ್ಮ ದೇಶದ ವಿಷಯಾ ನಮ್ಮಲ್ಲಿಯೇ ಇರಲಿ ಎಂದು ಭಾರತೀಯ ನಟ ನಟಿಯರು ಮತ್ತು ಕ್ರಿಕೆಟಿಗರು ಸಾಲು ಸಾಲು ಟ್ವೀಟ್ ಗಳನ್ನು ಮಾಡಿದ್ದರು.
ಇನ್ನೂ ಇದೀಗ ಈ ವಿಷಯದ ಬಗ್ಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಟ್ವೀಟ್ ಮಾಡಿದ್ದು ಇದಕ್ಕೆ ರಮ್ಯಾ ಅವರು ಸಿಕ್ಕಾಪಟ್ಟೆ ಟಾಂಗ್ ನೀಡಿದ್ದಾರೆ. ಕೆನಡಾದ ಅಕ್ಷಯ್ ಕುಮಾರ್ ಅವರು ಈ ಬಗ್ಗೆ ಮಾತನಾಡುವಾಗ ರಿಹಾನ್ನ ಮಾತನಾಡುವುದರಲ್ಲಿ ಏನು ತಪ್ಪು ಎಂದು ಪ್ರಶ್ನೆ ಮಾಡಿದ್ದಾರೆ. ಹೌದು ಕೆನಡಾ ದೇಶದ ಅಕ್ಷಯ್ ಕುಮಾರ್ ಅವರು ಈ ಕುರಿತು ಮಾತನಾಡುತ್ತಿರುವಾಗ ಬೇರೆ ದೇಶದವರು ಮಾತನಾಡುವುದರಲ್ಲಿ ತಪ್ಪೇನಿದೆ , ಬೇರೆ ದೇಶದವರು ಮಾತನಾಡುವುದು ತಪ್ಪು ಎಂದಾದರೆ ಅಕ್ಷಯ್ ಕುಮಾರ್ ಅವರು ಮಾತನಾಡುವುದು ತಪ್ಪೇ ಅಲ್ಲವೇ? ಎಷ್ಟೇ ಆದರೂ ಹೊರಗಿನವರು ಹೊರಗಿನವರೇ ಎಂಬುದು ರಮ್ಯಾ ಅವರ ಟಾಂಗ್! ಇನ್ನು ರಮ್ಯಾ ಅವರ ಈ ಎಪಿಕ್ ರಿಪ್ಲೈ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.