ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಟೈಟಲ್ ಟ್ರ್ಯಾಕ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಮಿಶ್ರಪ್ರತಿಕ್ರಿಯೆ ಪಡೆದುಕೊಂಡು ಯೂಟ್ಯೂಬ್ ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ನಲ್ಲಿ ಇತ್ತು. ಹಾಡು ಹೇಳಿಕೊಳ್ಳುವಷ್ಟೇನೂ ಚೆನ್ನಾಗಿರಲಿಲ್ಲ , ಮ್ಯೂಸಿಕ್ ಓಕೆ ಓಕೆ , ಇನ್ನು ಚಿತ್ರದ ದೃಶ್ಯಗಳಂತೂ ಹಾಡಿನದ್ದೋ ಅಥವಾ ಸಾಹಸ ದೃಶ್ಯದ್ದೋ ಎಂಬುದೇ ತಿಳಿಯದಷ್ಟು ಗೊಂದಲಮಯವಾಗಿತ್ತು..
ಜನಕ್ಕೆ ಅಷ್ಟೇನೂ ಇಷ್ಟವಾಗದ ಈ ಹಾಡು ಯೂಟ್ಯೂಬ್ ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ಗೆ ಬಂದದ್ದು ಮಾತ್ರ ಯಾರ ಕೈ ಚಳಕವೋ ಏನೋ ಗೊತ್ತಿಲ್ಲ. ನಂಬರ್ ಒನ್ ಟ್ರೆಂಡಿಂಗ್ ನಲ್ಲಿ ಮೆರೆಯುತ್ತಿದ್ದ ಪೊಗರು ಟೈಟಲ್ ಹಾಡನ್ನು ಸದ್ಯಕ್ಕೆ ಯಾರು ನಂಬರ್ ಒನ್ ಟ್ರೆಂಡಿಂಗ್ ನಿಂದ ಕೆಳಗಿಳಿಸಲು ಸಾಧ್ಯವಿಲ್ಲ ಎಂದು ಪೊಗರು ಚಿತ್ರಕ್ಕೆ ಇರುವ ಒಂದಷ್ಟು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದರು. ಆದರೆ ಈ ಹಾಡಿಗೆ ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದು ರಾಬರ್ಟ್ ಟ್ರೈಲರ್..
ರಾಬರ್ಟ್ ಟ್ರೈಲರ್ ಬಿಡುಗಡೆಯಾಗಿ 5ಗಂಟೆಗಳ ಒಳಗೆ ನಂಬರ್ ವನ್ ಸ್ಥಾನಕ್ಕೆ ಏರಿ ಪೊಗರು ಟೈಟಲ್ ಟ್ರ್ಯಾಕ್ ಅನ್ನು ಕೆಳಕ್ಕೆ ದಬ್ಬಿದೆ. ಕಂಟೆಂಟ್ ಇದ್ದರೆ ಯಾವುದಾದರೂ ಸಹ ಗೆಲ್ಲುತ್ತದೆ ಎಂಬುದನ್ನು ರಾಬರ್ಟ್ ಟ್ರೈಲರ್ ಮತ್ತೊಮ್ಮೆ ಸಾಬೀತುಪಡಿಸಿದೆ. ಅಚ್ಚುಕಟ್ಟಾಗಿ ಕಟ್ ಮಾಡಲಾಗಿರುವ ರಾಬರ್ಟ್ ಚಿತ್ರದ ಟ್ರೈಲರ್ ಅತಿವೇಗವಾಗಿ ನಂಬರ್ ಒನ್ ಟ್ರೆಂಡಿಂಗ್ ಸ್ಥಾನವನ್ನು ಅಲಂಕರಿಸಿದೆ.
ಕೆಲವೊಂದಷ್ಟು ಜನ ಧ್ರುವ ಸರ್ಜಾ ಅವರನ್ನ ದರ್ಶನ್ ಅವರ ರೇಂಜ್ ಗೆ ಹೋಲಿಸಿ, ಪೊಗರು ಚಿತ್ರವನ್ನು ರಾಬರ್ಟ್ ಚಿತ್ರದ ರೇಂಜಿಗೆ ಕಂಪೇರ್ ಮಾಡಿ ಮಾತನಾಡಿಕೊಳ್ಳುತ್ತಿದ್ದರು. ಆದರೆ ಅಸಲಿಯತ್ತೇ ಬೇರೆ ರಾಬರ್ಟ್ ಯಾವತ್ತಿದ್ದರೂ ಸಹ ಟಾಪ್..! ಇದಕ್ಕೆ ಕಾರಣ ರಾಬರ್ಟ್ ಚಿತ್ರದ ಟ್ರೈಲರ್ ನಲ್ಲಿ ಇರುವ ಅಚ್ಚುಕಟ್ಟುತನ, ಒಳ್ಳೆಯ ಮ್ಯೂಸಿಕ್ & ಅತ್ಯದ್ಬುತ ವಿಷ್ಯುವಲ್ಸ್.. ಇವೆಲ್ಲ ಸೇರಿ ಪ್ರೇಕ್ಷಕರನ್ನು ಪದೇಪದೆ ಟ್ರೈಲರ್ ವೀಕ್ಷಿಸುವಂತೆ ಮಾಡಿದೆ ರಾಬರ್ಟ್..
4 ಜನರನ್ನ ಎತ್ತಿ ಗಾಳಿಗೆ ಬಿಸಾಕುವುದು , ಮಹಿಳೆಯರನ್ನ ಎಳೆದಾಡುವುದು , ನಟಿಯ ವಸ್ತ್ರವನ್ನು ತೆಗೆದುಕೊಂಡು ಪ್ಯಾಂಟಿಗೆ ಸಿಕ್ಕಿಸಿ ನೃತ್ಯ ಮಾಡುವುದು.. ಇಂಥದ್ದನ್ನೆಲ್ಲ ಯಾರು ಸ್ವಾಮಿ ನೋಡ್ತಾರೆ? ಕನ್ನಡದಲ್ಲಿ ಬೇರೆ ಯಾವುದೇ ಚಿತ್ರದ ಟ್ರೈಲರ್ & ಟೀಸರ್ ಬಿಡುಗಡೆ ಆಗದ ಕಾರಣ ಪೊಗರು ಚಿತ್ರದ ಟೈಟಲ್ ಟ್ರ್ಯಾಕ್ ಸದ್ದು ಮಾಡುತ್ತಿತ್ತು ಅಷ್ಟೇ.. ಆದರೆ ಡಿ ಬಾಸ್ ಆಗಮನವಾದ ಬಳಿಕ ಪೊಗರು ಚಿತ್ರದ ಟೈಟಲ್ ಟ್ರ್ಯಾಕ್ ತಣ್ಣಗೆ ಮಲಗಿ ಬಿಟ್ಟಿದೆ..