No menu items!
14.8 C
Munich
Tuesday, June 16, 2026

ಸೇನಾ ಪರೀಕ್ಷೆ ರದ್ದು- ಕಾರಣ ಏನ್ ಗೊತ್ತಾ?

Must read

ಫೆಬ್ರುವರಿ 28 (ಭಾನುವಾರ) ರಂದು ಜೆನೆರಲ್‌ ಡ್ಯೂಟಿ ಯೋಧರ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಕಿಡಿಗೇಡಿಗಳು ಸೋರಿಕೆ ಮಾಡಲಾದ ಹಿನ್ನೆಲೆಯಲ್ಲಿ ಸದರಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಈ ಕುರಿತು ಪ್ರಕಟಣೆ ಮೂಲಕ ತಿಳಿಸಿರುವ ಸೇನೆಯು ರಾಷ್ಟ್ರವ್ಯಾಪಿ ಯೋಧರ ನೇಮಕಾತಿಗೆ ನಡೆದ ಪರೀಕ್ಷೆಯನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದೆ.

ಭಾರತೀಯ ಸೇನೆಯು ಯೋಧರ ನೇಮಕಾತಿಗೆ ದೇಶದಾದ್ಯಂತ 52 ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಸಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಪುಣೆಯಲ್ಲಿ ಮೂವರು ವ್ಯಕ್ತಿಗಳನ್ನು ಸ್ಥಳೀಯ ಪೊಲೀಸರ ಸಹಾಯದೊಂದಿಗೆ ಅರೆಸ್ಟ್‌ ಮಾಡಲಾಗಿದೆ. ಇವರ ಪೈಕಿ ಒಬ್ಬ ಮಾಜಿ ಸೈನಿಕನು ಅರೆಸ್ಟ್‌ ಆಗಿದ್ದಾನೆ ಎಂದು ತಿಳಿದಿದೆ.

ಇಂಟೆಲಿಜೆನ್ಸ್‌ ಮಾಹಿತಿ ಪ್ರಕಾರ ಸೈನಿಕ (ಜೆನೆರಲ್ ಡ್ಯೂಟಿ) ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಲೀಕ್‌ ಆಗಿರುವುದನ್ನು, ಪುಣೆ ಸದರ್ನ್ ಕಮಾಂಡ್ಸ್‌ ಮಿಲಿಟರಿ ಇಂಟೆಲಿಜೆನ್ಸ್‌ ತಂಡ ಮತ್ತು ಪುಣೆ ಕ್ರೈಂಮ್ ಬ್ರ್ಯಾಂಚ್‌ ಕಾರ್ಯಾಚರಣೆ ನಡೆಸಿ ಸೋರಿಕೆಯಾದ ಪೇಪರ್‌ ಅನ್ನು ಹಿಂಪಡೆದಿವೆ. ತದನಂತರ ಪರೀಕ್ಷೆಯನ್ನೇ ರದ್ದು ಮಾಡುವ ನಿರ್ಧಾರವನ್ನು ಸೇನೆಯು ತೆಗೆದುಕೊಂಡಿದೆ. ಪ್ರಶ್ನೆ ಪತ್ರಿಕೆ ಹೇಗೆ ಸೋರಿಕೆ ಮಾಡಲಾಯಿತು ಎಂದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಪ್ರಸ್ತುತ ಅರೆಸ್ಟ್‌ ಆದವರು ಪ್ರಶ್ನೆ ಪತ್ರಿಕೆಯನ್ನು ಒಬ್ಬ ಅಭ್ಯರ್ಥಿಗೆ 4 ರಿಂದ 5 ಲಕ್ಷದವರೆಗೆ ಚಾರ್ಜ್‌ ಮಾಡುತ್ತಿದ್ದರು ಎಂದು ತನಿಖೆಯಿಂದ ಬಹಿರಂಗವಾಗಿದೆ.

ಪ್ರಸ್ತುತ ರದ್ದು ಮಾಡಲಾದ ಪರೀಕ್ಷೆಯ ಪರಿಷ್ಕೃತ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ ಎಂದು ಸೇನೆ ಹೇಳಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article