ಸ್ಯಾಂಡಲ್ವುಡ್ ನ ಬ್ಲಾಕ್ ಕೋಬ್ರಾ ಎಂದೇ ಹೆಸರು ಪಡೆದಿರುವ ದುನಿಯಾ ವಿಜಯ್ ಇದೀಗ ತಾವೇ ನಿರ್ದೇಶಸಿರುವ ಸಲಗ ಚಿತ್ರದ ಬಿಡುಗಡೆ ಸಿದ್ಧತೆಯಲ್ಲಿದ್ದಾರೆ,ನಿನ್ನೆ ಸಲಗ ವಿಜಯ್ ಅಭಿಮಾನಿಗಳ ಸೇವಾ ಸಮಿತಿ ಮಾಲೂರು (ರಿ) ಆಯೋಜಿಸಿದ್ದ ಕ್ರಿಕೆಟ್ ಟೂರ್ನಿ ಯಶಸ್ವಿಯಾಗಿದೆ. ಮಾಲೂರಿನ ಹೋಂಡಾ ಕ್ರಿಡಾಂಗಣದಲ್ಲಿ ಆಯೋಜಿಸಿದ್ದ ಈ ಪಂದ್ಯವನ್ನ ನೋಡಲು ಕೋಲಾರ ಜಿಲ್ಲೆಯ ವಿವಿದೆಡೆಯಿಂದ ಹತ್ತು ಸಾವಿರಕ್ಕು ಹೆಚ್ಚು ದುನಿಯಾ ವಿಜಯ್ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಜಮಾಯಿಸಿದ್ದರು.
ಈ ಕ್ರಿಕೆಟ್ ಕೂಟದಲ್ಲಿ ಸಲಗ ಚಿತ್ರ ತಂಡ ಪ್ರದರ್ಶನ ಪಂದ್ಯವನ್ನಾಡಿ ವಿಜಯ ಸಾಧಿಸಿದೆ. ಇದೇ ಸಂಭ್ರಮದಲ್ಲಿ ನಾಯಕ ದುನಿಯಾ ವಿಜಯ್ ನಿರ್ಮಾಪಕ ಕೆ ಪಿ ಶ್ರಿಕಾಂತ್ ಸೇರಿದಂತೆ ಸಲಗ ಚಿತ್ರತಂಡ ಮಾಲೂರಿನಲ್ಲಿರುವ ಡಾ. ರಾಜ್ಕುಮಾರ್ಹಾಗು ಡಾ. ವಿಷ್ಣುವರ್ಧನ್ ಅವರ ಪುತ್ಥಳಿಗೆ ಮಾಲೆಯನ್ನು ಅರ್ಪಿಸಿದರು.