ಭಾರತದ ಯುವ ಆಟಗಾರರು ಅತ್ಯದ್ಭುತ ಪ್ರದರ್ಶನವನ್ನು ಕಡೆಯ 2ಸರಣಿಗಳಿಂದ ತೋರಿಸುತ್ತಿದ್ದಾರೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ದೇಶಗಳ ವಿರುದ್ಧದ ಸರಣಿಗಳಲ್ಲಿ ಭಾರತದ ಯುವ ಕ್ರಿಕೆಟಿಗರು ಮಿಂಚುತ್ತಿದ್ದಾರೆ. ಈ ಕುರಿತಾಗಿ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ್ದಾರೆ.
ಕಳೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ನಾನು ಟೀಮ್ ಇಂಡಿಯಾದ ಯುವ ಆಟಗಾರರ ಆಟವನ್ನು ಗಮನಿಸುತ್ತಿದ್ದೇನೆ ಇದೀಗ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಸರಣಿಯವರೆಗೂ ಸಹ ಅವರು ಅತ್ಯದ್ಭುತ ಪ್ರದರ್ಶನವನ್ನು ತೋರಿ ಟೀಮ್ ಇಂಡಿಯಾ ಗೆಲ್ಲುವಲ್ಲಿ ದೊಡ್ಡ ಪಾತ್ರ ವಹಿಸುತ್ತಿದ್ದಾರೆ. ಒಬ್ಬ ಇಲ್ಲದಿದ್ದರೆ ಮತ್ತೊಬ್ಬ ಯುವ ಆಟಗಾರ ಸರಿಯಾದ ಸಮಯಕ್ಕೆ ಅದ್ಭುತ ಪ್ರದರ್ಶನ ತೋರಿ ಟೀಮ್ ಇಂಡಿಯಾ ಗೆಲುವಿಗೆ ನೆರವಾಗುತ್ತಿದ್ದಾರೆ ಎಂದು ಇಂಜಮಾಮ್ ಹೇಳಿದ್ದಾರೆ.
ಇದನ್ನೆಲ್ಲ ನೋಡಿದರೆ ಟೀಮ್ ಇಂಡಿಯಾದ ಬಳಿ ಯುವ ಪ್ರತಿಭೆಗಳನ್ನು ಉತ್ಪಾದಿಸುವ ಯಂತ್ರವಿದೆ ಅನಿಸುತ್ತದೆ ಎಂದು ಇಂಜಮಾಮ್ ಉಲ್ ಹಕ್ ಅವರು ಹೇಳಿದ್ದಾರೆ.