No menu items!
16.9 C
Munich
Monday, June 15, 2026

ನಾಳೆಯಿಂದ ಯುವರತ್ನ ಅಡ್ವಾನ್ಸ್ ಬುಕ್ಕಿಂಗ್ ಸ್ಟಾರ್ಟ್

Must read

ರಾಜ್ಯಾದ್ಯಂತ ಯುವರತ್ನ ಚಿತ್ರದ ವಿವರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೋನಾವೈರಸ್ ಇದ್ದರೂ ಸಹ ಲೆಕ್ಕಿಸದೆ ಪುನೀತ್ ಚಿತ್ರವನ್ನ ಕಣ್ತುಂಬಿಕೊಳ್ಳಲು ಪುನೀತ್ ಅಭಿಮಾನಿಗಳು ಮತ್ತು ಸಿನಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಎಲ್ಲರಿಗೂ ತಿಳಿದಿರುವ ಹಾಗೆ ಪುನೀತ್ ರಾಜ್ ಕುಮಾರ್ ರವರಿಗೆ ಅಭಿಮಾನಿಗಳನ್ನ ಹೊರತುಪಡಿಸಿ ಫ್ಯಾಮಿಲಿ ಪ್ರೇಕ್ಷಕರ ವರ್ಗ ಅತಿ ದೊಡ್ಡ ಮಟ್ಟದಲ್ಲಿದೆ.

 

 

 

ಹೀಗಾಗಿ ಪುನೀತ್ ಅಭಿನಯದ ಸಿನಿಮಾಗಳೆಂದರೆ ಅತಿ ಹೆಚ್ಚು ಜನ ವೀಕ್ಷಿಸುವುದು ಕಾಮನ್. ಯಾವಾಗಲೂ ಮನೆಮಂದಿಯೆಲ್ಲಾ ಬಂದು ನೋಡುವಂತಹ ಸಿನಿಮಾಗಳನ್ನು ನೀಡುವ ಪುನೀತ್ ಅವರ ಯುವರತ್ನ ಚಿತ್ರದ ಟ್ರೈಲರ್ ಬಿಡುಗಡೆಯಾದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. ಹೀಗಾಗಿ ಅಡ್ವಾನ್ಸ್ ಬುಕ್ಕಿಂಗ್ ಗೋಸ್ಕರ ಹೆಚ್ಚುಮಂದಿ ಕಾಯುತ್ತಿದ್ದು ನಾಳೆ ಬೆಳಿಗ್ಗೆ 9 ಗಂಟೆಯಿಂದ ಮುಂಗಡ ಬುಕಿಂಗ್ ಅಧಿಕೃತವಾಗಿ ತೆರೆಯಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿದೆ.

 

 

ಬಿಡುಗಡೆಗೆ ಇನ್ನೂ 5ದಿನ ಇರುವ ಮುನ್ನವೇ ಅಡ್ವಾನ್ಸ್ ಬುಕಿಂಗ್ ತೆರೆಯಲಾಗುತ್ತಿದ್ದು ಯುವರತ್ನ ಚಿತ್ರದ ಮೇಲಿನ ಕ್ರೇಜ್ ಎಂತಹದ್ದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article