ರಿಷಭ್ ಪಂತ್.. ಹೆಚ್ಚಾಗಿ ಟೀಕೆಗೆ ಒಳಗಾಗಿದ್ದ ಈ ಆಟಗಾರ ಕಂಬ್ಯಾಕ್ ಮಾಡಿ ಇದೀಗ ಎಲ್ಲರ ಅಚ್ಚುಮೆಚ್ಚಿನ ಆಟಗಾರ ಎನಿಸಿಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಆಸ್ಟ್ರೇಲಿಯಾ ವಿರುದ್ಧದ ಸರಣಿ ಇಂದೀಚೆಗೆ ರಿಷಬ್ ಪಂತ್ ಪಕ್ಕಾ ಕ್ರಿಕೆಟರ್ ಆಗಿ ಬಿಟ್ಟಿದ್ದಾರೆ. ಯಾವುದೇ ಬೌಲರ್ ಇರಲಿ ಹಿಗ್ಗಾಮುಗ್ಗಾ ಚಚ್ಚುವ ಪಂತ್ ಇದೀಗ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಗಾಯಕ್ಕೆ ಒಳಗಾದ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಇದೀಗ ರಿಷಬ್ ಪಂತ್ ಅವರ ಹೆಗಲ ಮೇಲೆ ಬಿದ್ದಿದೆ. 23 ವರ್ಷ ವಯಸ್ಸಿನ ಪಂತ್ ಇಷ್ಟು ದೊಡ್ಡ ಜವಾಬ್ದಾರಿಯನ್ನು ಹೊರಲಿದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಲಿದ್ದಾರೆ ಎಂಬ ನಂಬಿಕೆ ಎಲ್ಲರಲ್ಲಿಯೂ ಇದೆ. ಈ ಬಾರಿಯ ಐಪಿಎಲ್ ನಲ್ಲಿ ಇರುವ ಬೇರೆಲ್ಲ ನಾಯಕರಿಗೆ ಹೋಲಿಸಿದರೆ ಪಂತ್ ಅತಿ ಕಿರಿಯ ನಾಯಕನಾಗಿದ್ದು ಇಷ್ಟು ಚಿಕ್ಕ ವಯಸ್ಸಿಗೆ ಎಷ್ಟು ದೊಡ್ಡ ಸಾಧನೆ ಮಾಡುತ್ತಿರುವುದು ನಿಜಕ್ಕೂ ಪ್ರಶಂಸನೀಯ…