No menu items!
11.1 C
Munich
Wednesday, April 29, 2026

ಯುವರತ್ನ ಪಾರಿವಾಳ ಡೈಲಾಗ್ ಕೇಳಿದ್ದೀರಾ?

Must read

ಪಾರಿವಾಳಕ್ಕೂ ರಾಜವಂಶಕ್ಕೂ ಹಿಂದಿನಿಂದಲೂ ಸಹ ಒಂದು ರೀತಿಯ ಅವಿನಾಭಾವ ಸಂಬಂಧವಿದೆ. ಕಸ್ತೂರಿ ನಿವಾಸದಲ್ಲಿ ಅಣ್ಣಾವ್ರು ಮತ್ತು ಪಾರಿವಾಳದ ನಡುವೆ ನಡೆಯುವ ಕಥೆ ಎಂಥವರ ಕಣ್ಣಲ್ಲೂ ಸಹ ಕಣ್ಣೀರನ್ನು ತರಿಸುವಂಥದ್ದು. ಅಪ್ಪು ಅಭಿನಯದ ರಾಜಕುಮಾರ ಚಿತ್ರ ದಲ್ಲಿಯೂ ಸಹ ಪಾರಿವಾಳ ಬಂದು ಹೋಗುವ ಒಂದು ಚಿಕ್ಕ ಸೀನ್ ಇದೆ. ಅದೃಶ್ಯ ಚಿಕ್ಕದಾದರೂ ಚಿತ್ರದಲ್ಲಿ ಆ ದೃಶ್ಯ ಬಂದಾಗ ಅಭಿಮಾನಿಗಳಿಗೆ ಆಗುವ ರೋಮಾಂಚನ ಅಂತಿಥದ್ದಲ್ಲ.

 

ಇದೀಗ ಅಂತಹದ್ದೇ ಪಾರಿವಾಳದ ನಂಟು ಯುವರತ್ನ ಚಿತ್ರದಲ್ಲಿಯೂ ಇರಲಿದೆ ಎಂಬುದು ಕನ್ಫರ್ಮ್ ಆಗಿದೆ.ಆಂಕರ್ ಅನುಶ್ರೀ ಯೂಟ್ಯೂಬ್ ಚಾನೆಲ್ ನಲ್ಲಿ ಯುವರತ್ನ ಚಿತ್ರದ ಪ್ರದರ್ಶನ ನಡೆದಿದೆ.ಈ ಸಂದರ್ಶನದಲ್ಲಿ ಯುವರತ್ನ ಚಿತ್ರದ 1 ಡೈಲಾಗ್ ಅನ್ನು ಸಂತೋಷ್ ಆನಂದರಾಮ್ ಮತ್ತು ಪುನೀತ್ ರಾಜ್ ಕುಮಾರ್ ಬಿಚ್ಚಿಟ್ಟಿದ್ದಾರೆ. ಕಾಲೇಜಿನಲ್ಲಿ ಯುವಕರ ಗ್ಯಾಂಗ್ ಒಂದು ಪ್ರೀತಿಯ ಪಾರಿವಾಳ ಹಾರಿಹೋಯ್ತೋ ಗೆಳೆಯ ಎಂದು ಹಾಡು ಹಾಡುತ್ತಾರೆ , ಇದಕ್ಕೆ ಉತ್ತರಿಸುವ ಪುನೀತ್ ಪಾರಿವಾಳ ಎಲ್ಲಿಗೆ ಹಾರಿ ಹೋದರು ಬಂದು ಕೂರುವುದು ನಮ್ಮ ಹೆಗಲ ಮೇಲೆನೇ ಎಂದು ಕೌಂಟರ್ ನೀಡುತ್ತಾರೆ.

 

 

ಇದು ಯುವರತ್ನ ಚಿತ್ರದ ಒಂದು ದೃಶ್ಯದ ಸಂಭಾಷಣೆ. ಇದರ ಅರ್ಥ ಅಣ್ಣಾವ್ರ ಹೆಗಲ ಮೇಲೆ ಕಸ್ತೂರಿ ನಿವಾಸ ಚಿತ್ರದಲ್ಲಿ ಪಾರಿವಾಳ ಕೂತಿತ್ತು, ಅದೇ ರೀತಿ ರಾಜಕುಮಾರ ಚಿತ್ರದಲ್ಲಿ ಅಪ್ಪು ಅವರ ಮೇಲೆ ಪಾರಿವಾಳ ಬಂದು ಕೂತಿತ್ತು, ಹೀಗಾಗಿ ಈ ದೃಶ್ಯದಲ್ಲಿ ಪಾರಿವಾಳ ಎಲ್ಲಿಯೇ ಹೋದರೂ ನಮ್ಮ ಹೆಗಲ ಮೇಲೆನೇ ಕೂರಬೇಕು ಎಂದು ಪಂಚ್ ಡೈಲಾಗ್ ಅನ್ನು ಬರೆಯಲಾಗಿದೆ ಇದು ಅಪ್ಪು ಅಭಿಮಾನಿಗಳಿಗೆ ಥಿಯೇಟರ್ ನಲ್ಲಿ ಹಬ್ಬ ಮಾಡುವಂಥ ಅದೃಶ್ಯ ಆಗುವುದರಲ್ಲಿ ಯಾವುದೇ ಡೌಟ್ ಇಲ್ಲ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article