No menu items!
11.1 C
Munich
Wednesday, April 29, 2026

ಮೊದಲ ದಿನವೇ ಯುವರತ್ನನಿಗೆ ಪೈರಸಿ ಕಾಟ

Must read

ಇಂದು ವಿಶ್ವದಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಿರುವ ಯುವರತ್ನ ಚಿತ್ರ ಎಲ್ಲೆಡೆ ಉತ್ತಮ ಪ್ರಶಂಸೆಯನ್ನು ಪಡೆದುಕೊಳ್ಳುತ್ತಿದೆ. ಬಿಡುಗಡೆಗೂ ಮುನ್ನ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದ್ದ ಯುವರತ್ನ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಬರುತ್ತಿದ್ದು ಯುವರತ್ನ ಚಿತ್ರದ ಗೆದ್ದು ಬೀಗಿದೆ.

 

ರಾಜಕುಮಾರದಂತಹ ಮತ್ತೊಂದು ಫ್ಯಾಮಿಲಿ ಎಂಟರ್ ಟೈನರ್ ಚಿತ್ರವನ್ನು ಪುನೀತ್ ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನೀಡಿದೆ. ಇಷ್ಟೆಲ್ಲ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಯುವರತ್ನ ಚಿತ್ರಕ್ಕೆ ಇದೀಗ ಕಂಟಕ ಎದುರಾಗಿದ್ದು ಬಿಡುಗಡೆಯಾದ ಹತ್ತು ಗಂಟೆಗಳ ಒಳಗೆ ಮೊಬೈಲ್ ಗಳಲ್ಲಿ ಯುವರತ್ನ ಚಿತ್ರ ಹರಿದಾಡುತ್ತಿದೆ.

 

 

ಟೆಲಿಗ್ರಾಂ ಚಾನೆಲ್ಗಳಲ್ಲಿ ಕಿಡಿಗೇಡಿಗಳು ಯುವರತ್ನ ಚಿತ್ರವನ್ನು ಅಪ್ಲೋಡ್ ಮಾಡಿದ್ದು ಪೈರಸಿ ಮಾಡಿದ್ದಾರೆ. ಅಪ್ಪು ಅಭಿಮಾನಿಗಳು ಪೈರೇಟ್ ಆಗಿರುವ ಲಿಂಕ್ ಗಳನ್ನು ಡಿಸೇಬಲ್ ಮಾಡಿಸುತ್ತಿದ್ದು ಸಾಕಷ್ಟು ಪೈರಸಿ ಲಿಂಕ್ ಗಳನ್ನು ಈಗಾಗಲೇ ಡಿಲೀಟ್ ಮಾಡಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article