ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಯುಗಾದಿ ದಿನದಂದು ಹೊಂಬಾಳೆ ಫಿಲ್ಮ್ಸ್ ಭರ್ಜರಿ ಗಿಫ್ಟ್ ವೊಂದನ್ನು ನೀಡಿದೆ. ಇಂದು ಬೆಳಿಗ್ಗೆ ತಮ್ಮ ಮುಂದಿನ ಚಿತ್ರವನ್ನು ಸಂಜೆ ಘೋಷಿಸುವುದಾಗಿ ಹೇಳಿದ್ದ ಹೊಂಬಾಳೆ ಫಿಲ್ಮ್ಸ್ ಯಾವ ಚಿತ್ರವನ್ನು ಘೋಷಿಸಲಿದೆ ಎಂದು ಕನ್ನಡ ಚಿತ್ರರಂಗದ ಅಭಿಮಾನಿಗಳೆಲ್ಲರೂ ಕಾಯುತ್ತಿದ್ದರು. ಸಂಜೆ ಈ ಕುತೂಹಲಕ್ಕೆ ತೆರೆ ಬಿದ್ದಿದ್ದು ಮತ್ತೆ ಪುನೀತ್ ರಾಜ್ ಕುಮಾರ್ ಅವರಿಗೆ ಸಿನಿಮಾ ಮಾಡಲು ಹೊಂಬಾಳೆ ಫಿಲ್ಮ್ಸ್ ಮುಂದಾಗಿದೆ.
ಪುನೀತ್ ರಾಜ್ ಕುಮಾರ್ ಅವರಿಗೆ ಈಗಾಗಲೇ ನಿನ್ನಿಂದಲೇ , ರಾಜಕುಮಾರ ಮತ್ತು ಯುವರತ್ನ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಈಗ ಮತ್ತೊಂದು ಸಿನಿಮಾಕ್ಕೆ ಹಣ ಹೂಡಲು ಮುಂದಾಗಿದ್ದು ಮತ್ತೊಂದು ಹಿಟ್ ಚಿತ್ರವನ್ನು ನಿರೀಕ್ಷಿಸಬಹುದಾಗಿದೆ. ಇನ್ನು ಈ ಬಾರಿಯ ವಿಶೇಷವೇನೆಂದರೆ ಲೂಸಿಯಾ ಮತ್ತು ಯೂ ಟರ್ನ್ ಖ್ಯಾತಿಯ ಪವನ್ ಕುಮಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವುದು.
ಒಮ್ಮೆ ಕಣ್ಣು ಮುಚ್ಚಿ ಊಹಿಸಿಕೊಳ್ಳಿ ಲೂಸಿಯಾ ಖ್ಯಾತಿಯ ಟ್ಯಾಲೆಂಟೆಡ್ ನಿರ್ದೇಶಕ ಪವನ್ ಕುಮಾರ್ ಮತ್ತು ಬ್ರಿಲಿಯಂಟ್ ಆ್ಯಕ್ಟರ್ ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಸಿನಿಮಾ ಯಾವ ರೇಂಜಿಗೆ ಇರಬಹುದು ಎಂಬುದನ್ನು. ಸದಾ ಕಂಟೆಂಟ್ ಮೇಲೆ ಕೆಲಸ ಮಾಡುವ ಪವನ್ ಕುಮಾರ್ ಮತ್ತು ಕಂಟೆಂಟ್ ಚಿತ್ರಗಳಲ್ಲಿ ಹೆಚ್ಚಾಗಿ ಅಭಿನಯಿಸಲು ಇಷ್ಟ ಪಡುವ ಪುನೀತ್ ರಾಜ್ ಕುಮಾರ್ , ಈ ಇಬ್ಬರೂ ಸಹ ಒಟ್ಟಿಗೆ ಸೇರಿದರೆ ಯಾವ ರೇಂಜಿನ ಸಿನಿಮಾ ಬರಬಹುದು ಎಂಬುದನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ ಅಷ್ಟರಮಟ್ಟಿಗಿದೆ ಈತನ ಕಾಂಬೊ.. ಈ ಕಾಂಬೊ ಸಿನಿಮಾ ಅನೌನ್ಸ್ ಆಗ್ತಾ ಇದ್ದಂತೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಸುದ್ದಿ ತಿಳಿದ ಪುನೀತ್ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.