No menu items!
12.4 C
Munich
Wednesday, April 29, 2026

ಯುವರತ್ನದಲ್ಲಿ ಗಡ್ಡ ಹೊತ್ತು ಬೆಲ್ ಬಾರಿಸುವವನಿಗೆ ಮನೆ ಕಟ್ಟಿಸಿ ಕೊಟ್ಟ ಪುನೀತ್

Must read

ಯುವರತ್ನ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ಯಾರಿಗೆ ತಾನೆ ಇಷ್ಟ ಪಡೋಕೆ ಸಾಧ್ಯವಿಲ್ಲ ಹೇಳಿ. ಚಿತ್ರವನ್ನು ಪೂರ್ತಿ ನೋಡಿ ಕುಳಿತಿದ್ದ ಪ್ರೇಕ್ಷಕನ ಕಣ್ಣಲ್ಲಿ ಒಂದೇ ಸೆಕೆಂಡ್ ನಲ್ಲಿ ಕಣ್ಣೀರು ತರಿಸುವ ದೃಶ್ಯವದು. ಬೆಲ್ ಬಾರಿಸುವ ಪಾತ್ರಧಾರಿಯಾದ ಎಂ ಕೆ ಮಠ ಅವರು ನಿಂತಿರುತ್ತಾರೆ ಅಪ್ಪು ಓಡಿ ಬಂದು ಅವರನ್ನು ತಬ್ಬಿ ಅಳುತ್ತಾರೆ ಅಷ್ಟೇ ಸಾಕಿತ್ತು ನೋಡಿ ಫ್ಯಾಮಿಲಿ ಆಡಿಯನ್ಸ್ ಕಣ್ಣಲ್ಲಿ ನೀರು ತರಿಸಲು.. ತೆರೆಯ ಮೇಲೆ ಇಷ್ಟು ಅಚ್ಚುಕಟ್ಟಾಗಿ ಅಭಿನಯಿಸಿದ್ದ ಎಂ ಕೆ ಮಠ ಅವರು ಸಣ್ಣದೊಂದು ಮನೆ ಕಟ್ಟಿಸಬೇಕು ಎಂಬ ಆಸೆಯಿಂದ ಊರಿನಲ್ಲಿದ್ದ ತಮ್ಮ ಮನೆಯನ್ನು ಕೆಡವಿ ಹೊಸ ಮನೆ ಕಟ್ಟಲು ಆರಂಭಿಸಿದ್ದರು.

 

 

ಆದರೆ ಈಗಾಗಲೇ ಅಭಿನಯಿಸಿದ ಚಿತ್ರದ ನಿರ್ಮಾಪಕರು ಎಂ ಕೆ ಮಠ ಅವರಿಗೆ ಹಣವನ್ನು ನೀಡಲು ನಿರಾಕರಿಸಿದರು. ಹೀಗೆ ಇದ್ದ ಮನೆಯನ್ನು ಕೆಡವಿ ಪ್ಲಾಸ್ಟಿಕ್ ಗುಡಿಸಿನಲ್ಲಿ ವಾಸ ಮಾಡುವಂತಹ ಪರಿಸ್ಥಿತಿ ಗೆ ಬಂದಿದ್ದ ಎಂ ಕೆ ಮಠ ಅವರಿಗೆ ನೆನಪಾದದ್ದು ಪುನೀತ್ ರಾಜ್ ಕುಮಾರ್. ಹೇಗಿದ್ದರೂ ಯುವರತ್ನ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭವದು ಹೀಗಾಗಿ ಬಿಡುವಿನ ಸಮಯದಲ್ಲಿ ಅಪ್ಪು ಅವರ ಜೊತೆ ತಮ್ಮ ಕಷ್ಟವನ್ನು ಎಂ ಕೆ ಮಠ ಅವರು ತೋಡಿಕೊಂಡಿದ್ದಾರೆ. ಎಂ ಕೆ ಮಠ ಅವರ ಈ ಕಷ್ಟವನ್ನು ಆಲಿಸಿದ ಪುನೀತ್ ರಾಜ್ ಕುಮಾರ್ ಅವರು ಮನೆ ಅರ್ಧಕ್ಕೆ ನಿಂತಿರುವ ಕೆಲಸವನ್ನು ಸಂಪೂರ್ಣಗೊಳಿಸುವುದಾಗಿ ಎಂ ಕೆ ಮಠ ಅವರಿಗೆ ಭರವಸೆ ನೀಡಿದರು.

 

 

ಪುನೀತ್ ಅವರ ಈ ಭರವಸೆಯ ಮಾತುಗಳನ್ನು ಎಂ ಕೆ ಮಠ ಅವರು ಇತ್ತೀಚೆಗಷ್ಟೇ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರ ಜೊತೆ ಹಂಚಿಕೊಂಡಿದ್ದು ಪುನೀತ್ ಮಾಡಿದ ಸಹಾಯ ನೆನೆದು ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು. ಎಷ್ಟೇ ಆದರೂ ಅಣ್ಣಾವ್ರ ರಕ್ತ ಸುತ್ತಮುತ್ತಲಿನವರು ಕಷ್ಟ ಎಂದರೆ ಸಾಕು ಕೊಡುವ ಕೈ ಮುಂದೆ ಬಂದುಬಿಡುತ್ತದೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article