ಪ್ರೈಮ್ ನಿಂದ ಡಿ ಬಾಸ್ ಗೆ ಅವಮಾನ!

Must read

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ತೆರೆಕಂಡು ಚಿತ್ರಮಂದಿರದಲ್ಲಿ ಉತ್ತಮ ಪ್ರದರ್ಶನವನ್ನು ಕಂಡಿತ್ತು. ಇದೀಗ ರಾಬರ್ಟ್ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿಯೂ ಸಹ ಬಿಡುಗಡೆಗೊಂಡಿದೆ. ಪ್ರೈಮ್ ನಲ್ಲಿ ಬಿಡುಗಡೆಗೊಂಡ ರಾಬರ್ಟ್ ಚಿತ್ರವನ್ನು ವೀಕ್ಷಿಸಿದ ವೀಕ್ಷಕರು ಚಿತ್ರವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಆದರೆ ಅಮೆಜಾನ್ ಪ್ರೈಮ್ ರಾಬರ್ಟ್ ಚಿತ್ರದ ವಿಚಾರದಲ್ಲಿ ಎಡವಟ್ಟೊಂದನ್ನು ಮಾಡಿದೆ.

 

 

ಹೌದು ರಾಬರ್ಟ್ ಚಿತ್ರದ ಬಗೆಗಿನ ಮಾಹಿತಿಯಲ್ಲಿ ತಪ್ಪೊಂದನ್ನು ಮಾಡಿರುವ ಅಮೆಜಾನ್ ಪ್ರೈಮ್ ವಿರುದ್ಧ ಇದೀಗ ಡಿ ಬಾಸ್ ಅಭಿಮಾನಿಗಳು ಕೆಂಡಕಾರುತ್ತಿದ್ದಾರೆ. ಚಿತ್ರದಲ್ಲಿ ಅಭಿನಯಿಸಿರುವ ತಾರಾಗಣದ ವಿಭಾಗದಲ್ಲಿ ದರ್ಶನ್ ಅವರ ಹೆಸರನ್ನು ಪೋಷಕ ನಟ ಎಂದು ಪ್ರೈಮ್ ಬರೆದುಕೊಂಡಿದೆ. ದರ್ಶನ್ ಅವರನ್ನು ಪೋಷಕ ನಟ ಎಂದು ಪ್ರೇಮ ಬರೆದಿರುವುದಕ್ಕೆ ಡಿ ಬಾಸ್ ಅಭಿಮಾನಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

 

 

 

ಚಿತ್ರದಲ್ಲಿ ಅಭಿನಯಿಸಿರುವ ಸ್ಟಾರ್ ನಟರ ವಿಭಾಗಕ್ಕೆ ವಿನೋದ್ ಪ್ರಭಾಕರ್, ಆಶಾ ಭಟ್ ಮತ್ತು ಜಗಪತಿ ಬಾಬು ಅವರ ಹೆಸರನ್ನು ಸೇರಿಸಲಾಗಿದ್ದು ಪೋಷಕ ನಟ ಎಂಬ ಜಾಗಕ್ಕೆ ದರ್ಶನ್ ಅವರ ಹೆಸರನ್ನು ಸೇರಿಸಲಾಗಿದೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕೂಡಲೇ ಅಮೆಜಾನ್ ಪ್ರೈಮ್ ಈ ಎಡವಟ್ಟನ್ನು ತಿದ್ದಿಕೊಳ್ಳಬೇಕು ಎಂದು ದರ್ಶನ್ ಅಭಿಮಾನಿಗಳು ಪ್ರೈಮ್ ವಿರುದ್ಧ ಸಿಡಿದೆದ್ದಿದ್ದಾರೆ.

- Advertisement -spot_img

More articles

- Advertisement -spot_img

Latest article