ನಿಮಿಶಾಂಬ ಪ್ರೊಡಕ್ಷನ್ಸ್ ನ ಅಣ್ಣಯ್ಯ, ಬಿಂದಾಸ್, ಏನೋ ಒಂಥರಾ, ರನ್ನ ಖ್ಯಾತಿಯ ನಿರ್ಮಾಪಕ ಚಂದ್ರಶೇಖರ್ ಇನ್ನಿಲ್ಲ.
23 ದಿನಗಳ ಹಿಂದೆ ಕೋವಿಡ್ ಪಾಸಿಟೀವ್ ಆಗಿತ್ತು. ಮಣಿಪಾಲ್ ಸೆಂಟರ್ ಗೆ ಅಡ್ಮಿಟ್ ಮಾಡಲಾಗಿತ್ತು. ಕೋವಿಡ್ ವಾಸಿಯಾಗಿತ್ತಾದ್ರೂ, ಇದ್ದಕ್ಕಿದ್ದಂತೆ ಶ್ವಾಸಕೋಶದ ಸಮಸ್ಯ ಉಲ್ಬಣಗೊಂಡು, ಇಂದು ಬೆಳಗಿನಜಾವ ಸರಿ ಸುಮಾರು 3-4 ಗಂಟೆ ಸಮಯದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಚಂದ್ರಶೇಖರ್ ಅವ್ರು ಇತ್ತೀಚೆಗಷ್ಟೇ ಮಂಜು ಮಾಂಡವ್ಯ ನಿರ್ದೇಶನದಲ್ಲಿ ಉಪೇಂದ್ರ ಅವ್ರೊಟ್ಟಿಗೆ ಸಿನಿಮಾವೊಂದನ್ನ ಅನೌನ್ಸ್ ಮಾಡಿದ್ರು.
ಆದ್ರೆ ವಿಧಿಯಾಟ ಬೇರೆನೇ ಆಗಿದೆ. ಕೋಟಿ ನಿರ್ಮಾಪಕ ರಾಮು ಅವ್ರ ಜೊತೆಗೆ ಉದ್ಯಮ ಮತ್ತೊಂದು ಅನ್ನದಾತನ್ನ ಕೋವಿಡ್ ಕಿತ್ತುಕೊಂಡಿದೆ.
ಕೊರೊನಾ ವೈರಸ್ ರಾಜ್ಯದಲ್ಲಿ ರೌದ್ರ ನರ್ತನವನ್ನು ಮುಂದುವರೆಸಿದ್ದು ಚಂದನವನದ ಮತ್ತೊಂದು ಜೀವವನ್ನು ಬಲಿ ಪಡೆದಿದೆ. ದಿನದಿಂದ ದಿನಕ್ಕೆ ಕೊರೋನಾವೈರಸ್ ಹಾವಳಿ ರಾಜ್ಯದಲ್ಲಿ ಹೆಚ್ಚಾಗುತ್ತಲೇ ಇತ್ತು ಸಾವಿನ ಸಂಖ್ಯೆ ಏರುತ್ತಲೇ ಇದೆ. ಜನರು ಇದನ್ನೆಲ್ಲಾ ಗಮನಿಸಿ ಆದಷ್ಟು ಸುರಕ್ಷಿತವಾಗಿ ತಮ್ಮನ್ನ ತಾವು ನೋಡಿಕೊಳ್ಳುವುದು ಉತ್ತಮ.