ಅರ್ಜುನ್ ಗೌಡ.. ಕನ್ನಡ ಚಿತ್ರರಂಗದ ಯುವಪ್ರತಿಭೆ. ಇತ್ತೀಚೆಗಷ್ಟೇ ತೆರೆಕಂಡ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರ ಸಹಪಾಠಿಯಾಗಿ ಅರ್ಜುನ್ ಗೌಡ ಅಭಿನಯಿಸಿದ್ದರು. ಯುವರತ್ನ ಚಿತ್ರದಲ್ಲಿ ಬರುವ ಪುನೀತ್ ಕಾಲೇಜು ದಿನಗಳ ದೃಶ್ಯಗಳಲ್ಲಿ ಪುನೀತ್ ಅವರ ಜೊತೆ ಇರುವ ಪಾತ್ರವನ್ನು ಅರ್ಜುನ್ ಗೌಡ ನಿರ್ವಹಿಸಿದರು.

ಇದೆ ಅರ್ಜುನ್ ಗೌಡ ಇದೀಗ ಕೊರೋನಾವೈರಸ್ ವಿರುದ್ಧ ಹೋರಾಡಲು ಸ್ವ ಇಚ್ಛೆಯಿಂದ ಮುಂದೆ ಬಂದಿದ್ದಾರೆ. ದಿನದಿಂದ ದಿನಕ್ಕೆ ಸ್ಕುಮನ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು ಹೆಚ್ಚಿನ ಆ್ಯಂಬ್ಯುಲೆನ್ಸ್ ಗಳ ಅಗತ್ಯತೆ ಇದೆ. ಹೀಗಾಗಿ ಆ್ಯಂಬ್ಯುಲೆನ್ಸ್ ಚಲಾಯಿಸಲು ಡ್ರೈವರ್ ಗಳ ಅಗತ್ಯತೆ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದನ್ನು ಮನಗಂಡ ನಟ ಅರ್ಜುನ್ ಗೌಡ ತನ್ನಿಂದಾಗುವ ಸಹಾಯವನ್ನು ಮಾಡಿದ್ದಾರೆ.

ಆ್ಯಂಬ್ಯುಲೆನ್ಸ್ ಒಂದರ ಡ್ರೈವರ್ ಆಗುವ ಮೂಲಕ ಕೊರೊನಾ ವೈರಸ್ ವಿರುದ್ಧ ಹೋರಾಡಲು ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಕೊರೋನಾವೈರಸ್ ರೋಗಿಗಳನ್ನು ಸಾಗಿಸಲು ಆಂಬ್ಯುಲೆನ್ಸ್ ಮತ್ತು ಡ್ರೈವರ್ ಗಳ ಕೊರತೆ ಇರುವ ಈ ಸಂದರ್ಭದಲ್ಲಿ ಅರ್ಜುನ್ ಗೌಡ ಅವರು ತೆಗೆದುಕೊಂಡಿರುವ ಈ ನಿರ್ಧಾರ ನಿಜಕ್ಕೂ ಪ್ರಶಂಸನೀಯ.






