26/11 ದಾಳಿ ರೂವಾರಿ ಪಾಕ್ ಎಂದ ಚೀನಾ..! ಕೆಟ್ಟಮೇಲೆ ಬುದ್ದಿಬಂತಾ ಮಿಸ್ಟರ್ ಚೀನಾ..!?

Date:

ಸದಾ ಪಾಕಿಸ್ತಾನವನ್ನು ಬೆಂಬಲಿಸುತ್ತಿರುವ ಚೀನಾ ಈಗ ಉಲ್ಟಾ ಹೊಡೆಯುತ್ತಿದೆ. ನವೆಂಬರ್ 26, 2008ರಂದು ಮುಂಬೈನ ತಾಜ್ ಹೋಟೆಲ್ ಮೇಲೆ ದಾಳಿ ನಡೆಸಿದ್ದು ಪಾಕಿಸ್ತಾನದ ಉಗ್ರರೇ ಎಂದು ಬಹಿರಂಗವಾಗಿ ಒಪ್ಪಿಕೊಂಡಿದೆ. ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇರುವುದಾಗಿ ಮೊದಲ ಬಾರಿಗೆ ಚೀನಾ ಸಾರ್ವಜನಿಕವಾಗಿ ಒಪ್ಪಿಕೊಂಡಿದೆ. ಅಂದು ನಡೆದಿದ್ದ ದಾಳಿಯಲ್ಲಿ ವಿದೇಶಿಗರು ಸೇರಿದಂತೆ 164 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಘಟನೆಗೆ ಕಾರಣ ಪಾಕಿಸ್ತಾನವೇ ಅಂತ ಭಾರತ ಸರ್ಕಾರ ಹೇಳುತ್ತಲೇ ಬರುತ್ತಿದೆ. ಅದಕ್ಕೆ ಪೂರಕವಾಗಿ ದಾಳಿಯ ಪ್ರಮುಖ ರೂವಾರಿ ಡೆವಿಡ್ ಹೆಡ್ಲಿ ಕೂಡ ಅಮೆರಿಕಾದಲ್ಲಿ ಅರೆಸ್ಟ್ ಆಗಿ ಮಹತ್ವದ ಸಾಕ್ಷಿಗಳನ್ನು ನೀಡಿದ್ದಾನೆ. ಪಾಕ್‍ನ ಐಎಸ್‍ಐನ ಕೈವಾಡ ಇರೋದಾಗಿ ಆತ ಸಾಕ್ಷಿ ಹೇಳಿದ್ದ. ಇನ್ನು ಇಷ್ಟು ದಿನ ಪಾಕಿಸ್ತಾನಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಬೆಂಬಲ ನೀಡುತ್ತಿದ್ದ ಚೀನಾ ಈಗ ಪಾಕ್‍ನ ವಿರುದ್ಧವಾಗಿ ಬಹಿರಂಗ ಹೇಳಿಕೆ ನೀಡಿದೆ. ವಿಶ್ವಸಂಸ್ಥೆಯ ಪರಮಾಣು ಪೂರೈಕೆದಾರ ಸಮೂಹಕ್ಕೆ (ಎನ್‍ಎಸ್‍ಜಿ) ಸೇರ್ಪಡೆಯಾಗುವ ಭಾರತದ ಕನಸಿಗೂ ಚೀನಾ ಅಡ್ಡಗಾಲು ಹಾಕಿತ್ತು. ವಿಶ್ವಸಂಸ್ಥೆಯ ಖಾಯಂ ಸದಸ್ಯ ಸ್ಥಾನಕ್ಕೂ ಚೀನಾ ಒಪ್ಪಿಗೆ ನೀಡುತ್ತಿಲ್ಲ. ಹೀಗೆ ಪ್ರತಿ ಬಾರಿಯೂ ಪಾಕಿಸ್ತಾನವನ್ನು ಬೆಂಬಲಿಸುತ್ತಿದ್ದ ಚೀನಾ ನಡೆ ಅಚ್ಚರಿಗೆ ಮೂಡಿಸಿದೆ. ಚೀನಾದ ಸ್ಟೇಟ್ ಟೆಲಿವಿಷನ್ ಸಿಸಿಟಿವಿ9 ಇತ್ತೀಚೆಗೆ ಪ್ರಸಾರ ಮಾಡಿರುವ ಡಾಕ್ಯುಮೆಂಟರಿಯಲ್ಲಿ, ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ್ದ ಈ ಭಯೋತ್ಪಾದನೆ ಕೃತ್ಯದಲ್ಲಿ ಲಷ್ಕರ್ ಎ ತೊಯ್ಬಾದ ಪಾತ್ರ ಇದ್ದಿರುವುದಾಗಿ ಗುರುತಿಸಿದ್ದು, ಈ ದಾಳಿಯ ರೂವಾರಿ ಪಾಕ್ ಎಂದು ಬೊಟ್ಟು ಮಾಡಿದೆ.

  • ರಘು ಆರ್ ಇಂಜನಹಳ್ಳಿ

POPULAR  STORIES :

ನಾನು ಫ್ಲಾಪ್ ಹೀರೋ ಎಂದ ಜಗ್ಗುದಾದಾ..!!

ಇಪ್ಪತ್ತೊಂಬತ್ತು ಹೆಣದ ರಾಶಿ ಮೇಲೆ ಯುಪಿ ಸರ್ಕಾರ..! ಒಂದು ರೂಪಾಯಿಗೆ 40 ಲೀಟರ್ ಪೆಟ್ರೋಲ್..!!

ಮಿಸ್ಟರ್ ಪರಮೇಶ್ವರ್ ನಾಯಕ್..! ಯಾವಾಗ ರಾಜೀನಾಮೆ ಕೊಡ್ತೀರಾ..!?

ಆಂಧ್ರದಲ್ಲಿ ಮೀನಿನ ಮಳೆ..! ಈ ಮಳೆ ಸುರಿಯುವ ವಿಡಿಯೋ ನೋಡಿ..!

`ಅರೆಸ್ಟ್ ಕರೋ ಇಸ್ ಸಾಲಿಕೋ..!’ ವಾಂತಿ ಮಾಡಿಕೊಂಡ ಖೇಣಿ ನೀರಿಳಿಸಿದ ಅರ್ನಾಬ್..!

ಬಾಕ್ಸರ್ ಮಹಮ್ಮದ್ ಅಲಿ ಡೆತ್ ಸೀಕ್ರೆಟ್..! ಸತ್ತಮೇಲೂ ಅವರು ಬದುಕಿದ್ದರು..!

ಕೇಳ್ರಪ್ಪೊ ಕೇಳ್ರಿ ಫೇಸ್ ಬುಕ್ ಸಂಸ್ಥಾಪಕನ ಅಕೌಂಟ್ ಹ್ಯಾಕ್ ಆಯ್ತು…!! ಪಾಸ್‍ವರ್ಡ್ ಏನಿತ್ತು ಗೊತ್ತಾ..?

ದೇವೇಗೌಡರಿಗೆ ಮುಸ್ಲೀಮರನ್ನು ಕಂಡರಾಗಲ್ಲ..!! ಜೂನ್ ಹನ್ನೆರಡರಂದು ಜೆಡಿಎಸ್‍ನಿಂದ ಜಮೀರ್ ಔಟ್..!?

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...