No menu items!
11.1 C
Munich
Wednesday, April 29, 2026

ಭಾರತಕ್ಕೆ ಎಬಿಡಿ 47 ಕೋಟಿ ಕೊಟ್ರಾ? ಇಲ್ಲಿದೆ ಸತ್ಯಾಂಶ!

Must read

ಸಿನಿಮಾ ನಟರ ಆಗಲಿ ಅಥವಾ ಕ್ರಿಕೆಟಿಗರ ಆಗಲಿ, ಅವರ ಮೇಲಿನ ಅಭಿಮಾನ ಆ ಅಭಿಮಾನಕ್ಕಷ್ಟೇ ಸೀಮಿತವಾಗಬೇಕೆ ಹೊರತು ಅದನ್ನು ಮೀರಬಾರದು. ಒಂದುವೇಳೆ ಆ ಅಭಿಮಾನವನ್ನೂ ಮೀರಿ ಹೆಚ್ಚಿನ ಪ್ರೀತಿ ಹುಚ್ಚು ಆ ಆಟಗಾರ ಅಥವಾ ನಟನ ಮೇಲೆ ಹುಟ್ಟಿದರೆ ಇಂತಹ ಇಲ್ಲ ಸಲ್ಲದ ಬಿಟ್ಟಿ ಪ್ರಚಾರಗಳು ಹುಟ್ಟಿಕೊಂಡು ಬಿಡುತ್ತವೆ.

 

 

ಹೌದು ಸೆಲೆಬ್ರಿಟಿಗಳ ಮೇಲಿನ ಅತಿಯಾದ ಹುಚ್ಚು ಸುಳ್ಳು ಸುದ್ದಿಗಳಿಗೆ ನಾಂದಿ.. ಈ ಹಿಂದೆ ಹಲವಾರು ನಟರ ಅಭಿಮಾನಿಗಳು ನಮ್ಮ ನಟ ಕೊರೋನಾವೈರಸ್ ವಿರುದ್ಧದ ಹೋರಾಟಕ್ಕೆ ಅಷ್ಟು ಕೋಟಿ ಕೊಟ್ಟಿದ್ದಾರೆ, ಇಷ್ಟು ಕೋಟಿ ಕೊಟ್ಟಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಹರಡಿದ್ದರು. ಅದೆಲ್ಲಾ ಸುಳ್ಳು ಸುದ್ದಿ ಎಂದು ತಿಳಿಯಲು ಸಾಮಾನ್ಯ ಜನರಿಗೆ ಹೆಚ್ಚು ಸಮಯ ಹಿಡಿಯಲಿಲ್ಲ. ಇದೀಗ ಅಂತಹದ್ದೇ ಮತ್ತಷ್ಟು ಸಾಲು ಸಾಲು ಸುಳ್ಳುಸುದ್ದಿಗಳು ನಮ್ಮ ನಿಮ್ಮ ನಡುವೆಯೇ ಹರಿದಾಡುತ್ತಿವೆ.

 

 

ಅದರಲ್ಲಿ ಪ್ರಮುಖವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಎಬಿ ಡಿ ವಿಲಿಯರ್ಸ್ ಭಾರತದ ಕೊರೋನಾವೈರಸ್ ವಿರುದ್ಧದ ಹೋರಾಟಕ್ಕೆ 47.5 ಕೋಟಿ ಕೊಟ್ಟಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಎಷ್ಟೋ ಜನ ಎಬಿಡಿವಿಲಿಯರ್ಸ್ ಅವರು ಇಷ್ಟು ದೊಡ್ಡ ಮಟ್ಟದ ಮೊತ್ತವನ್ನು ದಾನ ಮಾಡಿದ್ದಾರೆ ಎಂದೇ ತಿಳಿದಿದ್ದಾರೆ. ಆದರೆ ಸತ್ಯಾಂಶವೆನೆಂದರೆ ಎಬಿಡಿವಿಲಿಯರ್ಸ್ ಅವರು ಯಾವುದೇ ರೀತಿಯ ಧನಸಹಾಯವನ್ನು ಕೊರೋನಾವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ ಮಾಡಿಯೇ ಇಲ್ಲ. ಹೀಗಾಗಿ ಎಬಿಡಿವಿಲಿಯರ್ಸ್ ಅವರು 47.5 ಕೋಟಿ ರೂಪಾಯಿ ಹಣವನ್ನು ಕೊರೋನಾವೈರಸ್ ವಿರುದ್ಧದ ಹೋರಾಟಕ್ಕೆ ನೀಡಿದ್ದಾರೆ ಎಂಬುದು ಅಕ್ಷರಶಃ ಸುಳ್ಳು ಸುದ್ದಿ. ಇಂತಹ ಸುದ್ದಿಯನ್ನು ಹಂಚಿ ಇತರರಿಗೆ ತಪ್ಪು ಮಾಹಿತಿಯನ್ನು ನೀಡುವುದನ್ನು ಆದಷ್ಟು ಕಡಿಮೆ ಮಾಡಿ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article