No menu items!
11.1 C
Munich
Wednesday, April 29, 2026

ಕೊರೋನಾ : 480 ಸಾವು , 39,510 ಕೇಸ್

Must read

ಬೆಂಗಳೂರು: ಸೋಮವಾರ ಕಡಿಮೆಯಾಗಿದ್ದ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಂದು ಕೊಂಚ ಏರಿಕೆಯಾಗಿದ್ದು, 39,510 ಹೊಸ ಪ್ರಕರಣಗಳು ವರದಿಯಾಗಿದೆ.

ರಾಜ್ಯದಲ್ಲಿ ಕೊರೊನಾ ಆರ್ಭಟ ಮುಂದುವರಿದಿದ್ದು, ಚಿತ್ರದುರ್ಗದಲ್ಲಿ 4 ವರ್ಷದ ಬಾಲಕ ಸೇರಿದಂತೆ 480 ಮಂದಿ ಮೃತಪಟ್ಟಿದ್ದಾರೆ. ಏಪ್ರಿಲ್ ನಲ್ಲಿ ಮೃತಪಟ್ಟವರ ವಿವರಗಳನ್ನು ಬಿಬಿಎಂಪಿ ಆರೋಗ್ಯ ಇಲಾಖೆಗೆ ತಡವಾಗಿ ನೀಡುತ್ತಿರುವುದರಿಂದ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 19,852ಕ್ಕೆ ಏರಿಕೆಯಾಗಿದೆ.

ಇಂದು ಆಸ್ಪತ್ರೆಯಿಂದ 22,584 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.33.66 ಮತ್ತು ಮರಣ ಪ್ರಮಾಣ ಶೇ.1.21ರಷ್ಟಿದೆ. ಟೆಸ್ಟಿಂಗ್ ಇಳಿಕೆಯಾಗಿದ್ದು, ಇಂದು 1,16,238 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇವತ್ತು 15,879 ಹೊಸ ಪ್ರಕರಣಗಳು ವರದಿಯಾಗಿದ್ದು, 259 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 3,62,696 ಸಕ್ರಿಯ ಪ್ರಕರಣಗಳಿವೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 676, ಬಳ್ಳಾರಿ 1,558, ಬೆಳಗಾವಿ 755, ಬೆಂಗಳೂರು ಗ್ರಾಮಾಂತರ 688, ಬೆಂಗಳೂರು ನಗರ 15,879, ಬೀದರ್ 158, ಚಾಮರಾಜನಗರ 411, ಚಿಕ್ಕಬಳ್ಳಾಪುರ 609, ಚಿಕ್ಕಮಗಳೂರು 537, ಚಿತ್ರದುರ್ಗ 193, ದಕ್ಷಿಣ ಕನ್ನಡ 915, ದಾವಣಗೆರೆ 212, ಧಾರವಾಡ 740, ಗದಗ 456, ಹಾಸನ 654, ಹಾವೇರಿ 465, ಕಲಬುರಗಿ 971, ಕೊಡಗು 892, ಕೋಲಾರ 913, ಕೊಪ್ಪಳ 414, ಮಂಡ್ಯ 1,359, ಮೈಸೂರು 2,170, ರಾಯಚೂರು 763, ರಾಮನಗರ 440, ಶಿವಮೊಗ್ಗ 1,108, ತುಮಕೂರು 2,496, ಉಡುಪಿ 1,083, ಉತ್ತರ ಕನ್ನಡ 1,084, ವಿಜಯಪುರ 485 ಮತ್ತು ಯಾದಗಿರಿಯಲ್ಲಿ 426 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article