ಕೊರೊನಾಗೆ ಈ ಗ್ಲುಕೋಸ್ ರಾಮಬಾಣ!

Date:

ಕೊರೊನಾವೈರಸ್ ದೇಶದಾದ್ಯಂತ ತನ್ನ ಭೀಕರತೆಯನ್ನು ಮುಂದುವರಿಸಿತು. ಕೊರೋನಾವೈರಸ್ ನ ಹಾವಳಿ ಎಷ್ಟಿದೆಯೆಂದರೆ ವ್ಯಾಕ್ಸಿನ್ ತೆಗೆದುಕೊಂಡವರಿಗೂ ಕೂಡ ಕೊರೋನಾವೈರಸ್ ಬರುತ್ತಿದೆ ಅಷ್ಟೇ ಯಾಕೆ ವ್ಯಾಕ್ಸಿನ್ ಪಡೆದುಕೊಂಡ ವ್ಯಕ್ತಿಗಳು ಸಹ ಕೊರೋನಾವೈರಸ್ ನಿಂದ ಸಾವನ್ನಪ್ಪಿರುವ ಉದಾಹರಣೆಗಳಿವೆ. ಹೀಗಾಗಿ ಕೊರೋನಾವೈರಸ್ ಕುರಿತು ಜನರಲ್ಲಿ ದೊಡ್ಡಮಟ್ಟದಲ್ಲಿಯೇ ಈ ಬಾರಿ ಭಯ ಮೂಡಿದೆ.

 

 

ಆದರೆ ಇದೀಗ ಜನತೆಯಲ್ಲಿ ಖುಷಿ ತರಿಸುವ ವಿಚಾರವೊಂದು ಬಂದಿದೆ. ಹೌದು ಅದುವೇ 2-ಡಿಜಿ! ನಮ್ಮ ದೇಶದ ಹೆಮ್ಮೆಯ ಡಿ ಆರ್ ಡಿ ಓ ಮತ್ತು ರೆಡ್ಡಿ ಲ್ಯಾಬ್ ಜಂಟಿಯಾಗಿ ತಯಾರಿಸಿರುವ ಈ 2-ಡಿಜಿ ಎಂಬುದು ಫೇಕ್ ಗ್ಲುಕೋಸ್! ಅರೆ ಕೊರೋನಾಗೆ ಔಷಧ ಎಂದು ಇದೇನಿದು ಫೇಕ್ ಗ್ಲೋಕೋಸ್ ಎಂದು ಹೇಳ್ತಾ ಇದ್ದಾರೆ ಎಂದು ಆಶ್ಚರ್ಯಕ್ಕೊಳಗಾಗ್ತಾ ಇದ್ದಿರಾ?

 

 

ಆದರೆ ಇದು ಫೇಕ್ ಗ್ಲುಕೋಸ್ ಎಂಬುದು ನಿಜ. ಈ ಫೇಕ್ ಗ್ಲುಕೋಸ್ ನಿಂದ ಮಾನವನ ದೇಹಕ್ಕೆ ಬರುವ ಕೊರೋನಾವೈರಸ್ ಅನ್ನು ಸದೆ ಪಡೆಯಬಹುದಾಗಿದೆ. ಕೊರೋನಾವೈರಸ್ ಒಬ್ಬ ಮನುಷ್ಯನ ದೇಹಕ್ಕೆ ಹೊಕ್ಕಾಗ ಆತನ ದೇಹದಲ್ಲಿರುವ ಗ್ಲುಕೋಸ್ ಎನರ್ಜಿಯನ್ನು ಉಪಯೋಗಿಸಿಕೊಂಡು ಸಂತಾನೋತ್ಪತ್ತಿ ನಡೆಸಿ ತನ್ನ ತದ್ರೂಪಿಗಳನ್ನು ಸೃಷ್ಟಿ ಮಾಡಿ ಇಡೀ ಮಾನವನ ದೇಹವನ್ನು ಆವರಿಸಿಕೊಂಡು ಬಿಡುತ್ತದೆ. ಇದೆ ಕೊರೋನಾವೈರಸ್ ಮಾನವನ ದೇಹವನ್ನು ಹೊಕ್ಕಾಗ ಮಾಡುವ ಮೊದಲನೆಯ ಕೆಲಸ, ಹೀಗಾಗಿಯೇ ಕೊರೋನಾವೈರಸ್ ಮಾನವನ ದೇಹದ ಮೇಲೆ ಅಷ್ಟು ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುವುದು.

 

 

ಕೊರೋನಾವೈರಸ್ ನಡೆಸುವ ಈ ಕ್ರಿಯೆಯನ್ನು ತಡೆಗಟ್ಟಲು ಇದೀಗ ಈ 2-ಡಿಜಿ ಎಂಬ ನಕಲಿ ಗ್ಲುಕೋಸ್ ಪೌಡರ್ ಅನ್ನು ತಯಾರಿಸಿದ್ದು ಇದನ್ನು ಕೊರೊನಾ ಸೋಂಕಿತ ಸೇವಿಸಿದರೆ ನಕಲಿ ಗ್ಲುಕೋಸ್ ಅನ್ನು ಕೊರೋನಾವೈರಸ್ ಹೀರಿಕೊಳ್ಳಲಿದೆ, ಆದರೆ ಎನರ್ಜಿ ಇಲ್ಲದ ಈ ಗ್ಲುಕೋಸ್ ಪೌಡರ್ ಕೊರೊನಾ ವೈರಸ್ ಬಲಹೀನ ಆಗುವಂತೆ ಮಾಡಿ ಅಭಿವೃದ್ಧಿ ಹೊಂದುವುದನ್ನು ನಿಲ್ಲಿಸಿಬಿಡುತ್ತವೆ. ಕೊರೋನಾವೈರಸ್ ಗಳು ಅಭಿವೃದ್ಧಿ ಹೊಂದುವುದನ್ನು ನಿಲ್ಲಿಸಿ ಕ್ಷೀಣಿಸಲಾರಂಭಿಸಿದಾಗ ಮಾನವನ ದೇಹದಲ್ಲಿರುವ ಪ್ರತಿರೋಧಕ ಪ್ರತಿಕಾಯ ಅಂಶಗಳು ಸುರಾನಾ ವೈರಸ್ಗಳನ್ನು ಸುತ್ತುವರೆದು ನಾಶಮಾಡುತ್ತವೆ.

 

 

ಈ ರೀತಿಯಲ್ಲಿ ಫೇಕ್ ಗ್ಲೂಕೋಸನ್ನು ಬಳಸಿ ಕೊರೋನಾವೈರಸ್ ಅನ್ನು ಸದೆಬಡಿಯಲು ಯೋಜನೆಯೊಂದನ್ನು ನಿರ್ಮಿಸಲಾಗಿದೆ. ಒಂದು ಸಣ್ಣ ನಕಲಿ ಗ್ಲುಕೋಸ್ ಪೌಡರ್ ದೈತ್ಯ ಕೊರೋನಾವೈರಸ್ ವಿರುದ್ಧ ಹೋರಾಟ ನಡೆಸಲಿದ್ದು ಆದಷ್ಟು ಬೇಗ ಇದು ಎಲ್ಲ ಸೋಂಕಿತರ ಕೈಸೇರಲಿದೆ..

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...