ಮಹಿಳಾ ಕ್ರಿಕೆಟಿಗರಿಗೆ ಬಿಸಿಸಿಐ ಹಣದ ಮೋಸ!

Date:

ಕೆಲ ದಿನಗಳ ಹಿಂದಷ್ಟೇ ಮಹಿಳಾ ಕ್ರಿಕೆಟ್ ತಂಡಕ್ಕೆ ಕಡಿಮೆ ವೇತನ ಶ್ರೇಣಿಯನ್ನು ಘೋಷಿಸಿದೆ ಎಂದು ಭಾರೀ ಟೀಕೆಗೆ ಒಳಗಾಗಿದ್ದ ಬಿಸಿಸಿಐ ಇದೀಗ ಮತ್ತೊಂದು ಕರ್ಮಕಾಂಡಕ್ಕೆ ಸಿಲುಕಿಕೊಂಡಿದೆ. ಕಳೆದ ವರ್ಷ ಫೆಬ್ರವರಿ – ಮಾರ್ಚ್ ತಿಂಗಳಿನಲ್ಲಿ ನಡೆದ ಮಹಿಳಾ ಟಿ ಟ್ವೆಂಟಿ ವಿಶ್ವಕಪ್ ಪಂದ್ಯದ ಮೊತ್ತವನ್ನು ಇನ್ನೂ ಸಹ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.


ಕಳೆದ ವರ್ಷ ನಡೆದ ಮಹಿಳಾ ಟಿ ಟ್ವೆಂಟಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತೀಯ ವನಿತೆಯರ ತಂಡ ಮತ್ತು ಆಸ್ಟ್ರೇಲಿಯಾ ವನಿತೆಯರ ತಂಡ ಸೆಣಸಾಡಿದ್ದವು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರ ತಂಡ ಭಾರತ ತಂಡವನ್ನು ಸೋಲಿಸಿ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಟೂರ್ನಿಯಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ಮಹಿಳಾ ಟೀಂ ಇಂಡಿಯಾ ತಂಡಕ್ಕೆ 3.50 ಕೋಟಿ ರೂ ಬಹುಮಾನ ಹಣವನ್ನು ನೀಡಲಾಗಿತ್ತು. ಈ 3.50 ಕೋಟಿ ರೂ ಮೊತ್ತವನ್ನು ಮಹಿಳಾ ಭಾರತೀಯ ತಂಡದ ಎಲ್ಲಾ ಸದಸ್ಯರುಗಳಿಗೂ ಹಂಚಬೇಕಾಗಿತ್ತು.

ಆದರೆ ಇದುವರೆಗೂ ಸಹ ಟೀಮ್ ಇಂಡಿಯಾ ಆಟಗಾರ್ತಿಯರಿಗೆ ಆ ಮೊತ್ತ ಸಿಕ್ಕಿಲ್ಲ. ಆಟಗಾರ್ತಿಯರಿಗೆ ಬಿಸಿಸಿಐ ಇನ್ನೂ ಹಣವನ್ನು ವಿತರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಆರೋಪ ಕೇಳಿಬಂದ ಬೆನ್ನಲ್ಲೇ ಇದೀಗ ಪ್ರತಿಕ್ರಿಯಿಸಿರುವ ಬಿಸಿಸಿಐ ಈ ವಾರಾಂತ್ಯದೊಳಗೆ ಎಲ್ಲಾ ಆಟಗಾರ್ತಿಯರಿಗೂ ಸಹ ವಿಶ್ವಕಪ್ ಟೂರ್ನಿಯ ಹಣ ತಲುಪಲಿದೆ ಎಂದು ಭರವಸೆ ನೀಡಿದೆ.

Share post:

Subscribe

spot_imgspot_img

Popular

More like this
Related

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ಜಾಮೀನು

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ಜಾಮೀನು ನವದೆಹಲಿ: ಧಾರವಾಡ...

ಬಾಡಿ ಕ್ಯಾಮೆರಾ ಕಡ್ಡಾಯ: ಪಾಸ್ ಪೋರ್ಟ್ ವೆರಿಫಿಕೇಶನ್ʼಗೆ ಹೊಸ ರೂಲ್ಸ್!

ಬಾಡಿ ಕ್ಯಾಮೆರಾ ಕಡ್ಡಾಯ: ಪಾಸ್ ಪೋರ್ಟ್ ವೆರಿಫಿಕೇಶನ್ʼಗೆ ಹೊಸ ರೂಲ್ಸ್! ಬೆಂಗಳೂರು: ಡಿಜಿ...

ರಾಜ್ಯದಲ್ಲಿ ಮಳೆ–ಬಿಸಿಲಿನ ಮಿಶ್ರ ಹವಾಮಾನ: 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ರಾಜ್ಯದಲ್ಲಿ ಮಳೆ–ಬಿಸಿಲಿನ ಮಿಶ್ರ ಹವಾಮಾನ: 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಬೆಂಗಳೂರು: ರಾಜ್ಯದಲ್ಲಿ...

ಕಾಂಟ್ರವರ್ಸಿಗೆ ಬ್ರೇಕ್ ಹಾಕಿದ ರಶ್ಮಿಕಾ – ವಿಜಯ್ !

ಕಾಂಟ್ರವರ್ಸಿಗೆ ಬ್ರೇಕ್ ಹಾಕಿದ ರಶ್ಮಿಕಾ - ವಿಜಯ್ ! ನಟಿ ರಶ್ಮಿಕಾ ಮಂದಣ್ಣ...