ಐಪಿಎಲ್ ಹಾಗೆ ರಾಜ್ಯವನ್ನ ಪ್ರತಿನಿಧಿಸೋ ಪ್ರತಿಯೊಬ್ಬ ಆಟಗಾರಿಗೂ ತಾನು ಅಂತರರಾಷ್ಟ್ರೀಯ ಟೀಮ್‍ಗೆ ಆಡಬೇಕು ಅನ್ನೋ ಆಸೆ ಇರುತ್ತೆ.. ಹೀಗಾಗೆ ಕ್ರಿಕೆಟಿಗರು ಬ್ಲೂ ಜರ್ಸಿ ತೊಟ್ಟು ಟೀಮ್ ಇಂಡಿಯಾವನ್ನ ಸೇರಿಕೊಳ್ಳೊಕೆ ತುದಿಗಾಲಿನಲ್ಲಿ ನಿಂತಿರ್ತಾರೆ… ಹೀಗೆ ಚಾನ್ಸ್ ಪಡೆದ ಹಲವರಲ್ಲಿ ಕೆಲವರು ಮಾತ್ರ ಹೊಸದೊಂದು ದಾಖಲೆಯನ್ನ ಅಂದಿನ ಮೊದಲ ಮ್ಯಾಚ್‍ಗಳಲ್ಲೆ ಹುಟ್ಟು ಹಾಕಿದ್ದಾರೆ.. ಆ ಮೂಲಕ ಆಯ್ಕೆಗಾರು ತಮ್ಮನ್ನು ಇಂಡಿಯಾ ಟೀಮ್‍ಗೆ ಆಯ್ಕೆ ಮಾಡಿದಕ್ಕೆ ಹೆಮ್ಮೆ ಪಡುವಂತೆ ಮಾಡಿದ್ದಾರೆ…
5. ಮನಿಷ್ ಪಾಂಡೆ _ 71
ಯಂಗ್ ಟ್ಯಾಲೆಂಟೆಡ್ ಬ್ಯಾಟ್ಸಮನ್ ಹಾಗೆ ಫಿಲ್ಡರ್ ಮನಿಷ್ ಪಾಂಡೆ ನಮ್ಮ ರಾಜ್ಯದ ಆಟಗಾರ ಅನ್ನೋ ಹೆಮ್ಮೆ ಒಂದು ಕಡೆಯಾದ್ರೆ, ಮತ್ತೊಂದು ಕಡೆ ಈತ ಕೂಡ ತಾನಾಡಿದ 2015ರ ಜಿಂಬಾಬ್ವೆ ವಿರುದ್ದದ ಮೊದಲ ಮ್ಯಾಚ್‍ನಲ್ಲೇ 86 ಬಾಲ್‍ಗಳಲ್ಲಿ 71 ರನ್‍ಗಳ ಗಳಿದ್ದ ಆಟಗಾರ..
4. ನವ್‍ಜೊತ್ ಸಿಂಗ್ ಸಿದ್ದು -73
ಸದ್ಯಕ್ಕೆ ಕಾಮೆಂಟ್ರಿಯಲ್ಲೆ ಹೆಚ್ಚು ಪರಿಚಯವಿರೋ ಈ ಆಟಗಾರ ಕೂಡ ಭಾರತ ದೇಶಕ್ಕಾಗಿ ತಾನಾಡಿದ ಮೊದಲ ಪಂದ್ಯದಲ್ಲೇ 73 ರನ್ ಗಳನ್ನ ಗಳೆಸಿದ್ರು.. ಆಸ್ಟ್ರೇಲಿಯಾ ವಿರುದ್ದದ ಆ ಮ್ಯಾಚ್‍ನಲ್ಲಿ ಇವ್ರ 73 ರನ್‍ಗಳ ಸಹಾಯದಿಂದ ಇಂಡಿಯಾ 271 ರನ್‍ಗಳನ್ನ ತಲುಪಿತ್ತು..
3. ಬ್ರಿಜೇಶ್ ಪಟೇಲ್ – 82
ಈ ಹಿರಿಯ ಆಟಗಾರ 1974ರಲ್ಲಿ ಇಂಗ್ಲೆಂಡ್ ವಿರುದ್ದದ ಮ್ಯಾಚ್‍ನ ಮೂಲಕ ಇಂಡಿಯ ಟೀಮ್‍ನ ಸೇರಿಕೊಂಡ್ರು.. ತಾನಾಡಿದ ಮೊದಲ ಪಂದ್ಯದಲ್ಲೆ 78 ಬಾಲ್‍ಗಳಲ್ಲಿ 82 ರನ್‍ಗಳನ್ನ ಕಲೆ ಹಾಕಿದ್ರು.. ಇದರಲ್ಲಿ 8 ಫೋರ್ ಹಾಗೆ 2 ಸಿಕ್ಸ್ ಗಳು ಸೇರಿತ್ತು..
2. ರಾಬಿನ್ ಉತ್ತಪ್ಪ – 86
ಕನ್ನಡಿಗ ಕರ್ನಾಟಕ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ ಆಟಗಾರ ರಾಬಿನ್ ಉತ್ತಪ್ಪ.. ಇಂಡಿಯಾ ಟೀಮ್‍ನ ಜರ್ಸಿ ತೊಟ್ಟು ಕಣಕ್ಕಿಳಿಯೋ ಅವಕಾಶ ಸಿಕ್ಕಿದ್ದು 2006ರ ಇಂಗ್ಲೆಂಡ್ ವಿರುದ್ದದ ಮ್ಯಾಚ್‍ನಲ್ಲಿ.. ಓಪನರ್ ಆಗಿ ಬ್ಯಾಟಿಂಗ್‍ಗೆ ಬಂದ ಈತ ತನ್ನ ಫಸ್ಟ್ ಮ್ಯಾಚ್‍ನಲ್ಲಿ 96 ಎಸೆತಗಳಲ್ಲಿ 86 ರನ್‍ಗಳನ್ನ ಗಳಿಸಿ ಔಟ್ ಆಗಿದ್ರು.. ಈ ಮ್ಯಾಚ್‍ನಲ್ಲಿ ಭಾರತ 289ರನ್‍ಗಳನ್ನ ಯಶಸ್ವಿಯಾಗಿ ಚೆಸ್ ಮಾಡಿ ಗೆದ್ದಿತ್ತು..
1. ಕೆ.ಎಲ್.ರಾಹುಲ್ _ 100*
ಐಪಿಎಲ್‍ನಲ್ಲಿ ಎಲ್ಲರ ಗಮನ ತನ್ನತ ತಿರುಗುವಂತ್ತೆ ಮಾಡಿದ ಬ್ಯಾಟ್ಸ್‍ಮನ್ ಕಂ ವಿಕೆಟ್ ಕೀಪರ್ ಕೆ.ಎಲ್.ರಾಹುಲ್… ಟೀಮ್‍ಗೆ ಸೆಲೆಕ್ಟ್ ಆದಾಗ ಖುಷಿ ಪಟ್ಟವರು ಹೆಚ್ಚಿದ್ರು, ಐಪಿಎಲ್‍ನಲ್ಲಿ ಆಡಿದ ಆಟ ಇಂಡಿಯಾ ಟೀಮ್ ಸೇರಿಕೊಳ್ಳೊಕೆ ಮಾನದಂಡವೆ ಅಂತ ಪ್ರಶ್ನೆ ಹಾಕಿದವರು ಉಂಟು.. ಆದ್ರೆ ಇಂತಹವರ ಪ್ರಶ್ನೆಗಳಿಗೆ ತನ್ನ ಬ್ಯಾಟ್‍ನ ಮೂಲಕ ಉತ್ತವರನ್ನ ಕೊಟ್ಟಿದ್ದಾನೆ ನಮ್ಮ ಕರುನಾಡ ರಾಹುಲ್… ತಾನಾಡಿದ ಮೊದಲ ಪಂದ್ಯದಲ್ಲೆ ಜಿಂಬಾಬ್ವೆಯ ಮೇಲೆ ಸವಾರಿ ಮಾಡಿದ ಈತ ಟೀಮ್‍ಗೆ ಗೆಲುವನ್ನ ತಂದುಕೊಡುವುದು ಮಾತ್ರವಲ್ಲದೆ ತನ್ನ ಮೊದಲ ಮ್ಯಾಚ್‍ನಲ್ಲಿ ಸೆಂಚುರಿ ಸಿಡಿಸಿ ಹೊಸದೊಂದು ದಾಖಲೆಯನ್ನ ಬರೆದಿದ್ದಾನೆ..
- ಅಶೋಕ್ ರಾಜ್
POPULAR STORIES :
181 ಸದಸ್ಯರಿರುವ ವಿಶ್ವದ ದೊಡ್ಡಕುಟುಂಬ! ಈ ಕುಟುಂಬದ ಎಲ್ಲಾ ಸದಸ್ಯರಿಗೂ ಒಂದೇ ನಿವಾಸ!
ಒಂದೇ ಬಾಲಿಗೆ 286 ರನ್ ಬಾರಿಸಿದ ಕಥೆ..!
ಪೆಟ್ರೋಲ್ ಬಂಕ್‍ನಲ್ಲಿ ಯಾವೆಲ್ಲಾ ಸೇವೆ, ಸೌಲಭ್ಯ ಉಚಿತವಾಗಿರಬೇಕು ಗೊತ್ತಾ?