ಓರಾಯನ್ ಮಾಲ್‌ನ ಮನ್ ಲೆನ್ ಹೋಟೆಲ್ ನಲ್ಲಿ ವೆಜ್ ತಿಂದಿದ್ದೀರಾ ಹಾಗಾದ್ರೆ ನೀವು ನಾನ್ ವೆಜ್ ತಿಂದಿರ್ತೀರಾ… ಹೌದು ಈ ಹೋಟೆಲ್ ಗೆ ಹೋಗಿ ವೆಜ್ ನೂಡಲ್ಸ್ ಆರ್ಡರ್ ಮಾಡಿದ್ರೆ ಅದಕ್ಕೆ ಚಿಕನ್ ಮಿಕ್ಸ್ ಮಾಡಿ ಕೊಟ್ಟಿದ್ದಾರೆ. ಇದರಿಂದ ಕುಪಿತಗೊಂಡ ಅಂಕೇಶ್ ಹೋಟೆಲ್ ಮ್ಯಾನೇಜರ್ ಗೆ ತರಾಟೆ ತೆಗೆದು ಕೊಂಡಿದ್ದಾರೆ. ಆದರೆ ಹೋಟೆಲ್ ನವರು ಇದೇನ್ ಮಹಾ ಅನ್ನೋ ರೀತಿ ಉಡಾಫೆ ಉತ್ತರ ನೀಡಿ ಅಂಕೇಶ್ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಮೊದಲೇ ವೆಜ್ ನೂಡಲ್ಸ್ ನಲ್ಲಿ ಚಿಕನ್ ನೋಡಿ ಪಿತ್ತ ನೆತ್ತಿಗತ್ತಿದ್ದ ಅಂಕೇಶ್ ಹೋಟಲ್ ನವರ ವರ್ತನೆ ಕಂಡು ಸಿಟ್ಟಿಗೆದ್ದಿದ್ದಾರೆ. ಈಗ ಸದ್ಯ ಹೋಟೆಲ್ ವಿರುದ್ದ ಬೆಂಗಳೂರಿನ ಸುಬ್ರಮಣ್ಯನಗರದಲ್ಲಿ ದೂರು ದಾಖಲಿಸಿದ್ದಾರೆ.
ಅಂಕೇಶ್ ಹಾಗೂ ಅವರ ಸಂಬಂಧಿ ವೀಕೆಂಡ್ ಮಸ್ತಿಗಾಗಿ ಬೆಂಗಳೂರಿನ ಪ್ರತಿಷ್ಟಿತ ಮಾಲ್ ಎಂದೇ ಹೆಸರಾಗಿರುವ ರಾಜಾಜಿನಗರದಲ್ಲಿರುವ ಓರಾಯಾನ್ ಮಾಲ್ ಗೆ ತೆರಳಿದ್ದ ಸಂಧರ್ಭ ಘಟನೆ ನಡೆದಿದೆ. ಇನ್ನು ಮುಂದೆ ಹೋಟಲ್ ಗೆ ಹೋಗಿ ರುಚಿಯಾದ ತಿನಿಸು ಸವಿಯೋ ಮುನ್ನ ಪ್ಯೂರ್ ವೆಜಿಟೇರಿಯನ್ಸ್ ನೂರು ಸಲ ಯೋಚನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
POPULAR STORIES :
ಕನ್ನಡದ ಖ್ಯಾತ ನಟ ಭಿಕ್ಷುಕನ ಗೆಟಪ್‍ನಲ್ಲಿ ಸಂಪಾದಿಸಿದ್ದು ಎಷ್ಟು ಗೊತ್ತಾ..?
ಎಚ್ಚರ : `ಸಿಮ್ ಕ್ಲೊನಿಂಗ್’ ನಿಮ್ಮನ್ನು ದಿವಾಳಿ ಮಾಡಬಹುದು! ಮುಂಬೈ ಮಹಿಳೆ ಕಳೆದುಕೊಂಡ ಹಣ ಎಷ್ಟು ಗೊತ್ತಾ?
ವಿರಾಟ್ ಕೊಹ್ಲಿ ವೆಡ್ಸ್ ಅನುಷ್ಕಾಶರ್ಮಾ…!
ಮೊದಲ ಪಂದ್ಯದಲ್ಲೆ ರನ್ ಹೊಳೆ ಹರಿಸಿದ ನಮ್ಮ 5 ಆಟಗಾರರಿವರು..!
181 ಸದಸ್ಯರಿರುವ ವಿಶ್ವದ ದೊಡ್ಡಕುಟುಂಬ! ಈ ಕುಟುಂಬದ ಎಲ್ಲಾ ಸದಸ್ಯರಿಗೂ ಒಂದೇ ನಿವಾಸ!
ಒಂದೇ ಬಾಲಿಗೆ 286 ರನ್ ಬಾರಿಸಿದ ಕಥೆ..!
ಪೆಟ್ರೋಲ್ ಬಂಕ್‍ನಲ್ಲಿ ಯಾವೆಲ್ಲಾ ಸೇವೆ, ಸೌಲಭ್ಯ ಉಚಿತವಾಗಿರಬೇಕು ಗೊತ್ತಾ?