ಶಿವಲಿಂಗಕ್ಕೆ ಮಾಡೋ ಅಭಿಷೇಕದಲ್ಲಿರೋ ವೈಜ್ಞಾನಿಕ ರಹಸ್ಯ..!

0
60

ಮೃತ್ಯುಂಜಯ,ನೀಲಕಂಠ ಅನ್ನೋ ಹೆಸ್ರಿಂದ ಕರ್ಸ್ಕೊಳ್ಳೋ ಶಿವನು ಅಭಿಷೇಕ ಪ್ರಿಯ.ಅನಾದಿ ಕಾಲದಿಂದ ದೇವ ದಾನವರಿಂದ ಪೂಜಿಸಲ್ಪಟ್ಟು ವರ ಪ್ರಸಾದಿಸಿದ ರುದ್ರನು ಜಗತ್ತಿನ ಅತೀ ಕೆಟ್ಟ ಶಕ್ತಿಯ ನಿರ್ಮೂಲನೆ ಮಾಡೋ ಮಹಾದೇವ,ಅದಕ್ಕಾಗಿಯೇ ಸಮುದ್ರಮಥನದಲ್ಲಿನ ಹಾಲಾಹಲವನ್ನು ಸೇವಿಸಿ ಜಗತ್ತಿನ ಕಷ್ಟವನ್ನು ನಿಗ್ರಹಿಸಿರುವನು.ಇಂತಹ ರುದ್ರದೇವನಿಗೆ ಹಾಲು ಅಥವಾ ನೀರಿನ ಅಭಿಷೇಕ ಮಾಡುವುದು ಹಿಂದಿನಿಂದಲೂ ಬಂದಂತಹ ಪರಂಪರೆ.ಆದರೆ ಅನೇಕ ಜನರು ಈ ಸಂಪ್ರದಾಯವನ್ನು ಮೂಢನಂಬಿಕೆಯೆಂದು ಠೀಕಿಸಿ ಇದೊಂದು ಕೇವಲ ಪ್ರಾಕೃತಿಕ ಸಂಪನ್ಮೂಲಗಳನ್ನು ವ್ಯರ್ಥ ಮಾಡುವ ಪ್ರಕ್ರಿಯೆ ಅನ್ನುತ್ತಾರೆ.ಆದರೆ ಇವೆಲ್ಲಕ್ಕೂ ಮೀರಿ ಈ ಅಭಿಷೇಕ ದ ಹಿಂದೆ ಕೆಲವೊಂದು ವೈಜ್ಜಾನಿಕ ಸಂಗತಿಗಳಿವೆ ಎಂಬುದು ನಿಮಗೆ ಗೊತ್ತೆ???
ಶಿವಲಿಂಗವನ್ನು ಪೂಜಿಸುವಾಗ ಅಲ್ಲಿಯ ವಾತಾವರಣವು ನಿರ್ಮಲವಾಗಿ ಶಾಂತಿ ನೆಲೆಸುವುದು.ಇದರಿಂದ ಆ ಪರಿಸರದ ನೆಗೆಟಿವ್(ನಕಾರಾತ್ಮಕ)
ಶಕ್ತಿಯು ನಾಶವಾಗಿ ಅಲ್ಲಿ ಪೊಸಿಟಿವ್(ಸಕಾರಾತ್ಮಕ) ಶಕ್ತಿಯು ನೆಲೆಸುವುದು .ಈ ನಕಾರತ್ಮಕ ಶಕ್ತಿ ತೀರ ಬಿಸಿ ಹಾಗೂ ಕೆಟ್ಟಅಲೆಗಳಿಂದ ಕೂಡಿದೆ ಅವುಗಳು ಅದೆಷ್ಟು ಕೆಟ್ಟದ್ದಾಗಿರುತ್ತೋ ಅಷ್ಟೇ ಬಿಸಿಯಾಗಿರುತ್ತೆ.ಇಂತಹ ಶಕ್ತಿಗಳು ಶಿವಲಿಂಗದ ಮೇಲೆಹಾದು ಹೋಗುತ್ತವೆ.ಇವುಗಳ ತಾಪಮಾನವನ್ನು ತಣಿಸಲು ಹಾಲು ಅಥವಾ ನೀರಿನ ಅಗತ್ಯವಿರುತ್ತದೆ.ಹಾಲು ಹಾಗೂ ನೀರಿನ ನಿರಂತರ ಪ್ರವಹನೆಯಿಂದ ಶಿವಲಿಂಗವು ತಣ್ಣಗಿರುತ್ತದೆ ಆದಕಾರಣ ಇವುಗಳು ಶುದ್ದೀಕರಣಗೊಳ್ಳುತ್ತದೆ.ಇದನ್ನೊಂದು ಉದಾಹರಣೆಯ ಮೂಲಕ ನೋಡಬಹುದು.ನಿಮ್ಮ ತಲೆಯು ಬಿಸಿಯಾಗಿರುವಾಗ ನೀವು ಯಾವುದೇ ನಿರ್ಧಾರವನ್ನು ಅತೀ ಚಾಣಾಕ್ಷತನದಿಂದ ತೆಗೆದುಕೊಳ್ಳಲು ಸಮರ್ಥರೆ?ಇಲ್ಲ! ಇದು ಸಾಧ್ಯವಿಲ್ಲ ಯಾಕಂದ್ರೆ ನಮ್ಮ ಬುದ್ದಿಯು ಆ ಸಂದರ್ಭದಲ್ಲಿ ಸರಿಯಾಗಿ ಕೆಲಸ ನಿರ್ವಹಿಸಲಾರದು.ಕೇವಲ ಶಾಂತ ಪರಿಸ್ಥಿತಿಯಲ್ಲಿ ಮಾತ್ರ ನೀವು ನಿರ್ಧಾರ ತೆಗೆದುಕೊಳ್ಳುವಿರಿ.
ನಮ್ಮ ದೇಹವು ಭೂಮಿ,ನೀರು,ಅಗ್ನಿ,ವಾಯು ಹಾಗೂ ಆಕಾಶಗಳೆಂಬ ಪಂಚ ಭೂತ ಗಳಿಂದ ನಿರ್ಮಿಸಲ್ಪಟ್ಟಿದೆ.ಇವುಗಳನ್ನು ನಿರ್ವಹಿಸಲು ನಮ್ಮ ದೇಹದಲ್ಲಿ ೭ ಚಕ್ರಗಳಿವೆ.ದೇಹವು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹೊಂದಲು ಈ ಅಂಶಗಳೆಲ್ಲಾ ಸರ್ಯಾಗಿ ಕೆಲ್ಸ ಮಾಡ್ಬೇಕು.
ನೀರು – ಸ್ವಾಧಿಷ್ಟಾನ ಚಕ್ರ
ಭೂಮಿ- ಮೂಲಾಧಾರ ಚಕ್ರ
ಆಗ್ಯಾ ಚಕ್ರವು ನಮ್ಮ ಹಣೆಯಲ್ಲಿ ೨ ಹುಬ್ಬುಗಳ ನಡುವೆ ಇರುವುದು,ಇಲ್ಲೇ ಇಡ ಮತ್ತು ಪಿಂಗಳನಾಡಿಯು ಸೇರುತ್ತದೆ.ಇಲ್ಲಿ ನಮ್ಮ ಬುದ್ದಿಯು ಸ್ಥಿರವಾಗಿದ್ದು ಇಲ್ಲಿ ನಮ್ಮ ಇಡೀ ದೇಹವನ್ನು ನಿಯಂತ್ರಿಸುತ್ತಿರುತ್ತದೆ.ಈ ಜಾಗವನ್ನು ಶಿವನ ಜಾಗ ಅಂತಲೂ ಕರೆಯಲಾಗುತ್ತದೆ.ಅದಕ್ಕಾಗಿ ಆಗ್ಯಾ ಚಕ್ರವು ಸಂತೋಷದ ಮೂಲ ಬಿಂದು ವಾಗಿದೆ.ಯಾವನ ದೇಹವು ಅಸೌಖ್ಯ,ಅಶಾಂತಿ ಹಾಗೂ ಒತ್ತಡದಿಂದ ಬಳಲುತ್ತದೋ ಈ ಮೂಲಭೂತಗಳ ಸಮತೋಲನ ತಪ್ಪಿರುತ್ತದೆ. ಶಿವಲಿಂಗದ ಮೇಲೆ ನೀರು ಹಾಕುವಾಗ ನಾವು ನಿಜವಾಗಲೂ ನಮ್ಮ ಆಗ್ಯಾ ಚಕ್ರದ ಮೇಲೆ(ಶಿವನ ಜಾಗ) ಹಾಕುತ್ತೇವೆ ಎಂದಾಗುತ್ತದೆ.ಇಲ್ಲಿಂದ ಸಕಾರತ್ಮಕ ಅಂದರೆ ಪೊಸಿಟಿವ್ ಶಕ್ತಿಗಳು ಬೆಳೆಯಲಾರಂಭಿಸುತ್ತದೆ.ಅದು ನಮ್ಮ ಯೋಚನಾ ಶಕ್ತಿಮೇಲೆ ಪ್ರಭಾವ ಬೀರುತ್ತದೆ.ಇದೊಂದು ಸೂಕ್ಷ್ಮಾತಿಸೂಕ್ಷ್ಮ ಪ್ರಕ್ರಿಯೆ.ಇದು ಖಂಡಿತವಾಗಿಯೂ ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಕಾರಣವಾಗಿದೆ.

  • ಸ್ವರ್ಣಲತ ಭಟ್

POPULAR  STORIES :

ಕನ್ನಡದ ಖ್ಯಾತ ನಟ ಭಿಕ್ಷುಕನ ಗೆಟಪ್‍ನಲ್ಲಿ ಸಂಪಾದಿಸಿದ್ದು ಎಷ್ಟು ಗೊತ್ತಾ..?

ಎಚ್ಚರ : `ಸಿಮ್ ಕ್ಲೊನಿಂಗ್’ ನಿಮ್ಮನ್ನು ದಿವಾಳಿ ಮಾಡಬಹುದು! ಮುಂಬೈ ಮಹಿಳೆ ಕಳೆದುಕೊಂಡ ಹಣ ಎಷ್ಟು ಗೊತ್ತಾ?

ವಿರಾಟ್ ಕೊಹ್ಲಿ ವೆಡ್ಸ್ ಅನುಷ್ಕಾಶರ್ಮಾ…!

ಮೊದಲ ಪಂದ್ಯದಲ್ಲೆ ರನ್ ಹೊಳೆ ಹರಿಸಿದ ನಮ್ಮ 5 ಆಟಗಾರರಿವರು..!

181 ಸದಸ್ಯರಿರುವ ವಿಶ್ವದ ದೊಡ್ಡಕುಟುಂಬ! ಈ ಕುಟುಂಬದ ಎಲ್ಲಾ ಸದಸ್ಯರಿಗೂ ಒಂದೇ ನಿವಾಸ!

ಒಂದೇ ಬಾಲಿಗೆ 286 ರನ್ ಬಾರಿಸಿದ ಕಥೆ..!

ಪೆಟ್ರೋಲ್ ಬಂಕ್‍ನಲ್ಲಿ ಯಾವೆಲ್ಲಾ ಸೇವೆ, ಸೌಲಭ್ಯ ಉಚಿತವಾಗಿರಬೇಕು ಗೊತ್ತಾ?

LEAVE A REPLY

Please enter your comment!
Please enter your name here