ಬಡವರಿಗೆ ಉಚಿತ ಚಿಕಿತ್ಸೆ ನೀಡದ 5 ಖಾಸಗಿ ಆಸ್ಪತ್ರೆಗಳಿಗೆ 700 ಕೋಟಿ ದಂಡ!

Date:

ಬಡವರಿಗೆ ಉಚಿತ ಚಿಕಿತ್ಸೆ ನೀಡದ ಕಾರಣಕ್ಕೆ 5 ಖಾಸಗಿ ಆಸ್ಪತ್ರೆಗಳಿಗೆ 700ಕೋಟಿ ರೂ ದಂಡ ಪಾವತಿಸುವಂತೆ ಆಮ್‍ಆದ್ಮಿಪಕ್ಷದ ನೇತೃತ್ವದಲ್ಲಿನ ದೆಹಲಿ ಸರಕಾರ ಸೂಚಿಸಿದೆ. ಫೋರ್ಟಿಸ್ ಎಸ್ಮಾರ್ಟ್ ಹಾರ್ಟ್ ಇನ್ಸಿಟ್ಯೂಟ್, ಮ್ಯಾಕ್ ಸೂಪರ್ ಸ್ಪೆಷಲಿಟಿ ಆಸ್ಪತ್ರೆ, ಶಾಂತಿ ಮುಕುಂದ್ ಆಸ್ಪತ್ರೆ, ಧರ್ಮಶೀಲ ಕ್ಯಾನ್ಸರ್ ಆಸ್ಪತ್ರೆ, ಪುಷ್ಪಾವತಿ ಸೀಂಘಾನಿಯಾ ರಿಸರ್ಚ್ ಇನ್ಸ್‍ಟ್ಯೂಟ್ ಆಸ್ಪತ್ರೆಗಳು ಬಡವರಿಗೆ ಉಚಿತ ಚಿಕಿತ್ಸೆ ನೀಡಲು ನಿರಾಕರಿಸಿದ ತಪ್ಪಿಗೆ ಈಗ ದಂಡಕಟ್ಟಬೇಕಾದ ಪರಿಸ್ಥಿತಿ ತಂದುಕೊಂಡಿವೆ.
ದೆಹಲಿ ಸರಕಾರ ಈ ಐದು ಆಸ್ಪತ್ರೆಗಳಿಗೆ 1960-90ರ ಅವಧಿಯಲ್ಲಿ ರಿಯಾಯಿತಿ ದರದಲ್ಲಿ ಭೂಮಿ ನೀಡಿತ್ತು. ಈ ಆಸ್ಪತ್ರೆಗಳು ಸೇರಿದಂತೆ 43 ಖಾಸಗಿ ಆಸ್ಪತ್ರೆಗಳಿಗೆ ರಿಯಾತಿದರದಲ್ಲಿ ಭೂಮಿಯನ್ನು ಕೊಟ್ಟಿದೆ. ಆಸ್ಪತ್ರೆಗೆ ಬರುವ ಒಟ್ಟು ರೋಗಿಗಳ ಶೇ10ರಷ್ಟು ಮಂದಿ ಬಡ ಒಳರೋಗಿಗಳಿಗೆ ಹಾಗೂ ಒಟ್ಟು ರೋಗಿಗಳ ಶೇ25ರಷ್ಟು ಬಡ ಹೊರರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಬೇಕೆಂದು ಷರತ್ತು ವಿಧಿಸಿದೆ. ಈ ಶರತ್ತನ್ನು ನಿರ್ಲಕ್ಷಿಸಿದ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆಯ ಕರೆಗಂಟೆಯಂತೆ ದಂಡ ವಿಧಿಸಿದೆ.
ದೆಹಲಿ ಸರಕಾರದ ಹೆಚ್ಚುವರಿ ನಿರ್ದೇಶಕ ಡಾ.ಹೇಮ್ ಪ್ರಕಾಶ್, ಈ ಐದು ಖಾಸಗಿ ಆಸ್ಪತ್ರೆಗಳು ನಿಯಮಗಳಾನುಸಾರ ಬಡವರಿಗೆ ಚಿಕಿತ್ಸೆ ನೀಡಿಲ್ಲ ಅದಕ್ಕಾಗಿ ದಂಡ ವಿಧಿಸಿರುವುದಾಗಿ ತಿಳಿಸಿದ್ದಾರೆ. ಕಳೆದ ಡಿಸೆಂಬರ್‍ನಲ್ಲಿ ಈಗ ದಂಡವಿಧಿಸಲಾಗಿರುವ ಆಸ್ಪತ್ರೆಗಳಿಗೆ ಕಾನೂನು ಸಂಬಂಧಿ ಅಧಿಸೂಚನೆ ಹೊರಡಿಸಿ ದಂಡ ಏಕೆ ವಿಧಿಸಬಾರದು ಎಂಬುದನ್ನು ಸ್ಪಷ್ಟಪಡಿಸುವಂತೆ ಕೇಳಲಾಗಿತ್ತು. ಆದರೆ, ಅವುಗಳಿಂದ ಮೌಲ್ಯಯುತ ಕಾರಣ ಬಂದಿಲ್ಲ ಎಂದೂ ಸಹ ಅವರು ಹೇಳಿದ್ದಾರೆ. ಈ ಮೇಲಿನ ಆಸ್ಪತ್ರೆಗಳಲ್ಲಿ ಎಸ್ಮಾರ್ಟ್ ಹಾರ್ಟ್ ಇನ್ಸಿಟ್ಯೂಟ್ ಒಂದೇ 503 ಕೋಟಿ ಹಣವನ್ನು ಕಟ್ಟಬೇಕು.! ಬಡವರ ವಿಚಾರದಲ್ಲಿ ದೆಹಲಿ ಸರಕಾರದ ನಡೆ ಮೆಚ್ಚುವಂತಹದಲ್ಲವೇ? ನಿಮ್ಮ ಅಭಿಪ್ರಾಯ ತಿಳಿಸಿ..

  • ರಘು ಭಟ್ 

POPULAR  STORIES :

ಜಗ್ಗುದಾದ ಮೂರು ದಿನದಲ್ಲಿ ಕೊಳ್ಳೆ ಹೊಡೆದ ಹಣವೆಷ್ಟು ಗೊತ್ತಾ..?

ದುಡ್ಡಿಲ್ಲ ಕಾಸಿಲ್ಲ ನೀವೆ ಒಂದು ಏರ್ ಕೂಲರ್‍ನ ಸಿದ್ದ ಮಾಡಬಹುದು..!!

ಕಿಸ್ಸಿಂಗ್ ಹಿಂದಿರೋ ಆರೋಗ್ಯ ರಹಸ್ಯವೇನು..????

ಕನ್ನಡದ ಖ್ಯಾತ ನಟ ಭಿಕ್ಷುಕನ ಗೆಟಪ್‍ನಲ್ಲಿ ಸಂಪಾದಿಸಿದ್ದು ಎಷ್ಟು ಗೊತ್ತಾ..?

ಎಚ್ಚರ : `ಸಿಮ್ ಕ್ಲೊನಿಂಗ್’ ನಿಮ್ಮನ್ನು ದಿವಾಳಿ ಮಾಡಬಹುದು! ಮುಂಬೈ ಮಹಿಳೆ ಕಳೆದುಕೊಂಡ ಹಣ ಎಷ್ಟು ಗೊತ್ತಾ?

ವಿರಾಟ್ ಕೊಹ್ಲಿ ವೆಡ್ಸ್ ಅನುಷ್ಕಾಶರ್ಮಾ…!

ಮೊದಲ ಪಂದ್ಯದಲ್ಲೆ ರನ್ ಹೊಳೆ ಹರಿಸಿದ ನಮ್ಮ 5 ಆಟಗಾರರಿವರು..!

181 ಸದಸ್ಯರಿರುವ ವಿಶ್ವದ ದೊಡ್ಡಕುಟುಂಬ! ಈ ಕುಟುಂಬದ ಎಲ್ಲಾ ಸದಸ್ಯರಿಗೂ ಒಂದೇ ನಿವಾಸ!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...