No menu items!
12.3 C
Munich
Wednesday, May 20, 2026

ಕೋಲಾರದ ವೈದ್ಯರ ಬಗ್ಗೆ ಇರ್ಫಾನ್ ಪಠಾಣ್ ಮೆಚ್ಚುಗೆ

Must read

ಕೋಲಾರ: ಕೋಲಾರದ ಖಾಸಗಿ ಆಸ್ಪತ್ರೆ ಬಗ್ಗೆ ಖ್ಯಾತ ಕ್ರಿಕೆಟಿಗ ಇರ್ಫಾನ್ ಪಠಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಖಾಸಗಿ ಆಸ್ಪತ್ರೆ ಬಗ್ಗೆ ಸೆಲ್ಫಿ ವೀಡಿಯೋ ಮಾಡಿ ಹರಿ ಬಿಟ್ಟಿರುವ ಇರ್ಫಾನ್ ಪಠಾನ್, ಖಾಸಗಿ ಆಸ್ಪತ್ರೆ ಹಾಗೂ ಇಲ್ಲಿನ ವೈದ್ಯರ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೋಲಾರ ನಗರದ ಡೂಂಲೈಟ್ ವೃತ್ತದಲ್ಲಿರುವ ಲಕ್ಷ್ಮೀ ಖಾಸಗಿ ಆಸ್ಪತ್ರೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪಠಾಣ್ ಆಸ್ಪತ್ರೆಯ ಡಾ.ಗುಣಶೇಖರ್, ಡಾ.ಜಗಮೋಹನ್ ಹಾಗೂ ಡಾ.ರಾಧ ಎಂಬ ವೈದ್ಯರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಕೊರೊನಾ ಸಂಕಷ್ಟ ಕಾಲದಲ್ಲಿ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಿ ಹಲವರ ಪ್ರಾಣಗಳನ್ನು ಉಳಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೊರೊನಾ ಸಂಕಷ್ಟದಲ್ಲಿ ಇವರು ತಮ್ಮ ಕುಟುಂಬಗಳನ್ನು ಮರೆತು ಕೆಲಸ ಮಾಡಿದ್ದಾರೆ ಎಂದು ಇರ್ಫಾನ್ ಪಠಾನ್ ಹೇಳಿದ್ದಾರೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article