ಟೀಮ್ ಇಂಡಿಯಾದ ಕೋಚ್ ಹುದ್ದೆ ಅನಿಲ್ ಕುಂಬ್ಳೆ ಪಾಲಾಗಿದೆ. ಭಾರೀ ಪೈಪೋಟಿಯ ನಡುವೆಯೂ ಕುಂಬ್ಳೆ ಕೋಚ್ ಆಗಿರೋದು ರವಿಶಾಸ್ತ್ರಿಗೆ ಮುಖಭಂಗವಾಗಿದೆ. ಭಾರತ ಕಂಡ ಹನ್ನೊಂದು ಕೋಚ್ ಗಳಲ್ಲಿ ಏಳನೇ ಭಾರತೀಯ ಕೋಚ್ ಆಗಿ ಕುಂಬ್ಳೆ ನೇಮಕವಾಗಿದೆ. ಮುಖ್ಯ ತರಬೇತುದಾರನ ಹುದ್ದೆ ಅಲಂಕರಿಸಿದ ಮೊದಲ ಕನ್ನಡಿಗನಾಗಿರೋ ಕೀರ್ತಿಯೂ ಕುಂಬ್ಳೆ ಪಾಲಾಗಿದೆ.
ಹೌದು ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಪರ್ವ ಶುರುವಾಗಿದೆ. ಟೀಮ್ ಇಂಡಿಯಾದ ಕೋಚ್ ಯಾರಾಗ್ತಾರೆ ಅನ್ನೋ ಪ್ರಶ್ನೆಗಳಿಗೆ ಉತ್ತರ ಸಿಕ್ಕಾಗಿದೆ. ಕನ್ನಡಿಗ ಮೃಧು ಸ್ವಭಾವಿ ಸಜ್ಜನ ಮಾಜಿ ಸ್ಪಿನ್ನರ್ ಗೂಗ್ಲಿಯ ಮಹಾರಾಜ ಜಂಬೋ ಖ್ಯಾತಿಯ ಅನಿಲ್ ಕುಂಬ್ಳೆ ಟೀಮ್ಇಂಡಿಯಾದ ಗುರುವಾಗಿ ಆಯ್ಕೆಯಾಗಿದ್ದಾರೆ.
ಭಾರೀ ಕುತೂಹಲ ಕೆರಳಿಸಿದ್ದ ಟೀಮ್ಇಂಡಿಯಾದ ಕೋಚ್ ಸ್ಥಾನದ ಕದನದಲ್ಲಿ ಕುಂಬ್ಳೆ ಗೆದ್ದಾಗಿದೆ. ರವಿಶಾಸ್ತ್ರಿಯ ಪ್ಲಾನ್ ಗೆ ಬಿಸಿಸಿಐನ ದಿಗ್ಗಜರು ಬೋಲ್ಡ್ ಆಗ್ಲಿಲ್ಲ. ಭಾರತೀಯ ತ್ರಿಮೂರ್ತಿಗಳು ಜಂಬೋ ಮಾತಿಗೆ, ಆತನ ಪ್ಲಾನ್ ಗೆ ಫಿದಾ ಆಗಿದ್ದು ಸುಳ್ಳಲ್ಲ. ಅದರಲ್ಲೂ ಸಂದರ್ಶನದಲ್ಲಿ ಜಂಬೋ ತಂಡದ ಬಗ್ಗೆ ಹೊಂದಿರುವ ದೂರ ದೃಷ್ಟಿಗೆ ಸಚಿನ್, ಸೌರವ್ ಮತ್ತು ಲಕ್ಷ್ಮಣ್ ಪುಳಕಿತರಾಗಿದ್ದಾರೆ.
ಇನ್ನು ಟೀಮ್ ಇಂಡಿಯಾ ಕೋಚ್ ಆಗಿ ಆಯ್ಕೆ ಆಗಿರೋ ಜಂಬೋಗೆ ಮಹತ್ತರ ಜವಾಬ್ದಾರಿಗಳು ಹೆಗಲೇರಿವೆ. ಅದೆಲ್ಲವನ್ನ ಸಮರ್ಥವಾಗಿ ನಿಭಾಯಿಸಲು ಸರ್ವ ಸನ್ನದ್ಧರಾಗಿದ್ದಾರೆ ಕುಂಬ್ಳೆ. ಇನ್ನು ಅನಿಲ್ ಕುಂಬ್ಳೆ ಟೀಮ್ ಇಂಡಿಯಾದ ಕೋಚ್ ಹುದ್ದೆಗೆ ಅಪ್ಲೈ ಮಾಡಿದ್ದೇ ಒಂದು ಅಚ್ಚರಿ ಮೂಡಿಸಿತ್ತು. ಅರ್ಜಿ ಸಲ್ಲಿಸುವ ಸಂಪ್ರದಾಯಕ್ಕೆ ಒಗ್ಗಿಕೊಂಡು ಕುಂಬ್ಳೆ ಅರ್ಜಿ ಸಲ್ಲಿಸಿದಾಗಲೇ ಅವರು ಕೋಚ್ ಆಗುವ ಸಾಧ್ಯತೆಗಳು ಹೆಚ್ಚಿದೆ ಅಂತ ಅಂದಾಜಿಸಲಾಗಿತ್ತು. ಆದರೂ ಅಳೆದು ತೂಗಿ ಟೀಮ್ ಇಂಡಿಯಾದ ತರಬೇತುದಾರನ ಹುದ್ದೆಯನ್ನು ಜಂಬೋ ಅಲಂಕರಿಸಿದ್ದಾರೆ.
ಟೀಮ್ ಇಂಡಿಯಾದ ಡೈರೆಕ್ಟರ್ ಆಗಿದ್ದ ರವಿಶಾಸ್ತ್ರಿ ಬಿಸಿಸಿಐನಲ್ಲಿ ಪ್ರಭಾವಿಯಾಗಿದ್ದರೂ ಕೂಡ ಕುಂಬ್ಳೆಯೆದುರು ಅವರ ಸಾಧನೆಯೆದುರು, ಅವರ ದೂರದೃಷ್ಟಿಯೆದುರು ರವಿ ಪೈಪೋಟಿ ನೀಡಲು ಸಾಧ್ಯವಾಗಲಿಲ್ಲ.
ಟೀಮ್ಇಂಡಿಯಾದ ಟೆಸ್ಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ರವಿಶಾಸ್ತ್ರಿ ಮತ್ತು ಕುಂಬ್ಳೆಯ ನಡುವೆ ಯಾರ ಕಡೆ ನಿಲ್ಲುತ್ತಾರೆ ಅನ್ನೋದು ಮಹತ್ವವಾಗಿತ್ತು. ಕೊಹ್ಲಿಯ ಮನಸ್ಸು ಶಾಸ್ತ್ರಿಯ ಪರ ಮಿಡಿಯುತ್ತಿದ್ರೂ ಕೂಡ ಸಚಿನ್ ಕುಂಬ್ಳೆ ಪರ ನಿಂತಿದ್ದರಿಂದ ಕೊಹ್ಲಿ ಮರು ಮಾತಾಡಲಿಲ್ಲ ಎನ್ನಲಾಗಿದೆ. ಅಲ್ಲದೇ ಕೊಹ್ಲಿ ಕೂಡ ಕುಂಬ್ಳೆಯ ಪರ ನಿಲ್ಲೋದಕ್ಕೆ ಸಚಿನ್ ಪ್ರಮುಖ ಕಾರಣವಾಗಿದ್ದಾರೆ.
ಇಷ್ಟಕ್ಕೂ ಕೋಚ್ ಆಯ್ಕೆಯಾಗಿದೆ. ಅದರಲ್ಲೂ ಕನ್ನಡಿಗನಿಗೆ ಮುಖ್ಯ ಸ್ಥಾನಮಾನ ದೊರಕಿದೆ. ಇವೆಲ್ಲದರ ಹಿಂದೆ ಅನಿಲ್ ಕುಂಬ್ಳೆಯ ಸಾಧನೆಯ ನೆರಳಿದೆ. ಅವರು ಆಟಗಾರನಾಗಿ, ನಾಯಕನಾಗಿ ಮಿಂಚಿರುವಂತೆ ಕೋಚ್ ಆಗಿಯೂ ಯಶಸ್ವಿಯಾಗಲಿ ಅನ್ನೋದೆ ಕೋಟ್ಯಾಂತರ ಭಾರತೀಯರ ಆಶಯ.
- ಶ್ರೀ
POPULAR STORIES :
ಭಾರತೀಯ ಕ್ರಿಕೆಟ್ ದಿಗ್ಗಜರ ಎಜುಕೇಷನಲ್ ಕ್ವಾಲಿಫಿಕೇಷನ್‍ನ ಡೀಟೇಲ್ಸ್..!
ಮನೆ ಖರೀದಿಗೆ ಲೋನ್ ಬೇಕೇ????ಎಚ್ಚರ!!!!
ಅಪಘಾತ ಆಗಿದ್ದು 2009ರಲ್ಲಿ, 50,18,979 ರೂಪಾಯಿ ಸಿಕ್ಕಿದ್ದು 2016ರಲ್ಲಿ!
ಹುಡುಗಿಯರಿಗೂ ಅಂಟಿತೇ ರ‍್ಯಾಗಿಂಗ್ ರೋಗ..?? ಹೆಣ್ಣಿಗೆ ಹೆಣ್ಣೇ ಶತ್ರುವಾದಳೇ.?
ಕಬಾಲಿಗೆ ಕನ್ನಡದಲ್ಲಿ ಟಾಂಗ್ ಕೊಡುವ ಸಿನಿಮಾ ಯಾವುದು.?
ಕಾರ್ಮಿಕ ನಿದ್ರೆ ಮಾಡಿದ್ದಕ್ಕೆ ಬಟ್ಟೆ ಬಿಚ್ಚಿ ಹೊಡೆದ ಅವಿವೇಕಿ ಅಧಿಕಾರಿ..!
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!