ನಮ್ಮ ಹುಟ್ಟನ್ನು ನೆನಪಿಸುತ್ತಾ,ಏರುತ್ತಿರೋ ನಮ್ಮ ವಯಸ್ಸಿನ ಬಗ್ಗೆ ನಮ್ಮನ್ನು ಅಲರ್ಟ್ ಮಾಡೋ ಒಂದು ವಿಶೇಷವಾದ ದಿನ ಈ ಬರ್ತ್ ಡೇ.ಕ್ಯಾಂಡಲ್ ನ್ನು ಫೂ ಫೂ ಮಾಡೋದ್ರಿಂದ ಆರಂಭಿಸಿ ಕೇಕ್ ಕಟ್ ಮಾಡೋ ತನಕ ಎಲ್ಲಾ ಅವರವರ ಆಡಂಭರಕ್ಕೆ ನಿಲುಕಿದ ವಿಷಯ..ಹಲವು ಫೇನ್ಸಿ ಕ್ಯಾಂಡಲ್ಗಳು,ಕೇಕುಗಳು ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತದೆ.ನಿಜ! ಎಲ್ಲಾನೂ ಆಡಂಬರಕ್ಕೇನೋ ಚಂದ ಆದ್ರೆ ಆರೋಗ್ಯದ ವಿಷಯಕ್ಕೆ ಬಂದಾಗ ಅಲ್ಲಿದೆ ಸಮಸ್ಯೆ.ಇದಕ್ಕೆ ಸಂಬಂಧಿಸಿ ಇಲ್ಲಿರೋ ಒಂದು ವೀಡಿಯೋದಿಂದ ನಮಗೆ ಹೆಚ್ಚಿನ ಮಾಹಿತಿ ಲಭ್ಯ.
ಬರ್ತ್ ಡೇ ದಿನ ಕೇಕ್ ಮೇಲಿರೋ ಕ್ಯಾಂಡಲ್ ನ್ನು ಊದಲು ಒಬ್ಬಾತ ತಿರಸ್ಕರಿಸುತ್ತಾನೆ.ಇದು ಮೇಲ್ನೋಟಕ್ಕೆ ತಮಾಷೆಯಂತೆ ತೋರಿಬಂದರೂ ಇದ್ರಲ್ಲಿ ಅಡಗಿರೋ ವಿಷಯದ ಬಗ್ಗೆ ಕೂಲಂಕುಷ ವಿವರ ತಿಳ್ಕೊಳ್ಳಲೇಬೇಕು.
ಅಮೇರಿಕಾದ ಪ್ರಸಿದ್ದ ಕ್ಲೆಮನ್ ಯೂನಿವರ್ಸಿಟಿ ನಡೆಸಿರೋ ಅಧ್ಯಯನ ಪ್ರಕಾರ ಬರ್ತ್ ಡೆ ಕ್ಯಾಂಡಲ್ ಊದಿದ ಮೇಲೆ ಕೇಕ್ ಮೇಲೆ ಬ್ಯಾಕ್ಟೀರಿಯಾ ತೀವ್ರವಾಗಿ ಹೆಚ್ಚುತ್ತಿರುವುದು ಸಾಬೀತಾಯಿತು.ಪ್ರತೀ ಬಾರಿ ನೀವು ಫೂ ಫೂ ಮಾಡಿದಾಗ ನಿಮ್ಮ ಎಂಜಲು ಕ್ಯಾಂಡಲ್ ಮೇಲೆ ಬೀಳುತ್ತಿರುತ್ತದೆ,ಬ್ಯಾಕ್ಟೀರಿಯದ ಬೆಳವಣಿಗೆಗೆ ದಾರಿ ಮಾಡಿಕೊಟ್ಟಂಗೆ ಇದು ಅಲ್ಲವೇ??ಕೇಕ್ ತಿನ್ನೋವ್ರಿಗೆ ದೇವ್ರೇ ಗತಿ ಅನ್ನೊ ತರ ಪ್ರತ್ಯೊಬ್ಬನೂ ತನ್ನ ಶರೀರದ ಗೇಟ್ ನ್ನು ಹಲವು ತರನಾದ ರೋಗಾಣುಗಳ ಎಂಟ್ರಿಗೆ ಓಪನ್ ಮಾಡಿದಂಗೆ .
Australia National Health And Welfare Council ಈ ಸಂಬಂಧವಾಗಿ ಜನರಿಗೆ ಎಚ್ಚರಿಕೆಯನ್ನು ನೀಡಿದೆ.
ಅದಕ್ಕೆ ನಿಮಗೊಂದು ಟಿಪ್ಸ್ ..ಬರ್ತ್ ಡೆ ದಿನ ನಿಮ್ಮ ಬಾಯಿ ಮುಚ್ಚಿ ಕೈಗೆ ಕೆಲ್ಸ ಕೊಡಿ.ಕ್ಯಾಂಡಲ್ ನ್ನು 2 ಕೈಗಳನ್ನು ಬೆಸೆದು ಆರಿಸಿ,ಕೇಕ್ ಹಂಚಿ,ಬರ್ತ್ ಡೆ ಸಂಭ್ರಮಿಸಿ.
- ಸ್ವರ್ಣಲತ ಭಟ್
POPULAR STORIES :
ಇನ್ಮುಂದೆ ಶಾಲೆಗಳಿಗೆ ಕಟ್ಟಬೇಕಿಲ್ಲ ಲಕ್ಷಗಟ್ಟಲೆ ಡೊನೇಷನ್..!
ನೀವು ಫೇಸ್‍ಬುಕ್‍ನಲ್ಲಿ ಫೇಮಸ್ಸಾದ್ರೆ ಸುಲಭದಲ್ಲಿ ಸಾಲ ಸಿಗುತ್ತೆ..!
ಇಟ್ಟರೆ ಸಗಣಿಯಾದೆ, ತಟ್ಟಿದರೆ ಬೆರಣಿಯಾದೆ..ಮೂತ್ರ ಹೊಯ್ದರೆ ಬಂಗಾರವಾದೆ..! #Gold in Cow
ಹಾಳಾಗಿ ಹೋಗ್ತೀಯಾ…! ಕೊಳ್ಳೇಗಾಲ ಅಂದಾಕ್ಷಣ ಸಿಎಂ ಕಾಲ್ಕಿತ್ತಿದ್ದು ಯಾಕೆ..?
ಹುಡುಗಿಯರಿಗೆ ಕಿರುಕುಳ ಕೊಡ್ತಿದ್ದ 420ಗೆ ಧರ್ಮದೇಟು..! ಹೆಂಗಿದ್ದಾ ಹೆಂಗಾದ? ಬೇಕಿತ್ತಾ ಪಾಪಿ ನಿನಗಿದು?
ಗ್ರೇಟ್ ಖಲಿಯ ಶಿಷ್ಯನನ್ನು ಸೋಲಿಸಿದ ಹರ್ಭಜನ್ ಸಿಂಗ್..!
ವೆಂಕಟ್ ಗೆ ಮತ್ತೆ ಹುಚ್ಚು ಹಿಡೀತಾ? ಹುಚ್ಚ ವೆಂಕಟ್ ರಮ್ಯಾಗೆ ಎನಂದ್ರು ಗೊತ್ತಾ..?