No menu items!
11.1 C
Munich
Wednesday, April 29, 2026

ನಿಮ್ಮ ದೇಹದಲ್ಲಿ ಈ ಗುಣಗಳಿದ್ರೆ ಎಚ್ಚರ! ಮುಂದೆ ಬರಬಹುದು ದೊಡ್ಡ ಖಾಯಿಲೆ

Must read

ನಿಮ್ಮ ದೇಹದಲ್ಲಿ ಈ ಗುಣಗಳಿದ್ರೆ ಎಚ್ಚರ! ಮುಂದೆ ಬರಬಹುದು ದೊಡ್ಡ ಖಾಯಿಲೆ

 

ನಮ್ಮ ಶರೀರ ಒಂದು ರಹಸ್ಯದ ಗೂಡು. ಅದರ ಒಳಗೆ ಏನೇನು ಕಾರ್ಯಗಳು ನಡೆಯುತ್ತವೆ ಎಂಬುದು ನಮಗೆ ತಿಳಿಯುವುದಿಲ್ಲ. ಆದರೆ ನಮಗೆ ಏನೋ ತೊಂದರೆಯಾಗಲಿದೆ ಎಂದಾಗ, ಅದರ ಮುನ್ಸೂಚನೆಯನ್ನು ಶರೀರ ನಮಗೆ ಮೊದಲೇ ಕೊಡುತ್ತದೆ. ನಾವು ಅದನ್ನು ಗಮನಿಸಿರೋದಿಲ್ಲ. ಶರೀರದಲ್ಲಿ ಉಂಟಾಗುವ ಕೆಲವು ಬದಲಾವಣೆಗಳು, ಲಕ್ಷಣಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಅದು ಮುಂದೆ ದೊಡ್ಡ ಖಾಯಿಲೆಯಾಗಿ ಬದಲಾಗಬಹುದು.

 

ಅಂತಹ ಖಾಯಿಲೆಯ ಪೈಕಿ ಕ್ಯಾನ್ಸರ್ ಕೂಡ ಒಂದು.

ಕ್ಯಾನ್ಸರ್ ನ ಪ್ರಮುಖ ಲಕ್ಷಣಗಳು

  1. ತೂಕ ಇಳಿಕೆ

ನಿಮ್ಮ ತೂಕ ಬಹುಬೇಗ ಇಳಿಯುತ್ತಿದ್ದಲ್ಲಿ ಇದು ಕ್ಯಾನ್ಸರ್ ಆಗಿರಬಹುದು. ಮೇದೋಜೀರಕ ಗ್ರಂಥಿ, ಹೊಟ್ಟೆ, ಅನ್ನನಾಳ ಅಥವಾ ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣವಾಗಿರಬಹುದು.

  1. ದೇಹದಲ್ಲಿ ಊತ ಅಥವಾ ಗಂಟು

ಶರೀರದ ಯಾವುದೇ ಭಾಗದಲ್ಲಿ ಊತ ಅಥವಾ ಗಂಟುಗಳಾದರೆ ಅದನ್ನು ನಿರ್ಲಕ್ಷಿಸಬೇಡಿ. ಇದು ಹೊಟ್ಟೆ, ಎದೆ ಅಥವಾ ವೃಷಣದಲ್ಲಿ ಗಂಟಾಗುವುದು ಕ್ಯಾನ್ಸರ್ ಗೆ ಕಾರಣವಾಗಬಹುದು.

  1. ಕಫ

ಮತ್ತೆ ಮತ್ತೆ ಕಫ ಆಗುವುದು ಕೂಡ ಕ್ಯಾನ್ಸರ್ ನ ಲಕ್ಷಣವಾಗಿದೆ. ಒಮ್ಮೆ ನಿಮಗೆ 3-4 ವಾರ ಕಫ ಮುಂದುವರೆದಲ್ಲಿ ಅದನ್ನು ನಿರ್ಲಕ್ಷ್ಯಿಸಬೇಡಿ. ಯಾವಾಗಲೂ ಕಫ ಆಗುವುದು, ಕಫದ ಜೊತೆ ರಕ್ತ ಹೋಗುವುದು, ಉಸಿರಾಡಲು ತೊಂದರೆಯಾಗುವುದು ಮುಂತಾದವೆಲ್ಲ ಲಂಗ್ ಕ್ಯಾನ್ಸರ್ ನ ಮುನ್ಸೂಚನೆಯಾಗಿದೆ.

  1. ಮಚ್ಚೆ / ಕಲೆಗಳಲ್ಲಿ ಬದಲಾವಣೆ

ನಮ್ಮ ಶರೀರದಲ್ಲಿರುವ ಮಚ್ಚೆ ಅಥವಾ ಕಲೆಗಳಲ್ಲಿನ ಬದಲಾವಣೆ ಚರ್ಮದ ಕ್ಯಾನ್ಸರ್ ಗೆ ಕಾರಣವಾಗಬಹುದು. ಹೊಸ ಮಚ್ಚೆಗಳು ಶರೀರದಲ್ಲಿ ಕಾಣಿಸಿದರೆ ಅಥವಾ ಮಚ್ಚೆಯ ಆಕಾರ, ಬಣ್ಣದಲ್ಲಿ ವ್ಯತ್ಯಾಸ ಕಾಣಿಸಿದರೂ ಅದನ್ನು ನಿರ್ಲಕ್ಷಿಸಬೇಡಿ.

  1. ಮೂತ್ರದಲ್ಲಿ ರಕ್ತ

ಮೂತ್ರದಲ್ಲಿ ರಕ್ತ ಹೋಗುವುದು ಕರುಳಿನ ಕ್ಯಾನ್ಸರ್ ಅಥವಾ ಕಿಡ್ನಿ ಕ್ಯಾನ್ಸರ್ ನ ಸಂಕೇತವಾಗಿದೆ. ಹಾಗಾಗಿ ನಿಮಗೆ ಮೂತ್ರದ ಸಮಸ್ಯೆ ಅಥವಾ ಮಲದ ಸಮಸ್ಯೆ ಇದ್ದಲ್ಲಿ ಮೊದಲು ಪರೀಕ್ಷಿಸಿಕೊಳ್ಳಿ.

ಮತ್ತೆ ಮತ್ತೆ ಮಲ, ಮೂತ್ರ ವಿಸರ್ಜನೆ ಆಗುತ್ತಿದ್ದರೆ ಅದನ್ನು ಕೂಡ ಕಡೆಗಣಿಸಬೇಡಿ. ಇದರಿಂದ ಹೊಟ್ಟೆಯ ಕೆಳಭಾಗದಲ್ಲಿ ನೋವು ಕಾಣಿಸುತ್ತದೆ. ಪುರುಷರಲ್ಲಿ ಇದು ಪ್ರೊಸ್ಟೇಟ್ ಕ್ಯಾನ್ಸರ್ ಆಗಿ ಬದಲಾಗಬಹುದು.

  1. ನೋವು

ಕೆಲವು ವಾರಗಳ ಕಾಲ ಶರೀರದಲ್ಲಿ ನೋವು ಇದ್ದರೆ ಅದು ಕ್ಯಾನ್ಸರ್ ಆಗಿರಬಹುದು. ಸಂಶೋಧನೆಯ ಪ್ರಕಾರ ಇಂತಹ ನೋವುಗಳು ಕ್ಯಾನ್ಸರ್ ಗೆ ಸಂಬಂಧಪಡುತ್ತದೆ. ಕ್ಯಾನ್ಸರ್ ಆರಂಭ ಹಂತದಲ್ಲಿ ಗಡ್ಡೆಗಳು, ಮೂಳೆಗಳು, ನರಗಳು ಮತ್ತು ಇತರ ಅಂಗಗಳ ಮೇಲೆ ಒತ್ತಡ ಹಾಕುತ್ತದೆ. ಅದರಿಂದ ನೋವುಗಳು ಕಾಣಿಸಿಕೊಳ್ಳುತ್ತೆ.

  1. ಎದೆ ಉರಿ

ನಿಮಗೆ ಯಾವಾಗಲೂ ಎದೆಯಲ್ಲಿ ಉರಿಯ ಅನುಭವ ಆಗುತ್ತಿದ್ದರೆ ಅದು ಹೊಟ್ಟೆಯ ಅಥವಾ ಗಂಟಲಿನ ಕ್ಯಾನ್ಸರ್ ಇರಬಹುದು.

  1. ಆಹಾರ ನುಂಗಲು ತೊಂದರೆ

ಆಹಾರ ನುಂಗಲು ತೊಂದರೆಯಾಗುತ್ತಿದ್ದರೆ ಅಥವಾ ಆಹಾರ ಮತ್ತೆ ಮತ್ತೆ ಗಂಟಲಿನಲ್ಲಿ ಸಿಕ್ಕಿಬಿದ್ದರೆ ಅದು ಅನ್ನನಾಳದ ಕ್ಯಾನ್ಸರ್ ನ ಮೊದಲ ಹಂತವಾಗಿರಬಹುದು.

  1. ರಾತ್ರಿ ಬೆವರುವುದು

ರಾತ್ರಿ ಮಲಗಿದಾಗ ಬೆವರುವುದು ಕೂಡ ಕ್ಯಾನ್ಸರ್ ಆಗಬಹುದು. ಇದು ಲಿಂಫೋಮಾದ ಸ್ಥಿತಿಯಾಗಿದೆ. ಈ ತರಹದ ಕ್ಯಾನ್ಸರ್ ದುಗ್ಧರಸ ವ್ಯವಸ್ಥೆಯಲ್ಲಾಗುತ್ತದೆ. ಇದು ದೇಹದಾದ್ಯಂತ ಇರುವ ರಕ್ತನಾಳ ಮತ್ತು ಗ್ರಂಥಿಗಳಿಗೆ ಪಸರಿಸುತ್ತದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article