ದಿನಬೆಳಗಾದ್ರೆ, ಯಾರನ್ನೇ ನೋಡಿ..ಎಲ್ಲಾರೂ ಸರಕಾರವನ್ನು ಬಯ್ಯುವವರೆ..ಅದ್ರಲ್ಲೂ ಸೋಷಿಯಲ್ ಮೀಡಿಯಾ ವಿಚಾರಕ್ಕೆ ಬಂದ್ರಂತೂ ಮುಗಿದೇ ಹೋಯ್ತು..ಟೀಕೆಗಳೋ ಟೀಕೆಗಳು…ಅಬ್ಬಬ್ಬಾ..ಒಂದಲ್ಲ.. ಎರಡಲ್ಲ ಬರೊಬ್ಬರಿ ಮಾಡಿದ 10 ಪೋಸ್ಟ್ ನಲ್ಲಿ 8 ಪೋಸ್ಟ್ ಗಳು ಇಂತಹುದೆ ಆಗಿರುತ್ತದೆ..ಅದು ಟ್ವಿಟ್ಟರ್ ಆಗಿರ್ಲಿ ಅಥವಾ ಫ಼ೇಸ್ ಬುಕ್ ಪೋಸ್ಟ್ ಆಗಿರ್ಲಿ,ಸರಕಾರವನ್ನು ತೀರಾ ನೆಗೆಟಿವ್ ಅಭಿಪ್ರಾಯಗಳ ಹಾದಿಯಲ್ಲಿ ನಿಲ್ಲಿಸಿಬಿಡುತ್ತಾರೆ.ಇನ್ನು ನ್ಯೂಸ್ ಚಾನೆಲ್ ಗಳೋ ಇಂತಹ ವಿಚಾರದಲ್ಲಿ ಸಿಗೋ ಅವಕಾಶಕ್ಕಾಗೇ ಕಾಯುತ್ತಿರುತ್ತಾರೆ.
ಎಷ್ಟು ದಿನಾಂತ ಇದನ್ನೆಲ್ಲಾ ಸಹಿಸಿ ಕೂರೋಕೆ ಸಾಧ್ಯ ನೀವೆ ಹೇಳಿ? ತಾಳ್ಮೆಗೂ ಒಂದು ಮಿತಿ ಇಲ್ವೇ? ಇವೆಲ್ಲ ವಿಷ್ಯವನ್ನು ಗಮನದಲ್ಲಿಟ್ಟು ಮಹಾರಾಷ್ಟ್ರ ಸರಕಾರ ಒಂದು ಯೋಜನೆಯನ್ನು ರೂಪಿಸಿದೆ.ಅದೇನೆಂದು ಬಲ್ಲಿರಾ? ಸ್ಪೆಷಲ್ ಮೋನಿಟರಿಂಗ್ ಸೆಲ್,ಎಂಬ ವಿಶೇಷ ಸೇವೆ. ಇದರನ್ವಯ ಯಾರು ಸರಕಾರವನ್ನು ನಿಂದಿಸುತ್ತಾರೋ ಅಂತಹವರನ್ನು ಪತ್ತೆ ಹಚ್ಚಿ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು.
ಈ ಸೋಷಲ್ ಮೀಡಿಯಾ ವಿಂಗ್, ಎಲ್ಲಾ ರೀತಿಯ ಪೊಸ್ಟ್ ಗಳು,ಮಾಧ್ಯಮದ ವೆಬ್ಸೈಟ್ಸ್ ಗಳು,ಬ್ಲಾಗ್ ಗಳಿಂದಲೂ,ಹಾಗೂ ಮಾಧ್ಯಮದ ವ್ಯಾಪ್ತಿಯಲ್ಲಿ ಒಳಪಡುವ ಎಲ್ಲಾ ಫೀಡ್ ಬ್ಯಾಕ್ಸ್ ಹಾಗೂ ಪೋಸ್ಟ್ ಗಳತ್ತ ತನ್ನ ಹದ್ದಿನ ಕಣ್ಣನ್ನು ಇರಿಸುವುದು.
ಇದರ ಮೂಲಕ ಸರಕಾರವು ತನ್ನ ಬಗ್ಗೆ ಮೂಡುವ ಎಲ್ಲಾ ನೆಗೆಟಿವ್ ಕಮೆಂಟ್ಸ್ ಗಳನ್ನು ಬಲವಾಗಿ ನಿಯಂತ್ರಿಸಬಹುದು ಎಂದು ಅಭಿಪ್ರಾಯ ಪಟ್ಟಿದೆ.ಯಾರಾದ್ರೂ ಸರಕಾರದ ಬಗ್ಗೆ ಟೀಕಿಸಿದ ತಕ್ಷಣ,ಸೆಲ್ ತಕ್ಷಣ ಪ್ರತಿಸ್ಪಂದಿಸುತ್ತದೆ ಹಾಗೂ ಸರಕಾರದ ಘನತೆಯನ್ನು ಕಾಪಾಡುತ್ತದೆ.
ಈಗಾಗಲೇ ಮಹಾರಾಷ್ಟ್ರ ಸರಕಾರದ ಮುಖ್ಯ ಮಂತ್ರಿಯಾಗಿರೋ ದೇವೇಂದ್ರ ಫಡ್ನಾವೀಸ್ ,ಕೇಂದ್ರದಲ್ಲಿ ಇದನ್ನು ಪರಿಚಯಿಸಿದ್ದಾರೆ.ಇದೊಂದು ವಿಶೇಷವಾದ EMMC (Electronic Media Monitoring ceter) ಸೇವೆ ಯಾಗಿದ್ದು ದಿನದ 24 ಘಂಟೆಯೂ ಸುಮಾರು 600 ಮಾಧ್ಯಮ ಕ್ಕೆ ಸಂಬಂಧಿಸಿದ ಚಾನೆಲ್ಗಳ ಮೇಲೆ ನಿಗಾವಹಿಸಿ ಅದನ್ನು ತನ್ನ ನಿಯಂತ್ರಣದಲ್ಲಿಡುತ್ತದೆ.ಇದಲ್ಲದೆ,New Media Wing ಇದ್ದು,ಇದು ವಿಶೇಷವಾಗಿ ವೆಬ್ ಸೈಟ್ ಗಳಲ್ಲಿರೋ ಜನಸಾಮಾನ್ಯರ ಅಭಿಪ್ರಾಯಗಳನ್ನು ತಿಳಿಯಲು ರೂಪಿಸಲ್ಪಟ್ಟಿದೆ. ಮೋದಿಜೀಯವರ ಸರಕಾರವು ವೆಬ್ ಮಾಹಿತಿಗೆ ಸಂಬಂದಿಸಿದಂತೆ New Media Analytics Center ಎಂಬ ಹೊಸ ಸೇವೆಯನ್ನು ಆರಂಭಿಸೋ ಯೋಜನೆಯಲ್ಲಿದೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ಫಡ್ನಾವೀಸ್ ಈ ಯೋಜನೆ ಕಾರ್ಯರೂಪಕ್ಕೆ ತರಲು ಸುಮಾರು 1.5 ಕೋಟಿ ವೆಚ್ಚಕ್ಕಾಗಿ ರಾಜ್ಯ ಸರಕಾರದ ಹಣಕಾಸು ಇಲಾಖೆಗೆ,ಮನವಿ ಸಲ್ಲಿಸಿದ್ದಾರೆ.ಈ ಮನವಿಯನ್ವಯ ಕೇಬಲ್ ಟೆಲಿವಿಷನ್ ನೆಟ್ವರ್ಕ್ ಆಕ್ಟ್ ಗೆ ಒಳಪಟ್ಟಂತೆ,ಯಾರಾದರೂ ನಿಬಂಧನೆಯನ್ನು ತಳ್ಳಿಹಾಕಿದಲ್ಲಿ, ರಾಜ್ಯ ಸರಕಾರಕ್ಕೆ ಯಾವುದೇ ಟಿ.ವಿ ಚಾನೆಲ್ ಗಳ ಮೇಲೆ ಕ್ರಮ ಕೈಗೊಳ್ಳಲು ಅವಕಾಶವಿರುವುದು.ರಾಜ್ಯಹಣಕಾಸು ಇಲಾಖೆಯ ಸೆಕ್ರೆಟರಿ ಹಾಗೂ ಹಣಕಾಸು ಮಂತ್ರಿಗಳು ಈ ಮನವಿಯನ್ನು ಈಗಾಗಲೇ ಶಾಸಕಾಂಗದ ಮುಂದಿಟ್ಟಿದ್ದಾರೆ.
ಸರಕಾರದ ವಿರುದ್ದ ಯಾವುದೇ ನಕಾರತ್ಮಕ ಅಭಿಪ್ರಾಯಗಳು ಕಂಡ ತಕ್ಷಣ ಅದರ ವಿರುದ್ದ,ತ್ವರಿತ ಎಚ್ಚರಿಕೆಗಳನ್ನು ಪೋಸ್ಟ್,ಪ್ರೆಸ್ಸ್ ನೋಟ್ಸ್ ಹಾಗೂ ಆಡಿಯೋ ಕ್ಲಿಪ್ಸ್ ಗಳ ಮೂಲಕ ನೀಡಲಾಗುತ್ತದೆ ಹಾಗೂ ಅಗತ್ಯ ವಿದ್ದಲ್ಲಿ ಈ ನೆಗೆಟಿವ್ ಅಭಿಪ್ರಾಯಗಳನ್ನು ಸಂಬಂಧ ಪಟ್ಟ ಮಂತ್ರಿಗಳಿಗೆ ಹಾಗೂ ಸೆಕ್ರೆಟರಿಗಳಿಗೆ ಕಳುಹಿಸಲಾಗುವುದು.
ನಿಜಕ್ಕೂ ಒಂದು ಅದ್ಭುತ ಬದಲಾವಣೆ..ಅಬ್ಬಬ್ಬಾ..ಇನ್ಮುಂದೆಯಾದ್ರೂ ಸರಕಾರದ ಬಗೆಗಿನ ಟೀಕೆ ಟಿಪ್ಪಣಿಗಳಿಗೆ ಅಂತ್ಯ ಕಾಣಬಹುದೇ????
- ಸ್ವರ್ಣಲತ ಭಟ್
POPULAR STORIES :
ನನ್ ಮಗಂದ್… ನೀರ್‍ದೋಸೆ ಬ್ಯಾನ್ ಆಗ್ಬೇಕ್ ಅಷ್ಟೇ….!! ಯಾಕೆ ಗೊತ್ತಾ..?
ಮೆಟ್ರೋ ಸುರಂಗ ಮಾರ್ಗದಲ್ಲಿ ಭೂ ಕುಸಿತ…!
ನೇತಾಡುತ್ತಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ದಂಪತಿ
ನಿಜವಾದ ಪ್ರೀತಿಗೆ ಸಾವಿಲ್ಲವಂತೆ.. ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ..!
ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಫೇಸ್‍ಬುಕ್‍ನಲ್ಲಿ ಮುಖ್ಯಮಂತ್ರಿಗಳ ರಾಜೀನಾಮೆ..!!
ಮಹಿಳೆಯರೆ… ಸ್ಮೋಕ್ ಮಾಡ್ತಾ ಇದೀರಾ…! ಹುಷಾರ್…!
ಅಬ್ಬಾ.. ಈ ವಿಡಿಯೋ ನೋಡಿದ್ರೆ ಕರಳು ಚುರುಕ್ ಅನ್ನತ್ತೆ..!