ಇನ್ಮುಂದೆ ಈಮೇಲ್ ಐಡಿಗಳು ನಮ್ಮ ದೇಶೀಯ ಭಾಷೆಗಳಲ್ಲಿ..! ಕನ್ನಡದಲ್ಲೂ ಈ ಮೇಲ್ ಐಡಿ ಕ್ರಿಯೇಟ್ ಮಾಡಬಹುದಂತೆ..!!

0
54

ಪ್ರತಿಯೊಬ್ಬ ವ್ಯಕ್ತಿಯೂ ಇಂದಿನ ಕಾಲದಲ್ಲಿ ಈ ಮೇಲ್ ಐಡಿಯಿಂದ ಪರಿಚಿತನಾಗಿದ್ದಾನೆ.ಇದನ್ನು ಹೊಂದಿರದ ವ್ಯಕ್ತಿಗಳು ತೀರಾ ಬೆರಳೆಣಿಕೆ ಮಾತ್ರವೇನೋ..ಆದ್ರೆ ಅದೇ ಐಡಿಯನ್ನು ನಾವು ನಮ್ಮ ಭಾಷೆಯಲ್ಲಿ ಪಡೆಯುವಂತಿದ್ದರೆ?ನಮಗಾಗಿ ದೇಸೀ ಈಮೇಲ್ ಐಡಿ.ಹೇಗಿರುತ್ತದೆ? ಊಹಿಸಿದ್ದೀರಾ? ಇಂಗ್ಲೀಷ್ ಗೊತ್ತಿಲ್ಲದವರಿದ್ರೂ ನಮ್ಮ ಭಾಷೆ ಗೊತ್ತಿಲ್ಲದ ಜನ ಇರಲಾರರು. ಹೌದು ನಿಮ್ಮ ಈ ಕನಸಿನ ಪ್ರಪಂಚ ವಾಸ್ತವದತ್ತ ಮುಖ ಮಾಡಿ ನಿಂತಿದೆ ನೋಡಿ.ಇಂಗ್ಲೀಷ್ ಬಾರದ ಕಾರಣ ಅಂತರ್ಜಾಲದ ಕಡೆಗೆ ತಿರುಗಿ ನೋಡದ ಮಂದಿಗಳಿಗೆ ಇದೊಂದು ಉತ್ತಮ ಅವಕಾಶ.
ನಿಜ..ಅತೀ ಶೀಘ್ರದಲ್ಲಿ ನೀವು ಹಿಂದಿ, ಕನ್ನಡ, ತೆಲುಗು ಇನ್ನುಳಿದ ದೇಶೀ ಲಿಪಿಯಲ್ಲಿ ನಿಮ್ಮ ಐಡಿ ಕ್ರಿಯೇಟ್ ಮಾಡಬಹುದು.ಸರಕಾರವು ಈ ನಿಟ್ಟಿನಲ್ಲಿ ಬ್ರಹತ್ ಈ ಮೇಲ್ ಸೇವೆ ನೀಡುವ ಕಂಪನಿಗಳಾದ ರೆಡಿಫ್,ಮೈಕ್ರೋಸಾಫ್ಟ್ ಹಾಗೂ ಗೂಗಲ್ ಜೊತೆ ಮಾತುಕತೆಯಲ್ಲಿದೆ.
ನಮಗೆ ಒದಗಿದ ದಾಖಲೆಗಳ ಪ್ರಕಾರ,ರೀಜನಲ್ ಭಾಷೆಯಲ್ಲಿ ಐಡಿ ರೂಪಿಸುವ ಅಧಿಕಾರವು ಮಿನಿಸ್ಟ್ರಿ ಆಫ್ ಇಲೆಕ್ಟ್ರೋನಿಕ್ಸ್ ಮತ್ತು ಟೆಲಿ ಕಮ್ಯೂನಿಕೇಷನ್ ಬಳಿ ಇರುವುದು,ನಿಮಗೆ ನಿಮ್ಮ ಐಡಿ ತಯಾರಿಸಲು ಒಂದು ನಿಮಿಷವೂ ಬೇಕಾಗಿಲ್ಲ ಎಂದು ಹೇಳಿದಲ್ಲಿ ಅಚ್ಚರಿ ಎನಿಸದಿರದು ಅಲ್ಲವೇ?
ಈ ಯೋಜನೆಗೆ ಭಾರತ್ ನೆಟ್ ಎಂದು ಹೆಸರಿಡಲಾಗಿದೆ.ಇದು ಸುಮಾರು 2,50,000 ಗ್ರಾಮ ಪಂಚಾಯತ್ ಗಳನ್ನು ಸಂಪರ್ಕದಲ್ಲಿರಿಸುತ್ತದಲ್ಲದೆ,ಅವರಿಗೆ ತ್ವರಿತ ಗತಿಯ ಇಂಟರ್ ನೆಟ್ ಸೌಲಭ್ಯವನ್ನು ಒದಗಿಸುವುದು.ಆಂಗ್ಲ ಭಾಷೆಯಲ್ಲಿ ಟೈಪ್ ಮಾಡಲು ಅಸಾಧ್ಯವಾದಲ್ಲಿ ಅವರಿಗೆ ಅವರ ಸ್ಥಳೀಯ ಭಾಷೆಯ ಸೌಲಭ್ಯವನ್ನೂ ನೀಡಲಾಗುತ್ತದೆ.
ಇದಕ್ಕೆ ಸಂಬಂಧ ಪಟ್ಟ ಕುಂದು ಕೊರತೆಗಳನ್ನು ನಿವಾರಿಸಲು,ಇಲೆಕ್ಟ್ರೋನಿಕ್ಸ್ ಮತ್ತು ಟೆಲಿಕಮ್ಯೂನಿಕೇಷನ್ ಮಿನಿಸ್ಟ್ರೀಸ್ ನ ಜಂಟಿ ಕಾರ್ಯದರ್ಶಿಯಾಗಿರೋ ರಾಜೀವ್ ಬನ್ಸಾಲ್ ಒಂದು ಮೀಟಿಂಗ್ ಏರ್ಪಡಿಸಿದ್ದಾರೆ.
ಕೆಲವೊಂದು ಟೆಕ್ ಕಂಪನಿಗಳು ಈ ಯೋಜನೆಯ ವಿರುದ್ದ ನಿಂತಿದೆ,ಅವರು ನೀಡುವ ಮಾಹಿತಿಯನ್ವಯ,ಈ ತರಹದ ಸೇವೆಯಿಂದ ಯಾವ ಉಪ್ಯೋಗವೂ ಇಲ್ಲ ಯಾಕಂದ್ರೆ,ಇಂತಹ ಭಾಷೆಯ ತಂತ್ರಜ್ನಾನವನ್ನು ಈಗಾಗಲೇ ಹಲವು ಮೊಬೈಲ್ ಹಾಗೂ ವೆಬ್ ಗಳಲ್ಲಿ ಅಳವಡಿಸಲಾಗಿದೆ.ಈವಾಗ ಗೂಗಲ್ ನ್ನೇ ನೋಡಿದಲ್ಲಿ ಇದು ಇತರ 10 ಭಾಷೆಗಳಿಗೆ ಅವಕಾಶ ಕಲ್ಪಿಸಿ ಕೊಟ್ಟಿದ್ದಲ್ಲದೆ ಅದಕ್ಕೆ ಕೀಬೊರ್ಡ್ ಸೇವೆಯನ್ನೂ ಕಲ್ಪಿಸಿದೆ.ಇನ್ನು ಮೈಕ್ರೋಸೋಫ್ಟ್ ವಿಚಾರದಲ್ಲಿ ಹೇಳುವುದಾದರೆ,ಅಲ್ಲಿರೋ ಬ್ರೌಸರ್ ನಲ್ಲಿ ಸಾಕಷ್ಟೂ ಪ್ರಮಾಣದ ರೀಜನಲ್ ಭಾಷೆಗಳಿಗೆ ಅವಕಾಶ ನೀಡಲಾಗಿದೆ.
ರೆಡಿಫ಼್ ನ ಸಿ.ಇ.ಒ ಆಗಿರೋ ಅಜಿತ್ ಬಾಲಕೃಷ್ಣನ್ ಪ್ರಕಾರ “ನಮ್ಮ ಸ್ಥಳೀಯ ಭಾಷೆಗಳಲ್ಲಿ ಈಮೇಲ್ ವಿಳಾಸಕ್ಕೆ ಅವಕಾಶ ಒದಗಿಸುವುದು ಒಂದು ಸುಂದರವಾದ ವಿಚಾರ ವಾಗಿದೆ,ಆದ್ರೆ ಸರಕಾರವು ಇದರ ವೆಚ್ಚವನ್ನು ಮೊದಲು 50 ರೂಗಳೀಗೆ ಇಳಿಸಿದಲ್ಲಿ ಇದು ಅನೇಕರನ್ನು ತಲಪಲು ಒಂದು ಸುಲಭವಾದ ಸಾಧನವಾಗಿ ಮಾರ್ಪಡುವುದು ಎಂದು ಹೇಳುತ್ತಾರೆ.
ಇನ್ನು ಗೂಗಲ್ ಮತ್ತು ಮೈಕ್ರೋಸಾಫ಼್ಟ್ ಅಂತೂ ಲ್ಯಾಟಿನ್ ಭಾಷೆಯನ್ನು ಹೊರತು ಪಡಿಸಿ ಹಿಂದಿಯನ್ನೊಳಗೊಂಡಂತೆ ಇನ್ನೂ ಅನೇಕ ಭಾಷೆಗಳಿಗೆ ತನ್ನ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ.
ಭಾರತ್ ನೆಟ್ ಸಂಪರ್ಕ ಸಾಧ್ಯವಾದಲ್ಲಿ ಇದಕ್ಕಿಂತ ಉತ್ತಮ ಸಂಪರ್ಕ ಸೇವೆ ಇನ್ಯಾವುದೂ ಇರಲಾರದು ಅಲ್ಲವೇ????

  • ಸ್ವರ್ಣಲತ ಭಟ್

POPULAR  STORIES :

ಹುಷಾರ್ ಇನ್ಮುಂದೆ ಸರಕಾರವನ್ನು ಟೀಕಿಸುವಂತಿಲ್ಲ..!

ನನ್ ಮಗಂದ್… ನೀರ್‍ದೋಸೆ ಬ್ಯಾನ್ ಆಗ್ಬೇಕ್ ಅಷ್ಟೇ….!! ಯಾಕೆ ಗೊತ್ತಾ..?

ಮೆಟ್ರೋ ಸುರಂಗ ಮಾರ್ಗದಲ್ಲಿ ಭೂ ಕುಸಿತ…!

ನೇತಾಡುತ್ತಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ದಂಪತಿ

ನಿಜವಾದ ಪ್ರೀತಿಗೆ ಸಾವಿಲ್ಲವಂತೆ.. ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ..!

ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಫೇಸ್‍ಬುಕ್‍ನಲ್ಲಿ ಮುಖ್ಯಮಂತ್ರಿಗಳ ರಾಜೀನಾಮೆ..!!

ಮಹಿಳೆಯರೆ… ಸ್ಮೋಕ್ ಮಾಡ್ತಾ ಇದೀರಾ…! ಹುಷಾರ್…!

ಅಬ್ಬಾ.. ಈ ವಿಡಿಯೋ ನೋಡಿದ್ರೆ ಕರಳು ಚುರುಕ್ ಅನ್ನತ್ತೆ..!

ಅರ್ನಬ್ ಗೋಸ್ವಾಮಿ ವಿರುದ್ದ 500 ಕೋಟಿ ರೂ ದಾವೆ ಹೂಡಿದ ಝಾಕೀರ್…!

ಮೊಬೈಲ್ ಫೋನ್ ಚಾರ್ಜ್ ಗೆ ಇಟ್ಟಿರುವಾಗ ಬ್ಲಾಸ್ಟ್ ಆಗಬಹುದು ಹುಷಾರ್…!

LEAVE A REPLY

Please enter your comment!
Please enter your name here