ಒಂದು ಸ್ವಲ್ಪ ನೀವೆಲ್ಲಾ ಯೋಚಿಸಿ ಕ್ಯಾಮರಾವನ್ನು ಕಂಡು ಹಿಡಿಯದೇ ಇದ್ದರೆ..? ಛಾಯಾಚಿತ್ರ ಎಂಬುದು ಇಲ್ಲದೇ ಇದ್ರೆ ನಮ್ಮ ಜೀವನ ಹೇಗೆ ಇರುತ್ತಿತ್ತು ಅಂತಾ..? ಆಧುನಿಕ ಯುಗ ಎಂಬುದು ಜನರ ಅರಿವಿಗೇ ಬರುತ್ತಿರಲಿಲ್ಲವೇನೋ.. ಛಾಯಾಗ್ರಹಣ ಎಂಬುದು ಇಂದಿನ ಮಾಯಾಲೋಕದ ಅದ್ಭುತ ಸಂವಹನ ಎಂದರೆ ತಪ್ಪಾಗಲಾರದು ಬಿಡಿ.
ಒಂದು ಅತ್ಯತ್ತಮ ಛಾಯಾಚಿತ್ರ ನೂರು ಪದಗಳಿಗೆ ಸಮ ಎನ್ನುತ್ತಾರೆ ಅದು ಸತ್ಯಾನೆ ಅಲ್ವಾ..? ಒಂದು ಉತ್ತಮ ಛಾಯಾಚಿತ್ರದ ಕೆಳಗೆ ವಿವರಣೆ ನೀಡುವುದೇ ಬೇಡ. ಆ ಚಿತ್ರದ ವಿವರಣೆಯನ್ನ ಚಿತ್ರವೇ ಹೇಳಿಕೊಳ್ಳತ್ತದೆ. ಅದು ಒಂದು ಉತ್ತಮ ಛಾಯಾಚಿತ್ರಕ್ಕಿರುವ ಶಕ್ತಿ. ಕೆಲವರಿಗೆ ತಮ್ಮ ತಮ್ಮ ಚಿತ್ರಗಳನ್ನ, ಅಥವಾ ಇನ್ಯಾದೇ ವಿಶಿಷ್ಟವಾದ ಛಾಯಾಚಿತ್ರಗಳನ್ನು ಫೇಸ್‍ಬುಕ್‍ಗಳಿಗೋ ಅಥವಾ ವಾಟ್ಸಾಪ್‍ಗಳಲ್ಲೋ ಹಾಕಿಕೊಳ್ಳದೇ ಇದ್ದರೆ ಅವರಿಗೆ ಅಂದು ನಿದ್ರೆನೇ ಬರೊಲ್ವೇನೋ..? ಅಂತಹ ಶಕ್ತಿ ಇದೆ ಈ ಫೋಟೋಗ್ರಫಿಯಲ್ಲಿ.
ಅಂದ ಹಾಗೆ ಆಗಸ್ಟ್ 19 ಅಂದರೆ ಇಂದು ವಿಶ್ವದಾದ್ಯಂತ ವಿಶ್ವ ಛಾಯಾಚಿತ್ರ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನವನ್ನು ಹುಟ್ಟು ಹಾಕಿದ ಕೋರ್ಕೆ ಆರ್ ಎಂಬಾತ “ಫೋಟೋಗ್ರಫಿಗೆ ಒಂದು ಪ್ರಭಾವ ಶಾಲಿ ಕಥೆಯನ್ನು ಹೇಳುವ ಶಕ್ತಿ ಇದೆ ಎಂಬುದು ನನ್ನ ಭಾವನೆ. ಒಂದು ಚಿತ್ರ ಸ್ಪೂರ್ತಿ ನೀಡ ಬಲ್ಲದು ಹಾಗೂ ವಿಶ್ವದ ಬದಲಾವಣೆಗೆ ನಾಂದಿ ಹಾಡಬಲ್ಲದು ಎಂದು ಹೇಳಿದ್ದಾನೆ. ಸತ್ಯಾನೆ ಅಲ್ವಾ ಈ ಮಾತುಗಳು..
ಇನ್ನು ವಿಶ್ವದ ಅನೇಕ ಪ್ರಖ್ಯಾತ ಛಾಯಾಗ್ರಾಹಕರು ಹಗಲಿರುಳು ಎನ್ನದೇ ದಟ್ಟ ಅರಣ್ಯ ಪ್ರದೇಶದಲ್ಲಿ ಸಾವನ್ನೂ ಲೆಕ್ಕಿಸದೇ ಅದ್ಭುತ ಚಿತ್ರಗಳನ್ನು ಸೆರೆ ಹಿಡಿಯಲು ವಾರಗಟ್ಟಲೇ ಕಾದು ಕುಳಿತಿರುತ್ತಾರೆ. ಈ ಸಮಯದಲ್ಲಿ ಅವರನ್ನೂ ನಾವು ಸ್ಮರಿಸಲೇ ಬೇಕು ಹಾಗು ಅವರು ತೆಗೆದ ವಿಶಿಷ್ಟ ಚಿತ್ರಗಳು ನಿಮಗೂ ತೋರಿಸಲು ನಾವು ಬದ್ಧರಾಗಿದ್ದೇವೆ. ಇಗೋ ಇಲ್ಲಿದೆ ನೋಡಿ ಹವ್ಯಾಸಿ ಛಾಯಾಗ್ರಾಹಕರು ತೆಗೆದ ಅತ್ಯುತ್ತಮದಲ್ಲಿ ಉತ್ತಮ ಛಾಯಾಚಿತ್ರಗಳು.
Phot credit : shivashankar banagar, srinivas shamachar, manjunath bhat, manjunath hegde.