ಹೈದರಾಬಾದ್ ನ ಚಿತ್ತೂರಿ ಸಾಯಿ ಗುಣನಿಧಿ ಪೃಥ್ವಿ ರಾಜ್ ಎಂಬವರು ತನ್ನ ಸಾಕ್ಷ್ಯ ಚಿತ್ರವೊಂದನ್ನು 15 ಭಾಷೆಗಳಿಗೆ ಡಬ್ಬಿಂಗ್ ಮಾಡಿ ಗಿನ್ನೆಸ್ ದಾಖಲೆಯನ್ನು ನಿರ್ಮಿಸಿದ್ದಾರೆ.ಇವರ ಮುಖ್ಯ ಉದ್ದೇಶವು ಭಾರತದಲ್ಲಿ ಐತಿಹಾಸಿಕ ಸ್ಮಾರಕಗಳ ಬಗ್ಗೆ ಅರಿವು ಮೂಡಿಸುವುದಾಗಿದೆ. ಆನ್ ಲೈನ್ ಟೀಚಿಂಗ್ ನಲ್ಲಿ ಗಿನ್ನೆಸ್ ದಾಖಲೆ ಸ್ಥಾಪಿಸಿದ್ದ ಡಾ! ಸುಬ್ರಮಣಿಯನ್,ಹಾಗೂ ಮಲ್ಟೀ ಮೀಡಿಯಾದಲ್ಲಿ ದಾಖಲೆ ನಿರ್ಮಿಸಿರೋ ವಾರಣಾಸಿಯ ಡಾ! ಜಗದೀಶ್ ಪಿಳ್ಳೆಯವರು, ರಾಜ್ ಅವರ ಈ ಪ್ರಯತ್ನಕ್ಕೆ ಸಹಕಾರವಿತ್ತವರು.ರಾಜ್ ಅವರು ಹೈದರಾಬಾದ ನ ದಂತ ವೈದ್ಯರಾದ ಡಾ! ರವಿಕುಮಾರ್ ಹಾಗೂ ಡಾ! ಮಾಧವಿ ಯವರ ಪುತ್ರ.
ಸಾಕ್ಷ್ಯ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಷಕ ನಾಗಿರೋ ಈ ಪೃಥ್ವೀ ರಾಜ ಅವರು 8 ನಿಮಿಷದ “ಸಾರಾನಾಥ್ – ದಿ ಸೇಕ್ರೆಡ್ ಪ್ಲೇಸ್” ಅನ್ನೋ ಸಾಕ್ಷ್ಯ ಚಿತ್ರವನ್ನು ಬಿಡುಗಡೆ ಮಾಡಿದರು.
ಇದಕ್ಕೂ ಮೊದಲು ಲೇಪಾಕ್ಷಿ ಅನ್ನುವ 11 ಭಾಷೆಗಳ ಡಬ್ಬಿಂಗ್ ನ್ನು 2014 ರಲ್ಲಿ ಆಂಧ್ರ ಪ್ರದೇಶದವರಾದ ರಾಜೇಂದ್ರ ವಿನೋದ್ ಅವರು ಬಿಡುಗಡೆ ಮಾಡಿದ್ದರು ಎಂದು ಡಾ! ಸುಬ್ರಮಣಿಯನ್ ಹೇಳುತ್ತಾರೆ.
ಸಾರಾನಾಥ್ ಎಂಬುದೊಂದು ಉತ್ತರ ಪ್ರದೇಶದಲ್ಲಿರೋ ಒಂದು ಧಾರ್ಮಿಕ ಸ್ಥೂಪ ವಾಗಿರುವುದಲ್ಲದೆ ಯಾತ್ರಾರ್ಥಿಗಳು ಅತ್ಯಧಿಕ ಸಂಖ್ಯೆಯಲ್ಲಿ ಭೇಟಿ ನೀಡುವ ಒಂದು ಬೌದ್ದ ದೇವಾಲಯವಾಗಿದೆ.
ಈ ಸಾಕ್ಷ್ಯ ಚಿತ್ರವನ್ನು ಇಂಗ್ಲೀಷ್,ಮಲಯಾಳಂ,ಗುಜರಾಥಿ,ಉರ್ದು,ಹಿಂದಿ,ತಮಿಳು,ಕನ್ನಡ,ತೆಲುಗು,ಅರೇಬಿಕ್,ಒರಿಯಾ,ಅಸ್ಸಾಮೀಸ್,ಭೋಜ್ಪುರಿ,ಖೋರ್ತ,ಬಾಂಗ್ಲಾ ಹಾಗೂ ಮಾರಿಶಿಯನ್ ಕ್ರೆವೋಲೆ( ಫ಼್ರೆಂಚ್ ಆಧಾರಿತ ಭಾಷೆ)ಗಳಲ್ಲಿ ಡಬ್ಬಿಂಗ್ ಮಾಡಲಾಗಿದೆ.
POPULAR STORIES :
ಪಬ್ಲಿಕ್ ಪ್ಲೇಸ್‍ನಲ್ಲೇ ಸೆಕ್ಸ್ ಮಾಡಿ ಸಿಕ್ಕಿಬಿದ್ದ ಹಾಲಿವುಡ್ ಸೆಲೆಬ್ರೆಟಿ…!
ಫೇಸ್‍ಬುಕ್‍ನಲ್ಲಿ ಲೈವ್ ಸಾಹಸ ಪ್ರದರ್ಶನ ತೋರಿಸಲು ಹೋಗಿ ಹೆಣವಾದ..!
ಈ ವೃದ್ದ ಸನ್ಯಾಸಿಯ ದೀರ್ಘಾಯುಷ್ಯದ ಸೀಕ್ರೇಟ್ ಏನು ಗೊತ್ತಾ…?
ನಿದ್ರೆ ಬಿಟ್ಟು ಜಿಯೋ 4ಜಿ ಫ್ರೀ ಸಿಮ್ ಪಡೆಯುತ್ತಿದ್ದಾರೆ ಗ್ರಾಹಕರು..!
ಟೆಸ್ಟ್ ನಲ್ಲಿ ಪಾಕ್ ನಂ1 ಪಟ್ಟ: ಕೋಹ್ಲಿಯನ್ನು ಲೇವಡಿ ಮಾಡಿದ ಪಾಕ್ ಅಭಿಮಾನಿಗಳು
ಬೆಳ್ಳಿತಾರೆ ಸಿಂಧು ಜೊತೆ ಜಾಹಿರಾತು ಒಪ್ಪಂದಕ್ಕಾಗಿ ಕಂಪನಿಗಳ ಪರೇಡ್..!
ಸುಲಭವಾಗಿ ಸಾಗಿಸಲು ಹೆಣದ ಮೂಳೆ ಮುರಿದು ಮುದ್ದೆ ಮಾಡಿದ್ದರು…!
ಲೈಫ್‍ನಲ್ಲಿ ಹೇಗೆ ಡಿಸಿಪ್ಲಿನ್ ಕಾಪಾಡೋದು,,? ಸ್ವಲ್ಪ ಜಪಾನಿಯರನ್ನ ನೋಡಿ..!