ಅಥ್ಲೀಟ್‍ಗಳನ್ನು ಶಿಕ್ಷೆಗೊಳಪಡಿಸುವಲ್ಲಿ ಕೊರಿಯಾ ದೇಶದ್ದು ಮುಗೀತು, ಈಗ ಮತ್ತೊಂದು ದೇಶದ ಸರದಿ…!

Date:

ನಮ್ಮ ದೇಶಕ್ಕೆ ಈ ಬಾರಿಯ ರಿಯೋ ಒಲಿಂಪಿಕ್ಸ್ ನಲ್ಲಿ ಬಂದ ಒಟ್ಟು ಮೆಡಲ್ 2. ಆದರೆ ಅವರ ಭವ್ಯ ಸ್ವಾಗತ ಇಡೀ ವಿಶ್ವವೇ ನಾಚುವಂತಿತ್ತು. ಅದೆಷ್ಟೂ ಕ್ರೀಡಾಪಟುಗಳು ಭಾರತೀಯ ಅಥ್ಲೀಟ್‍ಗಳಿಗೆ ನೀಡಿದ ರೀತಿಯಲ್ಲೇ ನಮಗೂ ಭವ್ಯ ಸ್ವಾಗತ ನೀಡ್ಬೋದೇನೋ..? ಎನ್ನುವ ಆಸೆಗಳಟ್ಟಿದ್ದರೇನೋ? ಗೊತ್ತಿಲ್ಲ.. ಆದ್ರೆ ಉತ್ತರ ಕೊರಿಯಾ ದೇಶದ ಕ್ರೀಡಾಪಟುಗಳ ಭವ್ಯ ಸ್ವಾಗತ ಬೇರೆಯ ತರದ್ದೇ ಆಗಿತ್ತು… ಈ ಬಾರಿಯ ರಿಯೋ ಒಲಂಪಿಕ್‍ನಲ್ಲಿ ಪದಕ ಗೆಲ್ಲದ ಅಥ್ಲೀಟ್‍ಗಳಿಗೆ ಗಣಿಗಳಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿಸೋ ಅಮಾನವೀಯ ವರ್ತನೆಯನ್ನು ಮಾಡಿತ್ತು. ಇಂತಹ ಕಟುವಾದ ನಿಲುವುಗಳಿಂದ ಇಡೀ ವಿಶ್ವವೇ ನಿಬ್ಬೆರಗಾಗಿಸುಂತೆ ಈ ದೇಶ ನಿರ್ಧಾರ ಕೈಗೊಂಡಿತ್ತು. ಇದು ಎಲ್ಲರಿಗೂ ಗೊತ್ತಿರೋ ವಿಷ್ಯ..! ಆದ್ರೆ ಇದೇ ರೀತಿಯಲ್ಲಿ ಇನ್ನೋಂದು ದೇಶ ತನ್ನ ಕ್ರೂರ ಮುಖವನ್ನ ತೋರ್ಸಿದೆ ನೋಡಿ… ಆ ದೇಶ ಬೇರ್ಯಾವ್ದೂ ಅಲ್ಲ.. ಇದೇ ಜಿಂಬಾಂಬ್ವೆ…!
ಈ ರಾಷ್ಟ್ರದ ಅಧ್ಯಕ್ಷರಾದ ರಾಬರ್ಟ್ ಮುಗಾಬೆ ಈ ಬಾರಿಯ ರಿಯೋ ಒಲಂಪಿಕ್‍ನಲ್ಲಿ ತಮ್ಮ ದೇಶಕ್ಕೆ ಪದಕ ತಂದುಕೊಡದ ಅಥ್ಲೀಟ್‍ಗಳಿಗೆ ಒಂದು ಘೋರ ಶಿಕ್ಷೆಯನ್ನು ನೀಡಿದ್ದಾರೆ..! ಅದು ಏನಪ್ಪಾ ಅಂದ್ರೆ.. ಅವರೆಲ್ಲರಿಗೂ ಜೈಲು ಶಿಕ್ಷೆ..!
ಹೌದು.. ಈ ಬಾರಿಯ ರಿಯೋ ಒಲಂಪಿಕ್‍ನಲ್ಲಿ ತೀರಾ ಕಳಪೆ ಮಟ್ಟದಲ್ಲಿ ಆಟವಾಡಿ ಪದಕ ಗೆಲ್ಲದ ಅಥ್ಲೀಟ್‍ಗಳನ್ನು ಬಂಧಿಸುವಂತೆ ರಿಬಬ್ಲಿಕ್‍ನ ಜನರಲ್ ಪೊಲೀಸ್ ಕಮೀಷನರ್ ಆಗಸ್ಟೀನ್ ಚಿಹುರಿ ಅವರಿಗೆ ಆದೇಶ ನೀಡಿದ್ದು, ಎಲ್ಲಾ ಅಥ್ಲೀಟ್‍ಗಳನ್ನು ಹರಾರೆ ಅಂತರಾಷ್ಟ್ರಿಯ ವಿಮಾನ ನಿಲ್ದಣಕ್ಕೆ ಬಂದ ಕೂಡಲೇ ಬಂಧಿಸಿ ಎಂದು ಆದೇಶ ಹೊರಡಿಸಿದ್ದಾರೆ.
ಈ ಬಾರಿಯ ರಿಯೋ ಒಲಂಪಿಕ್‍ಗೆ ಜಿಂಬಾಂಬ್ವೆ ದೇಶದ ಪ್ರತಿನಿಧಿಗಳಾಗಿ 31 ಅಥ್ಲೀಟ್‍ಗಳನ್ನು ಕಳುಹಿಸಿಕೊಟ್ಟಿದ್ದು, ಮೆಡಲ್ ಇರ್ಲಿ ಯಾವೊಬ್ಬ ಆಥ್ಲೀಟ್ ಕೂಡ ಟಾಪ್ 8ರ ಸ್ಥಾನವನ್ನೂ ಸಹ ಗಿಟ್ಟಿಸಿಕೊಂಡಿರಲಿಲ್ಲ.ಈ ಕಾರಣದಿಂದಾಗಿ ಅಲ್ಲಿನ ಅಧ್ಯಕ್ಷ ಅಥ್ಲೀಟ್‍ಗಳ ನಡವಳಿಕೆಯನ್ನು ಹಗುರವಾಗಿ ಪರಿಗಣಿಸದೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅಧ್ಯಕ್ಷ ರೋಬರ್ಟ್ ನಮ್ಮ ದೇಶ ಅಥ್ಲೀಟ್‍ಗಳೆಂಬ ಇಲಿಗಳಿಗೆ ಹಣ ವ್ಯರ್ಥ ಮಾಡಿದ್ದೇವೆ. ಕಂಚು ಅಥವಾ ಹಿತ್ತಾಳೆ ಪದಕ ಹೋಗಲೀ ಅವರು ಟಾಪ್ 4ನೇ ಅಥವಾ 5ನೇ ಸ್ಥಾನವನ್ನೂ ಪಡೆಯಲೂ ಅಶಕ್ತರಾಗಿದ್ದಾರೆ. ನೆರೆಯ ರಾಷ್ಟ್ರ ಬೋಟ್ವಾನಾ ದೇಶ ಮಾಡಿದ ಸಾಧನೆಯ ಶೇ.1 ರಷ್ಟೂ ಕೂಡ ನಮ್ಮವರು ಮಾಡಲಿಲ್ಲ. ಇಂತಹ ಅಥ್ಲೀಟ್‍ಗಳಿಗಾಗಿ ನಮ್ಮ ದೇಶ ಕೊಟಿಗಟ್ಟಲೇ ಹಣ ವ್ಯರ್ಥ ಮಾಡಿದ್ದೇವೆ ಎಂದು ಆರೋಪಿಸಿದ್ದಾರೆ.

POPULAR  STORIES :

ಪಬ್ಲಿಕ್ ಪ್ಲೇಸ್‍ನಲ್ಲೇ ಸೆಕ್ಸ್ ಮಾಡಿ ಸಿಕ್ಕಿಬಿದ್ದ ಹಾಲಿವುಡ್ ಸೆಲೆಬ್ರೆಟಿ…!

ಫೇಸ್‍ಬುಕ್‍ನಲ್ಲಿ ಲೈವ್ ಸಾಹಸ ಪ್ರದರ್ಶನ ತೋರಿಸಲು ಹೋಗಿ ಹೆಣವಾದ..!

ಈ ವೃದ್ದ ಸನ್ಯಾಸಿಯ ದೀರ್ಘಾಯುಷ್ಯದ ಸೀಕ್ರೇಟ್ ಏನು ಗೊತ್ತಾ…?

ನಿದ್ರೆ ಬಿಟ್ಟು ಜಿಯೋ 4ಜಿ ಫ್ರೀ ಸಿಮ್ ಪಡೆಯುತ್ತಿದ್ದಾರೆ ಗ್ರಾಹಕರು..!

ಟೆಸ್ಟ್ ನಲ್ಲಿ ಪಾಕ್ ನಂ1 ಪಟ್ಟ: ಕೋಹ್ಲಿಯನ್ನು ಲೇವಡಿ ಮಾಡಿದ ಪಾಕ್ ಅಭಿಮಾನಿಗಳು

ಬೆಳ್ಳಿತಾರೆ ಸಿಂಧು ಜೊತೆ ಜಾಹಿರಾತು ಒಪ್ಪಂದಕ್ಕಾಗಿ ಕಂಪನಿಗಳ ಪರೇಡ್..!

ಸುಲಭವಾಗಿ ಸಾಗಿಸಲು ಹೆಣದ ಮೂಳೆ ಮುರಿದು ಮುದ್ದೆ ಮಾಡಿದ್ದರು…!

ಲೈಫ್‍ನಲ್ಲಿ ಹೇಗೆ ಡಿಸಿಪ್ಲಿನ್ ಕಾಪಾಡೋದು,,? ಸ್ವಲ್ಪ ಜಪಾನಿಯರನ್ನ ನೋಡಿ..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...